ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ

ದಾವಣಗೆರ: ದಾವಣಗೆರೆಯಲ್ಲಿ ದಿನಾಂಕ 28-06-2021 ರ ಸೋಮವಾರದಂದು ದಾವಣಗೆರೆ ನಗರದ ರೆಡ್ ಕ್ರಾಸ್ ಭವನದಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯ ಸಹಭಾಗಿತ್ವದಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕತೆಯುಳ್ಳ ಪದಾರ್ಥಗಳ ರೇಷನ ಕಿಟ್ ನ್ನು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ವಿಶ್ವನಾಥ ಮುದಜ್ಜಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರೆಡ ಕ್ರಾಸ್ ಸಂಸ್ಥೆಯ ಛೇರ್ಮನರಾದ ಡಾ : ಎ. ಎಮ್. ಶಿವಕುಮಾರ್, ವೈಸ್ ಛೇರ್ಮನರಾದ ಡಿ.ಎಸ್. ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಡಿ.ಎಸ್. ಸಾಗರ, ನಿರ್ದೇಶಕರಾದ ಆನಂದಜ್ಯೊತಿ, ವಸಂತರಾಜು, ನರೇಂದ್ರಪ್ರಕಾಶ, ಡಿ.ಎನ್, ಶಿವಾನಂದ, ರವಿಕುಮಾರ್, ಡಾ : ಧನಂಜಯಮೂರ್ತಿ, ಶ್ರೀಕಾಂತ ಬಗರೆ, ಕರಿಬಸಪ್ಪ, ಕೊಟ್ರೇಶ, ಪೃಥ್ವಿ ಬಾದಾಮಿ, ರವೀಂದ್ರನಾಥ್, ಮಧುಕೇಶ್ವರ, ಜಿ.ಪಿ. ತೇಜಸ್, ಸಿ.ಎಮ್. ಹರ್ಷ, ಕೆ.ಪಿ. ವಿವೇಕಾನಂದ ಮತ್ತಿತ್ತರು ಉಪಸ್ಥಿತರಿದ್ದರು.