ಬೆಂಗಳೂರು: ನಗರದ ಶುಕ್ರವಾರ ಸಂಜೆ ಕರ್ನಾಟಕ ರಾಜ್ಯದ ವಲಯದ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಆಕ್ಸಿಸ್ ಬ್ಯಾಂಕ್ ನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಜರುಗಿದ 2023ನೇ ಸಾಲಿನ ಸೋಶಿಯಲ್ ಸರ್ವಿಸ್ (ಸೇವಾ ರತ್ನ) ಪ್ರಶಸ್ತಿಯನ್ನು ಈಶ್ವರ್ ರವರಿಗೆ ನೀಡಿ ಗೌರವಿಸಲಾಗಿದೆ.
ಭಾರತದ ಅತಿದೊಡ್ಡ ಬ್ಯಾಂಕೇತರ ಖಾಸಗಿ ವಲಯದ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂ.ಲಿಮಿಟೆಡ್ ಮತ್ತು ಆಕ್ಸಿಸ್ ಬ್ಯಾಂಕ್ ವತಿಯಿಂದ ಕೊಡಮಾಡುವ 2023 ನೇ ಸಾಲಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಡಾ.ಬಿ.ಕೆ.ರವಿ ರವರ ಮಾರ್ಗದರ್ಶನದಲ್ಲಿ ಪೂರ್ಣಾವಧಿ (ಪಿಎಚ್.ಡಿ) ಸಂಶೋಧನಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದು, ಈಶ್ವರ್ ರವರನ್ನು ಪತ್ರಿಕಾ ಕ್ಷೇತ್ರ ಹಾಗೂ ಶೈಕ್ಷಣಿಕ ಕ್ಷೇತ್ರದಿಂದ ಪರಿಗಣಿಸಿದೆಯೆಂದು ಕರ್ನಾಟಕ ಪ್ರಾದೇಶಿಕ ವಲಯದ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಆಕ್ಸಿಸ್ ಬ್ಯಾಂಕ್ ನ ಪ್ರದಾನ ವ್ಯವಸ್ಥಾಪಕರಾದ ಸುಧಾಕರ್ ಶೆಟ್ಟಿ ಮತ್ತು ಕೆ.ಪಿ.ಸಂಜು ಹಾಗೂ ತಂಡದವರ ಸಮ್ಮುಖದಲ್ಲಿ ಈಶ್ವರ್ ಗೆ ಸೋಶಿಯಲ್ ಸರ್ವಿಸ್ (ಸೇವಾ ರತ್ನ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇವರು ಹಲವಾರು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವಾರು ಯೋಜನೆಗಳಲ್ಲಿ ಅದರಲ್ಲೂ ಶೈಕ್ಷಣಿಕ, ಆರ್ಥಿಕ ವಲಯದಲ್ಲಿ ಮುನ್ನಲೆಗೆ ಬರಲು ಪ್ರಮುಖ ಈ ಯೋಜನೆಗಳನ್ನು ಕೊಡಿಸುವಲ್ಲಿ ಹಿಂದುಳಿದ ಸಮುದಾಯದಗಳಿಗೆ, ಬಡ ವಿದ್ಯಾರ್ಥಿಗಳಿಗೆ ವಿಶೇಷವಾಗಿ ದಲಿತ ಸಮುದಾಯದ ಪರವಾಗಿ ರಾಜ್ಯ ವ್ಯಾಪ್ತಿಯಲ್ಲಿ ಸಮಸ್ತ ವಿದ್ಯಾರ್ಥಿ ಸಮೂಹದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂಚೂಣಿಯಲ್ಲಿದ್ದಾರೆ.
