ಯುವತಿಯ ಮೊಬೈಲ್ ಕರೆ ವಿವರ ಸಂಗ್ರಹಿದ್ದ ಮೂವರು ಪೊಲೀಸರ ಅಮಾನತು

ಯುವತಿಯ ಮೊಬೈಲ್ ಕರೆ ವಿವರ ಸಂಗ್ರಹಿದ್ದ ಮೂವರು ಪೊಲೀಸರ ಅಮಾನತು

ಬೆಂಗಳೂರು : ಅಕ್ರಮವಾಗಿಮೊಬೈಲ್‌ ಕರೆಗಳ ವಿವರ ಸಂಗ್ರಹಿಸಿ, ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮೂವರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ ಸೂಪರಿಂಟೆಂಡೆಂಟ್ ಸುರೇಶ್, ಪೂರ್ವ ವಿಭಾಗದ ತಾಂತ್ರಿಕ ಘಟಕದ ಹೆಡ್‌ ಕಾನ್‌ಸ್ಟೆಬಲ್ ಸೋಮಶೇಖರ್ ಹಾಗೂ ಕಾನ್‌ಸ್ಟೆಬಲ್ ನಾಗರಾಜ್ ಅಮಾನತುಗೊಂಡವರಾಗಿದ್ದು, ಇವರು ಯುವತಿಯೊಬ್ಬರ ಮೊಬೈಲ್‌ ಕರೆಗಳ ವಿವರವನ್ನು (ಸಿಡಿಆರ್) ಸಂಗ್ರಹಿಸಿ ದುರುಪಯೋಗಪಡಿಸಿಡಿದ್ದರು.

ಯುವತಿ ನೀಡಿದ್ದ ದೂರಿನಡಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಮೂವರ ವಿರುದ್ಧ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಮೂವರನ್ನೂ ಅಮಾನತುಗೊಳಿಸಿ, ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ.

ಸೂಪರಿಂಟೆಂಡೆಂಟ್ ಸುರೇಶ್, ಈ ಹಿಂದೆ ಮಾಜಿ ಗೃಹ ಸಚಿವರೊಬ್ಬರ ಬಳಿ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಖಾಸಗಿ ವ್ಯಕ್ತಿಯೊಬ್ಬರು ಯುವತಿಯೊಬ್ಬರ ಕರೆಗಳ ವಿವರ ಸಂಗ್ರಹಿಸಲು ಮುಂದಾಗಿದ್ದರು. ಇದಕ್ಕಾಗಿ ಸುರೇಶ್ ಅವರನ್ನು ಸಂಪರ್ಕಿಸಿದ್ದರು. ಆಪ್ತರಾಗಿದ್ದ ಸೋಮಶೇಖರ್ ಹಾಗೂ ನಾಗರಾಜ್‌ ಅವರಿಗೆ ವಿಷಯ ತಿಳಿಸಿದ್ದ ಸುರೇಶ್, ಸಿಡಿಆರ್‌ ನೀಡುವಂತೆ ಹೇಳಿದ್ದರು.

ಸುರೇಶ್ ಮಾತಿಗೆ ಒಪ್ಪಿದ್ದ ಇಬ್ಬರೂ ಅಕ್ರಮವಾಗಿ ಸಿಡಿಆರ್ ತೆಗೆದು ಕೊಟ್ಟಿದ್ದರು. ಅದನ್ನೇ ಸುರೇಶ್, ಖಾಸಗಿ ವ್ಯಕ್ತಿಗೆ ನೀಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಯುವತಿ, ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರ ತನಿಖೆಯನ್ನು ಸಿಸಿಬಿಗೆ ವಹಿಸಲಾ ಗಿತ್ತು. ಮೂವರ ಮೇಲಿನ ಆರೋಪ ಸಾಬೀತಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!