ರಾಷ್ಟ್ರಕವಿ ಕುವೆಂಪು ರವರ ‘ಮನುಜ ಮತ ವಿಶ್ವಪಥ’ ಧ್ಯೇಯವಾಕ್ಯ ಸಾಕರಗೊಳಿಸಲು 77 ನೇ ಸ್ವಾತಂತ್ರ್ಯ ದಿನಾಚರಣೆಯಂದು ಸಂಕಲ್ಪ – ಸಚಿವ ಎಸ್ ಎಸ್ ಮಲ್ಲಿಕಾರ್ಜುನ

ದಾವಣಗೆರೆ: ದಿನಾಂಕ: 15-08-2023 ರಂದು 77 ನೇ  ಸ್ವಾತಂತ್ರೋತ್ಸವದ ದಿನಾಚರಣೆಯ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರು, ಕರ್ನಾಟಕ ಸರ್ಕಾರ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಎಸ್‌. ಮಲ್ಲಿಕಾರ್ಜುನ್ ಇವರಿಂದ ಸ್ವಾತಂತ್ರೋತ್ಸವದ ಸಂದೇಶ.

ದಾವಣಗೆರೆ ಜಿಲ್ಲೆಯ ಲೋಕಸಭಾ ಸದಸ್ಯರೇ,ವಿಧಾನ ಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರುಗಳೇ, ಮಹಾನಗರಪಾಲಿಕೆಯ ಮಹಾಪೌರರೇ, ಉಪಮಹಾಪೌರರೇ ಮತ್ತು ಸದಸ್ಯರುಗಳೇ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ

ಪೂರ್ವವಲಯದ ಪೊಲೀಸ್ ಮಹಾನಿರೀಕ್ಷಕರೆ,ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಯವರೇ,ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳೇ,ವಿವಿಧ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳೇ, ಸನ್ಮಾನಿತರ, ಅಧಿಕಾರಿ ಮಿತ್ತರ, ನೌಕರ ಬಾಂಧವರೆ,

ಸುದ್ದಿ ಮಾಧ್ಯಮದ ಬಂಧುಗಳೇ ಹಾಗೂ ನೆರೆದಿರುವ ದೇಶಾಭಿಮಾನಿಗಳಿಗೆ, ಎಲ್ಲಾ ವರ್ಗದ ಬಂಧುಗಳೇ ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುದ್ದು ಮಕ್ಕಳೇ, ನಿಮಗೆಲ್ಲರಿಗೂ ಸ್ವಾತಂತ್ರೋತ್ಸವದ ಹಾರ್ಧಿಕ ಶುಭಾಶಯಗಳು,

ಆಗಸ್ಟ್-15ರ ಈ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿವಸ ಭಾರತವನ್ನು ಬ್ರಿಟೀಷರ ವಾಸದಿಂದ ಮುಕ್ತಗೊಳಿಸಿದ ಅಗಸ್ಟ್-15 ಎಂದರೆ ಭಾರತೀಯರ ನರನಾಡಿಗಳಲ್ಲಿ, ಮಿಂಚು ಹರಿದು ಸಡಗರ ಸಂಭ್ರಮ ಪಡುವಂತಹ ದಿನ. ಈ ಸಡಗರ ಸಂಭ್ರಮ ಪಡುವುದರ ಹಿಂದೆ ನಮ್ಮ ಹಿರಿಯರು ಮಾಡಿರುವ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಾದಂತಹ ದಿನವೂ ಸಹ ಆಗಿದೆ.

ಸುಮಾರು ಮುನ್ನೂರು ವರ್ಷಗಳ ಕಾಲ ಬ್ರಿಟೀಷರ ದಾಸ್ಯದಲ್ಲಿದ್ದ ದೇಶವನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಪಂಡಿತ್‌ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯ್ ಪಟೇಲ್, ಗೋಪಾಲಕೃಷ್ಣ ಗೋಲೆ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಭಗತ್ ಸಿಂಗ್‌, ಸುಖದೇವ್‌, ರಾಜಗುರು ಮುಂತಾದವರು ನಡೆಸಿದ ಅವಿರತ ಹೋರಾಟದ ಫಲವಾಗಿ ದೇಶವು ಆಗಸ್ಟ್-15, 1947 ರಂದು ಸ್ವಾತಂತ್ರ್ಯ ಪಡೆಯುವಲ್ಲಿ ಸಫಲವಾಯಿತು. ಇಂತಹ ಮಹಾನೀಯರನ್ನು ಈ ಸುಸಂದರ್ಭದಲ್ಲಿ ನೆನೆಯುತ್ತ ಅವರಿಗೆ ನಮನಗಳನ್ನು ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ.

1942ರಲ್ಲಿ “ಬ್ರಿಟೀಷರೆ ಭಾರತ ಬಿಟ್ಟು ತೊಲಗಿ” ಚಳುವಳಿಯಲ್ಲಿ ದಾವಣಗೆರೆಯಲ್ಲಿ ನಡೆದ ಹೋರಾಟ ಅತ್ಯಂತ ಪ್ರಮುಖವಾದದು. ದಾವಣಗೆರೆ ನಗರದಲ್ಲಿನ ಹಳ್ಳೂರು ನಾಗಪ್ಪ, ಅಕ್ಕಸಾಲ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಇವರುಗಳು ಅಂದು ಬ್ರಿಟೀಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾಎಂದು ನೆನಪಿಸಿಕೊಳ್ಳುತ್ತ ಅವರಿಗೂ ಸಹ ನಮನಗಳನ್ನು ಸಲ್ಲಿಸೋಣ.

ಕರ್ನಾಟಕ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವನಾಗಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುಪಾರಿ ಸಚಿವನಾಗಿ ಈ ದಿನ ಧ್ವಜಾರೋಹಣ ಮಾಡುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಹಾಗೂ ಇದಕ್ಕೆ ಅನುವು ಮಾಡಿಕೊಟ್ಟಂತಹ ನಮ್ಮ ಜಿಲ್ಲೆಯ ಎಲ್ಲಾ ನಾಗರೀಕರಿಗೆ ಕೃತಜ್ಞತೆಗಳನ್ನು ತಿಳಿಸುತ್ತಾ ನಮ್ಮ ಸರ್ಕಾರ ಮತ್ತು ಜಿಲ್ಲೆಯ ಪ್ರಗತಿ ವರದಿಯನ್ನು ತಮ್ಮ ಮುಂದೆ ಇಡಬಯಸುತ್ತೇನೆ.

ನಮ್ಮ ನಿಮ್ಮೆಲ್ಲರ ಮೆಚ್ಚಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ನಮ್ಮ ನೂತನ ಸರ್ಕಾರ ಅಧಿಕಾರವಹಿಸಿಕೊಂಡ ನಂತರ ಆರ್ಥಿಕವಾಗಿ ಬಸವಳಿದು ಹೋಗಿದ್ದ ರಾಜ್ಯದ ಜನತೆಗೆ ಆರ್ಥಿಕ ಶಕ್ತಿಯನ್ನು ತುಂಬಬೇಕೆಂಬ ಮಹದುದ್ದೇಶದಿಂದ 5 ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ

ಭದ್ರಾ ನಾಲೆಯ ಮೂಲಕ ಈಗಾಗಲೇ ರೈತರಿಗೆ ಅನುಕೂಲವಾಗಲೆಂದು ನೀರನ್ನು ಹರಿಸಲಾಗಿರುತ್ತದೆ, ಅಲ್ಲದೇ, ಕೆರೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಈ ಹಿಂದೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಮುಂದೆಯು ರೈತರ ಕಲ್ಯಾಣಕ್ಕಾಗಿ ಹೆಚ್ಚು ಆಧ್ಯತೆಯನ್ನು ನೀಡಲಾಗುತ್ತದೆ.

“ವಿವಿಧ ಜಾತಿ-ಧರ್ಮ, ಮತ-ಪಂಥಗಳನ್ನು ಹೊಂದಿರುವ ಭಾರತ ವೈವಿದ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ತೋರಿದ ಮಹಾನ್ ದೇಶವಾಗಿದ್ದು, ಇಂತಹ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಸೌಹಾರ್ದಯುತವಾಗಿ ಬದುಕೋಣ ಹಾಗೂ ವಿಶಾಲ ಭಾವನೆಯಿಂದ ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ”

ರಾಷ್ಟ್ರಕವಿ ಕುವೆಂಪು ರವರ ‘ಮನುಜ ಮತ ವಿಶ್ವಪಥ’ ವೆಂಬ ಧೈಯವಾಕ್ಯವನ್ನು ಸಾಕಾರಗೊಳಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಹೇಳುತ್ತ ಮತ್ತೊಮ್ಮೆ ತಮ್ಮೆಲ್ಲರಿಗೂ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ನನ್ನ ಸಂದೇಶದ ನುಡಿಗಳಿಗೆ ನೀಡುತ್ತೇನೆ ಎಂದು ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ತಮ್ಮ ಸಂದೇಶ ತಿಳಿಸಿದರು.

ಎಲ್ಲರಿಗೂ ಒಳಿತಾಗಲಿ

ಜೈಕರ್ನಾಟಕ ಜೈಹಿಂದ್

Leave a Reply

Your email address will not be published. Required fields are marked *

error: Content is protected !!