ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು, ಕೆಲಸದ ಹೊರೆಯಿಂದ ಮುಕ್ತಿಗೊಳಿಸಲು ಮನವಿ
ದಾವಣಗೆರೆ : ಇಂದು ಡಿ.ಸಿ ಕಚೇರಿಯಲ್ಲಿ ಬಿ.ಎಲ್.ಓ ಗಳ ಕೆಲಸವು ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚು ಹೊರೆಯಾಗುತ್ತಿದೆ. ಈ ಕೆಲಸದಿಂದ ಅವರನ್ನು ವಿಮುಕ್ತಿ ಗೊಳಿಸುವ ಬಗ್ಗೆ ಡಿ.ಸಿ ಸಾಹೇಬರ ಗಮನಕ್ಕೆ ತರಲು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ವೀರೇಶ್ ಒಡೆಯನಪುರ್ ಇವರ ನೇತೃತ್ವದಲ್ಲಿ,
ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಾಲಾಕ್ಷ ಸರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ಮುಬಾರಕ್ ಸರ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ರಾಮಣ್ಣ ಸರ್ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀ ಸ್ವಾಮಿ.ಕೆ.ಎಂ.ಹೆಚ್ ಶ್ರೀಮತಿ ಕಲ್ಪನಾ .ಪ್ರಧಾನ ಕಾರ್ಯದರ್ಶಿಯಾದ ಶ್ರೀಗುರುಮೂರ್ತಿ ಸರ್ ಶ್ರೀ ರಂಗಸ್ವಾಮಿ ಸರ್, ಶ್ರೀ ಸಿದ್ದೀಶ್ ಸರ್, ಶ್ರೀ ನಾಗರಾಜ್ ಸರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಹೊಸ ಡಿ.ಸಿ.ಸಾಹೇಬರಾದ ಮಾನ್ಯ ಶ್ರೀ ವೆಂಕಟೇಶ್.ಸರ್ ರವರನ್ನು ನಮ್ಮ ದಾವಣಗೆರೆ ಜಿಲ್ಲೆಗೆ ಗೌರವಪೂರ್ವಕವಾಗಿ ಸ್ವಾಗತಿಸಿದೆವು. ಮತ್ತು ಮಾಜಿ ಡಿ.ಸಿ.ಸಾಹೇಬರಾದ ಮಾನ್ಯ ಶ್ರೀ ಶಿವಾನಂದ ಕಪಾಶಿಯವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಬೀಳ್ಕೊಡುಗೆಯನ್ನು ಸಲ್ಲಿಸಲಾಯಿತು.