ಕದ್ದ ಬೈಕ್ ಗಳಿಗೆ ಆರ್ ಸಿ ಮುದ್ರೆ ಒತ್ತಿದ ಆರ್ ಟಿ ಒ ಆಫೀಸರ್ಸ್.!  ಪ್ರಕರಣ ಪತ್ತೆಹಚ್ಚಿದ ಪೊಲೀಸ್

ಕದ್ದ ಬೈಕ್ ಗಳಿಗೆ ಆರ್ ಸಿ ಮುದ್ರೆ ಒತ್ತಿದ ಆರ್ ಟಿ ಒ ಆಫೀಸರ್ಸ್.!  ಪ್ರಕರಣ ಪತ್ತೆಹಚ್ಚಿದ ಪೊಲೀಸ್

ದಾವಣಗೆರೆ : ಸಾಮಾನ್ಯವಾಗಿ ಎಲ್ಲರೂ ದುಡಿಮೆ ಮಾಡಬೇಕೆಂದರೆ, ಬ್ಯಾಂಕ್ ನಲ್ಲಿ ಸಾಲ ಮಾಡುತ್ತೇವೆ ಅಥವಾ ಕೈಗಡ ತೆಗೆದುಕೊಳ್ಳುತ್ತೇವೆ..ಆದರೆ ಶೂನ್ಯ ಬಂಡವಾಳದಲ್ಲಿ ಕೈ ತುಂಬಾ ಹಣ ಮಾಡಿಕೊಳ್ಳುವ ಒಂದು ಗ್ಯಾಂಗ್ ಈಗ ಪೊಲೀಸರ ಕೈಗೆ ಸಿಕ್ಕಿದೆ.

ಶೀಘ್ರವೇ ಹಣ ಮಾಡಬೇಕು, ಐಷಾರಾಮಿಯಾಗಿ ಬದುಕ ಬೇಕೆಂಬ ಈ ಗ್ಯಾಂಗ್ ಮೊದಲು ಯೋಚನೆ ಮಾಡಿದ್ದು ಬೈಕ್ ಕಳ್ಳತನ. ಅದಾದ ಬಳಿಕ ಫೀಲ್ಡ್ ಗೆ ಇಳಿದ ಗ್ಯಾಂಗ್ ಸರಕಾರಿ ಆಸ್ಪತ್ರೆ, ತಾಲೂಕು ಕಚೇರಿ, ಬೃಹತ್ ಕಾರ್ಯಕ್ರಮಗಳ ನಡುವೆ ಲಗ್ಗೆ ಹಾಕುತ್ತವೆ. ನಂತರ ಸಮಯ ನೋಡಿ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡಿ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ತಾನೇ ಹಣ ಕೊಟ್ಟು ತೆಗೆದುಕೊಂಡು ಹೋಗುವ ರೀತಿಯಲ್ಲಿ ಹೋಗುತ್ತಾರೆ.

ಈ ಕಳ್ಳರ ಆಯ್ಕೆ ಕೇವಲ ಹೀರೋ ಹಾಗೂ ಹೋಂಡಾ ಕಂಪನಿಯ ಪ್ಯಾಷನ್, ಸ್ಪೆಂಡ್ಲರ್ ಬೈಕ್ ಗಳಾಗಿದ್ದು, ಹೊಸ ಬೈಕ್ ಗಳನ್ನು ಕದಿಯುವುದೇ ಇವರ ಮುಖ್ಯ ಅಜೆಂಡಾ… ಈ ಗ್ಯಾಂಗ್ ಬಳಿ ಮೊದಲೇ ನಕಲಿ‌‌ ಕೀಗಳು ಇದ್ದು, ಅವುಗಳ ಮೂಲಕ ವಾಹನ ಕದಿ ಯುತ್ತಿದ್ದರು. ಇದಾದ ಬಳಿಕ ಮೊದಲು ಏಜೆಂಟ್ ಸಂಪರ್ಕ ಮಾಡುತ್ತಿದ್ದರು.. ಆತ ಆರ್ ಟಿ ಒ ಅಧಿಕಾರಿಗಳನ್ನು ಸಂಪರ್ಕಿಸಿ ಅಲ್ಲಿನ ಸೂಪರಿಡೆಂಟ್ ಬಳಿ ಗಾಡಿ ನಂಬರ್ ನಮೂದಿಸಿ ಓರಿಜಿನಲ್ ಸಹಿ ರೀತಿಯಲ್ಲಿ 29-30 ನೇ ಫಾರಂಗೆ ಏಜೆಂಟ್ ಸೈನ್ ಮಾಡುತ್ತಿದ್ದ . ಇದನ್ನು ಸೂಪರಿಡೆಂಟ್ ಆರ್ ಟಿ ಒ ಗಿರೀಶ್ ಮಲ್ನಾಡ್ ಗೆ ಎಲ್ಲ ಫೈಲ್ ಗಳನ್ನು ಇಟ್ಟು ಸಹಿ ಮಾಡಿಕೊಳ್ಳುತ್ತಿದ್ದ.. ತನ್ನ ಕೆಳ ಸಿಬ್ಬಂದಿಗಳ ಮೇಲೆ ನಂಬಿಕೆ ಇದ್ದ ಕಾರಣ ಎಲ್ಲ ಫೈಲ್ ಗಳಿಗೆ ಸಹಿ ಹಾಕುತ್ತಿದ್ದರು..

ನಂತರ ಸಾರಿಗೆ ಇಲಾಖೆಯಿಂದ ಓರಿಜಿನಲ್ ಕಾರ್ಡ್ ಬರುತ್ತಿದ್ದು, ಅದನ್ನು ಏಜೆಂಟ್ ಪಡೆದುಕೊಂಡು ಐವತ್ತರಿಂದ ಆರವತ್ತು ಸಾವಿರ ರೂ.ಗೆ ಮಾರಾಟ ಮಾಡುವುದು ಇವರ ಕಾಯಕವಾಗಿತ್ತು. ಇದು ಮೊದಲ ಹಂತದ ಉಪಾಯವಾದರೆ, ಇನ್ನೊಂದು ಹಂತದಲ್ಲಿ ಸೂಪರಿಡೆಂಟ್ 29-30 ನೇ ಫಾರಂಗೆ ತಾನೇ ಸಹಿ ಮಾಡಿ ಒರಿಜಿನಲ್ ಆರ್ ಸಿ ಕಾರ್ಡ್ ಅನ್ನು ನೀಡುತ್ತಿದ್ದ. ಇನ್ನು ಕದ್ದ ಬೈಕ್ ಮಾರಾಟ ಮಾಡಿ ಬಂದ ಹಣವನ್ನು ಎಲ್ಲರೂ ಸಮಾನವಾಗಿ ಪಾಲು ಮಾಡಿಕೊಳ್ಳುತ್ತಿದ್ದರು.

ಕಳ್ಳ ಸಿಕ್ಕಿದ್ದು ಹೇಗೆ : ಮಾರ್ಚ್ 16ರಂದು ಪೊಲೀಸ್ ಠಾಣೆ ಸಮೀಪದ ಟಿ.ಬಿ. ಸರ್ಕಲ್ ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದಾಗ ಇಲ್ಲಿ ಕಳ್ಳತನವಾಗಿರುವ ಬೈಕ್‌ ದಾವಣಗೆರೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಇರುತ್ತದೆ. ಅಲ್ಲದೇ ದಾವಣಗೆರೆಯಲ್ಲಿ ಟ್ರಾಫಿಕ್ ಕಾಪ್ ಎಂದೇ ಹೆಸರು ಮಾಡಿರುವವರು ಸಿಟಿಯಲ್ಲಿ ಗಾಡಿಗಳ ತಪಾಸಣೆ ನಡೆಸುವ ವೇಳೆ ಬೈಕ್ ಸವಾರನೊಬ್ಬ ತನ್ನ ಒರಿಜಿನಲ್ ಕಾರ್ಡ್ ನ್ನು ತೋರಿಸುತ್ತಾನೆ.. ನಂತರ ಆ ಗಾಡಿ ನಂಬರ್ ನ್ನು ಯಂತ್ರಾಂಶದಲ್ಲಿ ನೋಡಿದಾಗ ಮಾರ್ಚ್ ತಿಂಗಳಿನಲ್ಲಿ ಕಳ್ಳತನವಾದ ಗಾಡಿಯಾಗಿರುತ್ತದೆ.. ಅಲ್ಲದೇ ಆರ್ ಸಿ ಕಾರ್ಡ್ ನಲ್ಲಿ ಪಾರ್ಟಿ 2 ಅಂತ ನಮೂದಾಗಿರುತ್ತದೆ. ಇದಾದ ಬಳಿಕ ಆತನನ್ನು ಕರೆ ತಂದು ವರ್ಕ್ ಮಾಡಿದಾಗ ಇದರ ಹಿಂದೆ ಇರುವ ಜಾಲವನ್ನು ಬೇಧಿಸಲಾಗುತ್ತದೆ.

ಕದ್ದ ಬೈಕ್ ಕೊಂಡಿರುವವರ ಕೈ ಖಾಲಿ : ಸದ್ಯ ಸೆಂಕೆಂಡ್ ಹ್ಯಾಂಡ್ ಬೈಕ್ ಗೆ ಹೆಚ್ಚಿನ ಹಣವಿದ್ದು, ಹೊಸ ಬೈಕ್ ನ್ನು ಏಜೆಂಟ್ ಕಡಿಮೆ ಬೆಲೆಗೆ ನೀಡುತ್ತಾನೆ ಎಂಬ ಆಸೆಯಿಂದ ಬೈಕ್ ನ್ನು ಅನೇಕರು ಸಾಲ ಮಾಡಿ ತೆಗೆದುಕೊಂಡಿದ್ದರು. ಕಳ್ಳ ಯಾವಾಗ ಸಿಕ್ಕ, ಕದ್ದ ಬೈಕ್ ಗಳನ್ನು ಮಾರಾಟದಲ್ಲಿ ತೆಗೆದುಕೊಂಡವರು ಪೊಲೀಸ್ ಠಾಣೆಗೆ ಬಂದು ಬೈಕ್ ಬಿಟ್ಟು ಬರೀ ಕೈಯಲ್ಲಿ ಹೋಗಿದ್ದಾರೆ. ಇತ್ತ ಕೊಟ್ಟ ಹಣವೂ ಹೋಯಿತು. ಬೈಕ್ ಕೂಡ ಇಲ್ಲವಾಯಿತು.

ಐದು ಜನರ ಬಂಧನ : ಈ ಪ್ರಕರಣ ಸಂಬಂಧ ಐದು ಜನರನ್ನು ಬಂಧಿಸಲಾಗಿದೆ. ಹೊನ್ನಾಳಿ ಪೊಲೀಸರು 26 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ದಾವಣಗೆರೆ ನಗರದ ನಿಟುವಳ್ಳಿಯ ಆಟೊ ಚಾಲಕ ಸಿದ್ದೇಶ, ಕೂಲಿ ಕಾರ್ಮಿಕ ಮಂಜುನಾಥ, ಆರ್‌ಟಿಒ ಏಜೆಂಟ್ ಪ್ರಕಾಶ್ ಹಾಗೂ ಆಟೊ ಲಿಂಕ್ಸ್‌ ಕೆಲಸಗಾರರಾದ ಕಲೀಂ ಅಲಿಯಾಸ್ ಕಲಾಮುದ್ದೀನ್, ಮಹಮದ್ ಯಾಸೀರ್ ಅರಾಫತ್ ಬಂಧಿತರು.

ಹೊನ್ನಾಳಿ ನಗರದ ಟಿ.ಬಿ. ಸರ್ಕಲ್ ಬಳಿ ಇತ್ತೀಚೆಗೆ ಕಳ್ಳತನವಾಗಿದ್ದ ಎಚ್.ಎಫ್. ಬೈಕ್ ಪ್ರಕರಣವನ್ನು ಭೇದಿಸಲು ಮುಂದಾದಾಗ 26 ಬೈಕ್‌ಗಳು ಸಿಕ್ಕಿವೆ. ಆರೋಪಿಗಳಾದ ಸಿದ್ದೇಶ ಹಾಗೂ ಮಂಜುನಾಥ ಅವರನ್ನು ತನಿಖೆಗೊಳಪಡಿಸಿದಾಗ ಹೊನ್ನಾಳಿ, ದಾವಣಗೆರೆ, ಹರಪನಹಳ್ಳಿ, ಜಗಳೂರು, ಹಾವೇರಿ, ರಾಣೆಬೆನ್ನೂರು, ಶಿವಮೊಗ್ಗ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ ಹಾಗೂ ವಿವಿಧ ಕಡೆಗಳಲ್ಲಿ ನಕಲಿ ಕೀ ಗಳನ್ನು ಬಳಸಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದೇಶ್, ಮಂಜುನಾಥ್ ಈ ಇಬ್ಬರು ಕಳ್ಳತನ ಮಾಡುತ್ತಿದ್ದ ಬೈಕ್‌ಗಳನ್ನು ಪ್ರಕಾಶ್, ಕಲಾಮುದ್ದೀನ್ ಹಾಗೂ ಮಹಮದ್ ಯಾಸೀರ್ ಅರಾಫತ್ ಅವರಿಗೆ ಮಾರಾಟ ಮಾಡುತ್ತಿದ್ದು, ಈ ಮೂವರು ನಕಲಿ ದಾಖಲೆ ಸೃಷ್ಟಿಸಿ ಆರ್‌ಟಿಒ ಏಜೆಂಟ್‌ಗಳ ಸಹಾಯದಿಂದ ಕಳ್ಳತನ ಮಾಡಿದ ಬೈಕುಗಳ ಆರ್.ಸಿ.ಗಳನ್ನು ಬೇರೆಯವರಿಗೆ ಬದಲಾವಣೆ ಮಾಡಿ ಮಾರಾಟ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದೇಗೌಡ, ಸಿಪಿಐ ಅನಿಲ್, ಪಿಎಸ್‌ಐ ಶಿವಕುಮಾರ್, ಎಎಸ್‌ಐ ಪರಶುರಾಂ, ತಿಪ್ಪೇಸ್ವಾಮಿ, ಪ್ರಕಾಶ್, ಸಿಬ್ಬಂದಿ ದೊಡ್ಡಬಸಪ್ಪ, ಮೌನೇಶಾಚಾರ್, ಚೇತನ್ ಕುಮಾರ್, ಜಗದೀಶ್, ಸುರೇಶ್ ನಾಯ್ಕ್, ಕೃಷ್ಣಪ್ಪ, ಹನುಮಂತಪ್ಪ, ಗುರುಸಿದ್ದನಗೌಡ, ಸೋಮಶೇಖರ್ ಹಾಗೂ ಮಾರುತಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ ಬೈಕ್ ಕಳ್ಳರ ಬೇದಿಸಿದ ಪೋಲಿಸರ ಕಾರ್ಯಕ್ಕೆ ಜನ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಎಸ್ ಪಿ ಡಾ.ಅರುಣ್ ಪ್ರತಿಕ್ರಿಯೆ: ಬೈಕ್ ಕಳ್ಳತನದ ಆರೋಪಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ, ಇದರಲ್ಲಿ ಯಾರೇ ಇನ್ವಾಲ್ ಆಗಿದ್ದರು ಅವರನ್ನ ಬಿಡುವ ಪ್ರಶ್ನೆ ಇಲ್ಲ, ಆರ್ ಟಿ ಓ ಅಧಿಕಾರಿಗಳ ಕೈವಾಡದ ಬಗ್ಗೆ ಇನ್ನೊಂದು ಪ್ರಕರಣ ದಾಖಲಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.

Leave a Reply

Your email address will not be published. Required fields are marked *

error: Content is protected !!