ಆರೋಪಿತರಿಂದ 3 ಲಕ್ಷ 6 ಸಾವಿರ ರೂ.ಬೆಲೆಯ ಆಭರಣ ವಶಪಡಿಸಿಕೊಂಡ ಗ್ರಾಮಾಂತರ ಪೊಲೀಸ್
ದಾವಣಗೆರೆ : ಮನೆ ಕಳ್ಳತನ ಮತ್ತು ಸುಲಿಗೆ ಮಾಡಿದ್ದ ಆರೋಪಿತರನ್ನು ಬಂಧಿಸಿ ಅವರಿಂದ 3,06,000/- ರೂ ಬೆಲೆಯ ಬಂಗಾರದ ಆಭರಣಗಳನ್ನು ದಾವಣಗೆರೆಯ ಗ್ರಾಮಾಂತರ ಪೊಲೀಸ್ ವಶಪಡಿಸಿಕೊಂಡಿದ್ದಾರೆ. ದಿನಾಂಕ:25/09/2022 ರಂದು ಪಿರ್ಯಾದಿ ರುದ್ರಮುನಿ ತಂದೆ ಈಶ್ವರಪ್ಪ, ಹೆಬ್ಬಾಳು ಗ್ರಾಮ ಇವರು ಠಾಣೆಗೆ ಹಾಜರಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ಗಾಡೇಜ್ ನಲ್ಲಿದ್ದ 2,70,000/- ರೂ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಿ ಅಂತ ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಗುನ್ನೆ ನಂ:298/2022, ಕಲಂ: 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ನಂತರ ಮಾನ್ಯ ಪೊಲಿಸ್ ಅಧೀಕ್ಷಕರವರಾದ ಶ್ರೀ ಡಾ|| ಕೆ. ಅರುಣ್, ಐಪಿಎಸ್, ಹಾಗೂ ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಅರ್.ಬಿ ಬಸರಗಿ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಬಸವರಾಜ ಇವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ರವರಾದ ಶ್ರೀ ಲಿಂಗನಗೌಡ ನೆಗಳೂರ ಇವರು ಪಿಎಸ್ ಐ ಶ್ರೀ ಎ.ಆರ್ ಮುಂದಿನ ಮನಿ ಮತ್ತು ಠಾಣಾ ಸಿಬ್ಬಂದಿಯವರಾದ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್‌ಯುಸುಫ್ ಅತ್ತಾರ್, ರಾಜು ಲಮಾಣಿ, ವೀರೇಶ್, ಗಣೇಶನಾಯ್ಕ, ಬಸವರಾಜ ಇವರೊಂದಿಗೆ ಆರೋಪಿತರನ್ನು ಬಂಧಿಸಿದ್ದಾರೆ.
ಎ-ಹನುಮಂತಪ್ಪ @ ದೊಡ್ಡಮನಿ ಹನುಮಂತ, 38 ವರ್ಷ, ದೇವಾಂಗ ಜನಾಂಗ, ಹಮಾಲಿ ಕೆಲಸ, ವಾಸ:ಹೆಬ್ಬಾಳು ಗ್ರಾಮ, ದಾವಣಗೆರೆ ತಾಲ್ಲೂಕು, ಎ2-ಹಾಲೇಶಪ್ಪ ತಂದೆ ಅಂಜಿನಪ್ಪ, 48 ವರ್ಷ, ದೇವಾಂಗ ಜನಾಂಗ, ಟೀ ಅಂಗಡಿ ವ್ಯಾಪಾರ, ವಾಸ: ಮಂಡಲೂರು ಗಾಮ್ರ, ದಾವಣಗೆರೆ ತಾಲ್ಲೂಕು. ಹಾಲಿ ವಾಸ:ಭರಮಸಾಗರ, ಚಿತ್ರದುರ್ಗ ತಾಲ್ಲೂಕು ಇವರುಗಳನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ:53/2022, ಕಲಂ:394 ಐಪಿಸಿ ಪ್ರಕರಣವು ಸೇರಿದಂತೆ 02 ಪ್ರಕರಣಗಳಿಂದ ಕಳವು ಮತ್ತು ಸುಲಿಗೆ ಆಗಿದ್ದ 03,06,000/- ರೂ ಬೆಲೆಗೆ ಬಂಗಾರದ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಡಾ.ಕೆ. ಅರುಣ್, ಐಪಿಎಸ್, ರವರು ಶ್ಲಾಘಿಸಿರುತ್ತಾರೆ.