ದಾವಣಗೆರೆ ಮೆ/ಜೆಮಿನಿ ಸೆಕ್ಯೂರಿಟಿ ಮತ್ತು ಅಲೈಡ್ ಸರ್ವಿಸಸ್ ಸಂಸ್ಥೆಗಳಿ0ದ ನೇಮಕಗೊಂಡ ಸಿಬ್ಬಂದಿಗಳಿಗೆ ವೇತನಾನುದಾನ ಬಿಡುಗಡೆ!

ದಾವಣಗೆರೆ: 2022-23ನೇ ಸಾಲಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಮೆ/ಜೆಮಿನಿ ಸೆಕ್ಯೂರಿಟಿ ಮತ್ತು ಅಲೈಡ್ ಸರ್ವಿಸಸ್, ದಾವಣಗೆರೆ ಇವರ ಮುಖಾಂತರ ನೇಮಕಗೊಂಡು ಪ್ರಾದೇಶಿಕ ಜಂಟಿ ನಿರ್ದೇಶಕರು /ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು ಮತ್ತು ಡಿ ಗ್ರೂಪ್ ಸಿಬ್ಬಂದಿಗಳಿಗೆ ಮಾರ್ಚ್ -2022 ಮತ್ತು ಏಪ್ರಿಲ್ -2022ರ ಮಾಹೆಗಳಿಗೆ ವೇತನ ಪಾವತಿಗಾಗಿ ಒಂದು ಕೋಟಿ ಎರಡು ಸಾವಿರದ ಇನ್ನೂರ ಇಪ್ಪತ್ತೊಂದು ರೂಪಾಯಿ (1,0002,271) ಗಳ ಅನುದಾನವನ್ನು ಷರತ್ತುಗಳನ್ವಯ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಈ ಕುರಿತು ಜೂನ್.03, 2022ರಂದು ಆದೇಶ ಹೊರಡಿಸಿರುವ ಕಾಲೇಜು ಶಿಕ್ಷಣ ನಿರ್ದೇಶಕರು, 2022-23ನೇ ಸಾಲಿಗೆ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬ0ಧಿಸಿದ0ತೆ ಮೊದಲನೇ ತ್ರೈ ಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಲು ಷರತ್ತಿಗೊಳಪಟ್ಟು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರಿಗೆ ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.

ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿ ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ/ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯವಿರುವ 102 ಡಾಟಾ ಎಂಟ್ರಿ ಆಪರೇಟರ್ ಮತ್ತು 347 ಗ್ರೂಪ್ –ಡಿ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇರೆಗೆ ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡಿರುವ ಪ್ರಯುಕ್ತ ಇ-ಟೆಂಡರ್‌ನಲ್ಲಿ ನಮೂದಿಸಿರುವ ಮತ್ತು ಅಂಗೀಕರಿಸಲಾದ ದರಪಟ್ಟಿಯನ್ವಯ 102 ಡಾಟಾ ಎಂಟ್ರಿ ಆಪರೇಟರ್ ಮತ್ತು 347 ಗ್ರೂಪ್ –ಡಿ ಹುದ್ದೆಗಳಿಗೆ ಹೊರ ಸಂಪನ್ಮೂಲ ಸಿಬ್ಬಂದಿಗಳ ಸೇವೆಯನ್ನು ಸದರಿ ಕಾರ್ಯಾದೇಶದ ಅನುಬಂಧ-1 ಮತ್ತು ಅನುಬಂಧ-2ರಲ್ಲಿ ಸೂಚಿಸಿರುವ ಕಚೇರಿ/ಕಾಲೇಜುಗಳಿಗೆ ಷರತ್ತಿಗೊಳಪಟ್ಟು ಮೆ/ಜೆಮಿನಿ ಸೆಕ್ಯೂರಿಟಿ ಮತ್ತು ಅಲೈಡ್ ಸರ್ವಿಸಸ್, ದಾವಣಗೆರೆ ಇವರಿಗೆ ಕಾರ್ಯಾದೇಶ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ನಿರ್ದೇಶಕರ ಆದೇಶದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ 1, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 1 ಇದ್ದು, 42762 ರೂ. ಅನುದಾನ ಬಿಡುಗಡೆಯಾಗಿದೆ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದಾವಣಗೆರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ 1, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 1 ಇದ್ದು, 21380 ರೂ., ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರದಲ್ಲಿ ಡಾಟಾ ಎಂಟ್ರಿ ಆಪರೇಟರ್ 1, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 1 ಇದ್ದು, 40810 ರೂ., ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಳ್ಳಕೆರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ 1, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 1 ಇದ್ದು, 40802 ರೂ. ಬಿಡುಗಡೆಯಾಗಿದೆ.

ಇನ್ನು ಕೇಂದ್ರ ಕಚೇರಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದಾವಣಗೆರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ 2, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 2 ಇದ್ದು, 72780 ರೂ., ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದಾವಣಗೆರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ 2, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 2 ಇದ್ದು, 36389 ರೂ., ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಾಪಟ್ಟಣದಲ್ಲಿ ಡಾಟಾ ಎಂಟ್ರಿ ಆಪರೇಟರ್ 1, ಪ್ರಾ.ಜಂ.ನಿ ಕಚೇರಿ/ ಕಾಲೇಜುಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ ಗ್ರೂಪ್ ಡಿ ಸಂಖ್ಯೆ 1 ಇದ್ದು, 33616 ರೂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಗಿರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ 2, ಗ್ರೂಪ್ ಡಿ ಸಂಖ್ಯೆ 2 ಇದ್ದು, 69610 ರೂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಮತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ 1, ಗ್ರೂಪ್ ಡಿ ಸಂಖ್ಯೆ 1 ಇದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಗಳೂರಿಗೆ 34804 ಹಾಗೂ ಹರಿಹರಕ್ಕೆ 34804 ರೂ. ಬಿಡುಗಡೆ ಮಾಡಲಾಗಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!