“ಒಂದೇ ಒಂದು ಭೂಮಿ” ಉಳಿಸುವ ನಿಟ್ಟಿನಲ್ಲಿ ವಿಶ್ವ ಪರಿಸರ ದಿನದ ಮಹತ್ವ ಸಾರಲು ಅಲೈಯನ್ಸ್ ವಿಶ್ವವಿದ್ಯಾಲಯ ಕರೆ
ದಾವಣಗೆರೆ: ವಿಶ್ವ ಪರಿಸರ ದಿನದ ಪ್ರಯುಕ್ತವಾಗಿ ಅಲೈಯನ್ಸ್ ವಿಶ್ವವಿದ್ಯಾಲಯ HR ಡಿಪಾರ್ಟೆ್ಮಂಟ್ ವತಿಯಿಂದ ಪರಿಸರ ಕಾಳಜಿ ಮಹತ್ವ ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಿಸರ ಕಾಳಜಿ ವಹಿಸುವ ಈ ಚಟುವಟಿಕೆಯಲ್ಲಿ ಬೆಂಗಳೂರಿನ ಅಲೈಯನ್ಸ್ ವಿಶ್ವವಿದ್ಯಾಲಯ ಸಿಬ್ಬಂದಿ, ರೋಟರ್ಯಾಕ್ಟ್ ಕ್ಲಬ್ ಹಾಗೂ ಎನ್‌ಎಸ್‌ಎಸ್ ಘಟಕದ ಸದಸ್ಯರು ಇದ್ದರು.
ಪರಿಸರ ಉಳಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯಿ0ದ ಈ ವರ್ಷ ತೆಗೆದುಕೊಳ್ಳಲಾದ ಒಂದೇ ಒಂದು ಭೂಮಿ ಅನ್ನೋ ಧ್ಯೇಯದ ಹಿನ್ನೆಲೆ, ಕಾಲೇಜಿನ ಸಿಬ್ಬಂದಿಯಿ0ದ ಕ್ಯಾಂಪಸ್ ನ ಸುತ್ತಾಮುತ್ತಾ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಮುಂಭಾಗ ಸೇರಿದಂತೆ ಬಸ್ ನಿಲ್ದಾಣ ಹಾಗೂ ಚಿಕ್ಕ ಹಾಗಡೆ ಗ್ರಾಮಕ್ಕೆ ಹೋಗುವ ಹಲವು ಕಡೆ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಅಷ್ಟೇ ಅಲ್ಲ ಮಳೆಗಾಲದಲ್ಲಿ ನೀರನ್ನು ಸಂರಕ್ಷಣೆ ಮಾಡಿ ಅದನ್ನು ಹೇಗೆ ಮರು ಬಳಕೆ ಮಾಡಬಹುದು ಎನ್ನುವ ವಿಚಾರವನ್ನು ಸಾರ್ವಜನಿಕ ಗಮನಕ್ಕೆ ತರಲಾಯಿತು. ನಿಸರ್ಗಕ್ಕೆ ಹಾನಿ ಮಾಡುವಂತಹ ಪ್ಲಾಸ್ಟಿಕ್ ಪದಾರ್ಥಗಳ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ 75ಕ್ಕೂ ಹೆಚ್ಚಿನ ಸಿಬ್ಬಂದಿ ಜಾಗೃತಿ ಮೂಡಿಸಿದರು. ಮಾತ್ರವಲ್ಲದೇ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಭಾವಚಿತ್ರಗಳನ್ನೂ ತೆಗೆಯಲಾಯಿತು. ಬಸ್ ನಿಲ್ದಾಣ ಹಾಗೂ ಕ್ಯಾಂಪಸ್ ಸುತ್ತಾಮುತ್ತಾ ಪ್ಲಾಸ್ಟಿಕ್ ಬಳಸದಂತೆ ಹಾಗೆಯೇ ಇದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಯಿತು..
ಪರಿಸರ ಕಾಳಜಿ ತೋರುವ ನಿಟ್ಟಿನಲ್ಲಿ ಅಲೈಯನ್ಸ್ ವಿಶ್ವವಿದ್ಯಾಲಯ ಯಾವತ್ತೂ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ವಿದ್ಯಾಲಯದ ಆವರಣದಲ್ಲಿ ಹಚ್ಚ ಹಸಿರು ತುಂಬಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ. ಹಾಗಾಗಿಯೇ ಪರಿಸರ ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ದಿನದ ಮಹತ್ವ ಸಾರುವುದು ಇದರ ಮೂಲ ಉದ್ದೇಶವಾಗಿದೆ.
garudavoice21@gmail.com 9740365719