ಸೆಕ್ಯೂರಿಟಿ ಏಜೆನ್ಸಿಯವರಿಂದ ಎಸ್ಸಿ-ಎಸ್ಟಿ ಹೊರಗುತ್ತಿಗೆ ನೌಕರರಿಗೆ ಕಿರುಕುಳು: ಕ್ರಮಕ್ಕೆ ಆಗ್ರಹ
ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಸ್ಸಿ-ಎಸ್ಟಿ ಸಿಬ್ಬಂದಿಗಳ ಮೇಲೆ ಗೋಣಿವಾಡ ಮಂಜುನಾಥ ಎಂಬುವವರು ಅವಾಚ್ಯ ಶಬ್ಬಗಳಿಂದ ನಿಂದಿಸುತ್ತಿಸುತ್ತಾ, ಮಾನಸಿಕ ಹಾಗೂ ದೈಹಿಕ ಹಿಂಸೆಗಳನ್ನು ನೀಡುತ್ತಿರುವುದಾಗಿ ಆರೋಪಿಸಿ ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಲ್.ಸಿ. ನೀಲಗಿರಿ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ದಾವಣಗೆರೆಯ ಮೆ| ದೀಕ್ಷಾ ಕನ್ಸಲ್ವೆನ್ಸಿ ಮ್ಯಾನ್ ಫವರ್ ಮತ್ತು ಸೆಕ್ಯುರಿಟಿ ಸರ್ವೀಸಸ್‌ನ ಗೋಣಿವಾಡ ಮಂಜುನಾಥ್ , ಕೆಟಿಜೆ ನಗರದ ಲೋಹಿತ್, ಮಂಡಿಪೇಟೆಯ ಬಸಣ್ಣ ಹಾಗೂ ಷರೀಫ್ ಅವರುಗಳ ಮೇಲೆ ದೂರು ನೀಡಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ರೋಗಿಗಳ ಮಲವನ್ನು ಶುಚಿಗೊಳಿಸಬೇಕು. ಎಂದು ಏರು ಧ್ವನಿಯಲ್ಲಿ ನಿಂದಿಸಲಾಗುತ್ತದೆ.
ಲೋಹಿತ್ ಅವರು ಬಾಡಿ ವೈಟ್ ಲಿಪ್ಟರ್‌ಗಳನ್ನು ಹಾಗೂ ಹೊರ ವ್ಯಕ್ತಿಗಳನ್ನು ಕರೆತಂದು ಗೋಣಿವಾಡ ಮಂಜುನಾಥ ಇವರು ಹೇಳುವ ಸಿಬ್ಬಂದಿಗಳಿಗೆ ಹಿಂಸೆ ನೀಡುತ್ತಾರೆ. ಪ್ರತೀ ತಿಂಗಳು ಒಬೊಬ್ಬ ಸಿಬ್ಬಂದಿಗಳಿಂದ 2000 ರೂ. ಪಡೆಯುತ್ತಾರೆ.
ಆಸ್ಪತ್ರೆಯಲ್ಲಿ ಒಟ್ಟು 212 ಸಿಬ್ಬಂದಿಗಳು ಹೊರಗುತ್ತಿಗೆ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ . ದೈಹಿಕ ಹಲ್ಲೇ ನಡೆಸುವುದು ಇತ್ಯಾದಿ ರೂಪದಲ್ಲಿ ತೊಂದರೆ ಕೊಡಲಾಗುತ್ತಿದೆ.
ಅಕ್ರಮವಾಗಿ ಗಣೇಶ ಟೀ ಸ್ಟಾಲ್‌ನ್ನು ಗುತ್ತಿಗೆ ನೀಡುವ ಮೂಲಕ ಪ್ರತೀ ತಿಂಗಳು ಬೇನಾಮಿ ಮಾಮೂಲಿ ವಸೂಲಿ ಮಾಡಿಕೊಂಡು ಸರ್ಕಾರಕ್ಕೆ ಬರಬಹುದಾದ ಆದಾಯವನ್ನು ವಂಚಿಸಲಾಗಿದೆ. ಇಲ್ಲಿ ಬರುವ ರೋಗಿಗಳಿಗೆ ಪ್ರತಿನಿತ್ಯ ಮದ್ಯ ಸೇವನೆ ಮಾಡಿ ಹಿಂಸೆ ನೀಡಲಾಗುತ್ತಿದೆ.
ಇ.ಎಸ್.ಐ. ಹಾಗೂ ಇ.ಪಿ.ಎಫ್. ಗಳನ್ನು ನಿರ್ವಹಣೆ ಮಾಡಿರುವುದಿಲ್ಲ ಮತ್ತು 5 ತಿಂಗಳ ಹೊರಗುತ್ತಿಗೆ ಸಿಬ್ಬಂದಿಗಳ ವೇತನ ನೀಡಿಲ್ಲ ಎಂದು ನನಗೆ ನೊಂದ ಹೊರಗುತ್ತಿಗೆ ಸಿಬ್ಬಂದಿಗಳಿಂದ ಗುಪ್ತ ಮಾಹಿತಿ ನೀಡಿದ್ದಾರೆ. ಆದ್ದರಿಂದ ತಾವುಗಳು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ