ಏಳು ಕೋಟಿ ಹಣ ದುರ್ಬಳಕೆ ಆರೋಪ! ನಿರ್ಮಿತಿ ಕೇಂದ್ರದ ಮಾಜಿ ಉದ್ಯೋಗಿ ಮೂಡಲಗಿರಿಯಪ್ಪ ಬಂಧನ
ಚಿತ್ರದುರ್ಗ: ಕೋಟಿ ಕೋಟಿ ಗುಳಂ ಮಾಡಿ ಬಿಟ್ರಾ ಚಿತ್ರದುರ್ಗ ನಿರ್ಮಿತಿ ಕೇಂದ್ರ ಮಾಜಿ ಪಿಡಿ. ಮಾಜಿ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪನ ವಿರುದ್ದ ಮತ್ತೊಂದು ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಮೂಡಲಗಿರಿಯಪ್ಪ ಅರೆಸ್ಟ್. ಚಿತ್ರದುರ್ಗ ಸೈಬರ್ ಕ್ರೈಂ ಪೋಲಿಸರಿಂದ ಮೂಡಲಗಿರಿಯಪ್ಪ ಬಂಧನ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿರಿಯೂರಿನಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೂಡಲಗಿರಿಯಪ್ಪ ಅವರನ್ನು ತಡ ರಾತ್ರಿ ಪೋಲಿಸರು ಬಂಧಿಸಿದ್ದಾರೆ .
ಬೇನಾಮಿ ಚೆಕ್ ಬಳಸಿ 7 ಕೋಟಿ 4 ಲಕ್ಷದ 45 ಸಾವಿರ ಹಣ ಗುಳುಂ ಮಾಡಿರುವ ಆರೋಪ. ನಿರ್ಮಿತಿ ಕೇಂದ್ರದ ಹಾಲಿ ಯೋಜನಾ ನಿರ್ದೇಶಕ ಸತ್ಯ ನಾರಯಾಣರಾವ್ ದೂರು. ವಿವಿಧ ಇಲಾಖೆಗಳ, ವಿವಿಧ ಕಾಮಗಾರಿಗೆ ಬಿಡುಗಡೆಯಾಗಿದ್ದ ಹಣ ಗುಳುಂ ಆರೋಪ . ಸರ್ಕಾರಕ್ಕೆ ಮೋಸ ಮಾಡಿ ಹಣ ಲಪಟಾಯಿಸಿದ ಆರೋಪ.ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್ ಐ ಆರ್ ದಾಖಲು. IPC 408,406,420,465,468, ಅಡಿ ಕೇಸ್ ದಾಖಲು. ಈ ಹಿಂದೆಯೂ ಮೊಳಕಾಲ್ಮೂರು, ಚಳ್ಳಕೆರೆ, ನಾಯಕನಹಟ್ಟಿ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಚಿತ್ರದುರ್ಗದ ಗ್ರಾಮಾಂತರ ಠಾಣೆ ಕೇಸ್ ಸೈಬರ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.