ತಂತ್ರಜ್ಞಾನ ಮಾಧ್ಯಮದ ಅವಿಭಾಜ್ಯ ಅಂಗ; ಡಿಜಿಟಲ್ ಮಾಧ್ಯಮಗಳಿಂದ ಭಾಷೆಯ ಮೇಲೆ ದಾಳಿ – ಪ್ರೊ. ಬಿ.ಕೆ. ರವಿ
ದಾವಣಗೆರೆ: ಕನ್ನಡ ನಮ್ಮ ನಾಡಿನ ಅಸ್ಮಿತೆ. ಆದರೆ ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ಮಿಡಿಯಾಗಳ ಭರಾಟೆಯಲ್ಲಿ ಸಿಲುಕಿ ಕನ್ನಡ ನಲುಗುತ್ತಿರುವುದರಿಂದ, ನಮ್ಮ ಭಾಷೆಯ ಉಳಿವಿಗೆ ಜಿಲ್ಲಾ ಮತ್ತು ಸ್ಥಳೀಯ ಪತ್ರಿಕೆಗಳನ್ನು ಉಳಿಸುವ ಹೊಣೆ ಜನರ ಮತ್ತು ಸರ್ಕಾರದ ಮೇಲಿದೆ ಎಂದು ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ.ರವಿ ಹೇಳಿದರು.
ದಾವಣಗೆರೆ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ಅಧ್ಯಯನ ವಿಭಾಗ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಶಾಖೆಗಳ ಸಹಯೋಗದಲ್ಲಿ ವಿವಿಯ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು `ಡಿಜಿಟಿಯಲ್ ಯುಗದಲ್ಲಿ ಪತ್ರಕರ್ತರ ಭವಿಷ್ಯ’ ಕುರಿತು ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾಷೆಯ ಮೇಲೆ ದಾಳಿ ನಡೆಸುತ್ತಿರುವ ಡಿಜಿಟಲ್ ಮಾಧ್ಯಮಗಳಿಂದ ‘ಕನ್ನಡ ಭಾಷೆ’ಯನ್ನು ರಕ್ಷಿಸಲು ಮುದ್ರಣ ಮಾಧ್ಯಮಗಳು ಉಳಿಯಬೇಕಾದ ಅವಶ್ಯಕತೆ ಇದೆ ಅಭಿಪ್ರಾಯಪಟ್ಟರು.
ಕಾಲಕಳೆದಂತೆ ಮಾಧ್ಯಮರಂಗ ಅಪ್ ಗ್ರೇಡ್ ಆಗುತ್ತಿದೆ. ಪತ್ರಕರ್ತರು ಸಹ ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಹೊಂದಿಕೊಂಡು ಸೃಜನಶೀಲತೆ ಮೈಗೂಡಿಸಿಕೊಂಡು, ಸಂಯಮ ಕಳೆದುಕೊಳ್ಳದೆ, ಓದುಗರಿಗೆ ನೈಜ ಮಾಹಿತಿ ತಲುಪಿಸಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ತಂತ್ರಜ್ಞಾನದ ವೈಭವೀಕರಣ ನಡೆಯುತ್ತಿದ್ದು, ಸಂಹವನದ ಮೂಲ ಕ್ರಿಯೆ ಬದಲಾಗಿಲ್ಲ. ಅದರೆ, ಆಗ ೧೦ರಿಂದ ೧೫ ದಿನಗಳ ಬಳಿಕ ಓದುಗರಿಗೆ ಸಿಗುತ್ತಿದ್ದ ಸುದ್ದಿ ಈಗ ಎರಡು ನಿಮಿಷದಲ್ಲಿ ಸಿಗುತ್ತಿದೆ. ಹೀಗೆ ಸಂದೇಶ ರವಾನೆಯ ವೇಗವರ್ಧಕ ಹೆಚ್ಚಿದೆ. ಮಾಧ್ಯಮ ರಂಗದಲ್ಲಿ ಸ್ಪರ್ಧೆ ಇದೆ ನಿಜ. ಆದರೆ, ಪತ್ರಕರ್ತರು ವಾಣಿಜ್ಯೀಕರಣದ ಭರಾಟೆಯಲ್ಲಿ ಸಮಾಜಿಕ ಹೊಣೆಗಾರಿಕೆ ಮರೆಯಬಾರದು. ಯಾವುದೇ ಮಾಹಿತಿ ಸಿಕ್ಕಾಗ, ಅದರ ಪೂರ್ವ-ಪರ ತಿಳಿದು ವರದಿ ಮಾಡಬೇಕು ಎಂದು ಸಲಹೆ ನೀಡಿದರು.
ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಅಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮ ದ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಇಂದು ಜಾಗತೀಕರಣವಾಗಿದೆ, ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಇಂದಿನ ವಿದ್ಯಾರ್ಥಿಗಳಿಗೆ ದೊರೆತಿದೆ. ತಂತ್ರಜ್ಞಾನದ ಭಾರಟೆಯಿಂದಾಗಿ ಬಾರಿ ಬದಲಾವಣೆ ಆಗುತ್ತ ಬಂದಿದೆ.ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೇರಿಕವನ್ನು ನಮ್ಮ ಭಾರತ ತಂತ್ರಜ್ಞಾನದಲ್ಲಿ ಹಿಂದ್ಕಿದೆ ಎಂದು ಹೇಳಿದರು.
ಅನಿಮೇಷನ್ ತಂತ್ರಜ್ಞಾನ ಬಂದಾಗ, ಜಗತ್ತಿನ ಮನರಂಜನಾ ಕಾರ್ಖಾನೆಯನ್ನು ಕೊಳ್ಳೆ ಹೊಡೆದಿದ್ದ ಅಮೇರಿಕ, ಚೀನಾ, ಕೋರಿಯಾ ರಾಷ್ಟçಗಳು ಈಗ ಭಾರತೀಯ ಮನರಂಜನಾ ವಲಯದಲ್ಲಿ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿವೆ. ಇನ್ನು ಎಷ್ಟೇ ಡಿಜಿಟಿಯಲ್ ಪ್ಲಾಟ್‌ಫಾರ್ಮ್ಗಳು ಬಂದರೂ ಮುದ್ರಣ ಮಾಧ್ಯಮಕ್ಕೆ ಮುಂದಿನ ೩-೪ ದಶಕಗಳ ಕಾಲ ಉಜ್ವಲ ಭವಿಷ್ಯವಿದೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಯಾವುದಕ್ಕೂ ಆತುರ ಪಡದೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆರೋಗ್ಯಕರ ಸುದ್ದಿ ನೀಡಬೇಕು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಪರಿಣಾಮ, ಅದೆಷ್ಟೋ ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ನಮಗೆ ಸಮಾಜ ನಾಶ ಮಾಡುವ ಮಾಧ್ಯಮ ಬೇಡ. ಸುದ್ದಿಯಲ್ಲಿ ಸಮಾಜ ಬೆಳಸುವ ಶಕ್ತಿ ಇರಬೇಕೇ ಹೊರತು, ಒಡೆಯುವ ಅಂಶಗಳು ಇರಬಾರದು ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ್ ಉಪನ್ಯಾಸ ನೀಡಿದರು. ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಪ್ರಾಸ್ತಾವಿಕ ಮಾತನಾಡಿದರು. ವಿವಿಯ ಕುಲಸಚಿವರಾದ ಬಿ.ಬಿ. ಸರೋಜಾ, ಡಾ. ಕೆ. ಶಿವಶಂಕರ್, ಜಿಲ್ಲಾ ಕಾನಿಪ ಅಧ್ಯಕ್ಷ ಇ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪö, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್ ಸೇರಿದಂತೆ ಇನ್ನಿತರರಿದ್ದರು. ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.