ಶಾಮನೂರು ಶಿವಶಂಕರಪ್ಪ ಒಬ್ಬ ಮಹಾನ್ ಸಾಧಕ,ಅವರ ಬದುಕು ನಮಗೆಲ್ಲಾ ಆದರ್ಶ – ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್

ದಾವಣಗೆರೆ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನವರು ಒಬ್ಬ ಮಹಾನ್ ಸಾಧಕ, ಅವರ ಬದುಕು ನಮಗೆಲ್ಲಾ ಆದರ್ಶ ಪ್ರಾಯವಾಗಿದ್ದು, ಕಾಯಕವೇ ಕೈಲಾಸವೆಂಬ ಬಸವಣ್ಣನವರ ತತ್ವವನ್ನು ಜೀವಮಾನವಿಡಿ ಅಕ್ಷರಶಃ ಪಾಲಿಸಿಕೊಂಡು ಬಂದಿರುವ ಜತೆಗೆ ಅವರು ದಾಸೋಹವನ್ನು ಜೀವಮಾನವಿಡಿ ಮಾಡಿಕೊಂಡು ಬಂದಿದ್ದಾರೆಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಪ್ರಶಂಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಇನ್‍ಟೆಕ್ ವಿಭಾಗವು ನಗರದ ಎಂ.ಸಿ.ಸಿ. ‘ಎ’ ಬ್ಲಾಕ್ ನಲ್ಲಿರುವ ವನಿತಾ ಸಮಾಜದ ಹಿರಿಯ ವನಿತೆಯರ ಆನಂದ ಧಾಮದಲ್ಲಿ ಹಮ್ಮಿಕೊಂಡಿದ್ದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ 91ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಿರಿಯ ತಾಯಂದಿರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.

ಡಾ. ಎಸ್ಸೆಸ್‍ ಅವರು ಮಾತುಕೊಟ್ಟರೆ ಎಂದೂ ತಪ್ಪಿಲ್ಲ. ನುಡಿದಂತೆ ನಡೆದುಕೊಂಡು ಬಂದಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೊರೋನ ಸಂಕಷ್ಟದ ಈ ಸಮಯದಲ್ಲಿ ಜನರ ಜೀವ ಕಾಪಾಡಲು ಕೊರೋನಾ ಲಸಿಕೆಯನ್ನು ತಮ್ಮ ಸ್ವಂತ ದುಡಿಮೆಯ ಹಣ 4 ಕೋಟಿ ರೂಪಾಯಿಗಳನ್ನು ವ್ಯಯಿಸಿ, ಜನರ ಜೀವ ಉಳಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಯಾವೊಬ್ಬ ರಾಜಕಾರಣಿಯೂ ತಮ್ಮ ಸ್ವಂತ ಹಣದಿಂದ ಖರ್ಚು ಮಾಡಿ ಲಸಿಕೆ
ತಂದಿರುವುದನ್ನು ನಾವು ನೋಡಿಲ್ಲ. ಈ ಕೆಲಸದಿಂದ ನಡೆ ನುಡಿಯಲ್ಲಿ ಡಾ. ಎಸ್ಸೆಸ್‍ರವರು ಕಾಪಾಡಿಕೊಂಡು ಬಂದಿರುವ ಆದರ್ಶವನ್ನು ಜಗತ್ತಿಗೆ ಸಾರಿದಂತಾಗಿದೆ ಎಂದು ಬಣ್ಣಿಸಿದ್ದಾರೆ.

ದಾವಣಗೆರೆ ಮಹಾನಗರ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಡಾ. ಶಾಮನೂರು ಶಿವಶಂಕರಪ್ಪನವರ ಅಪಾರ ಶ್ರಮವಿದೆ. ಅವರು ತಮ್ಮ ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟದಿದ್ದರೆ ದಾವಣಗೆರೆ ಹೆಸರು ಇಷ್ಟೊಂದು ಪ್ರಸಿದ್ಧಿ ಪಡೆಯುತ್ತಿರಲಿಲ್ಲ
ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ದಾವಣಗೆರೆಯ ಶಾಸಕರಾಗಿ, ಸಂಸದರಾಗಿ ಮಾಜಿ ಸಚಿವರಾಗಿ ಎಸ್ಸೆಸ್‍ರವರು ನಗರದ ಮತ್ತು
ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ನೂರಾರು ಕಾಲ ಬಾಳಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಇನ್‍ಟೆಕ್ ವಿಭಾಗದ ಅಧ್ಯಕ್ಷರಾದ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಹೆಚ್. ಸುಭಾನ್ ಸಾಬ್, ಡಿ. ಶಿವಕುಮಾರ್, ವಿ. ಶ್ರೀನಿವಾಸ್, ಹಸನ್ ಅಲಿ, ಕೆ.ಬಿ. ಮಲ್ಲಿಕಾರ್ಜುನ್, ವಾರ್ಡನ್ ಲತಾ ಹಾಗೂ ಹಿರಿಯ ವನಿತೆಯರು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!