ಡಾ.ಶಾಮನೂರು ಶಿವಶಂಕರಪ್ಪನವರ 91ನೇ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

ದಾವಣಗೆರೆ:ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ದಾವಣಗೆರೆ ಮಾಜಿ ಸಚಿವರು, ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು 90ನೇ ವರುಷ ಪೂರೈಸಿ 91ನೇ ವರುಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಗಣ್ಯರು ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಇಂದು ಬೆಳಿಗಿನಿಂದಲೂ ಗಣ್ಯರು ಮಾಜಿ ಸಚಿವ
ಎಸ್ ಎಸ್.ಮಲ್ಲಿಕಾರ್ಜುನ್ ಅವರ ಶಿವಪಾರ್ವತಿ ನಿವಾಸಕ್ಕೆ ಆಗಮಿಸಿ ಡಾ|| ಶಾಮನೂರು ಶಿವಶಂಕರಪ್ಪನವರಿಗೆ ಶುಭ ಕೋರಿದರು.
ಮೊದಲಿಗೆ ಎಸ್.ಎಸ್. ಅವರ ಮಕ್ಕಳಾದ ಶ್ರೀಮತಿ ಮಂಜುಳಾ, ಶ್ರೀಮತಿ ಶೈಲಜಾ, ಶ್ರೀಮತಿ ಸುಧಾ, ಶ್ರೀಮತಿ ಮೀನಾ ಹಾಗೂ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್.ಮಲ್ಲಿಕಾರ್ಜುನ್, ಡಾ|| ಎಸ್.ಬಿ.ಮುರುಗೇಶ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರುಗಳು, ಸಂಬಂಧಿಕರು ಶುಭಾಶಯ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಜಯ ಮಹಾಂತೇಶ್ ದಾನಮ್ಮನವರ್ ಅವರುಗಳು ಡಾ|| ಶಾಮನೂರು ಶಿವಶಂಕರಪ್ಪನವರಿಗೆ ಶುಭ ಕೋರಿದರು.ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದಾವಣಗೆರೆ ತಹಶೀಲ್ದಾರ್ ಗಿರೀಶ್, ದುಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸ್ಮಾರ್ಟ್‍ಸಿಟಿಯ ರವೀಂದ್ರ ಮಲ್ಲಾಪುರ, ಸತೀಶ್, ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ|| ಕುಮಾರ್, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಡಾ|| ಕಾಳಪ್ಪನವರ್, ಡಾ|| ಪ್ರಸಾದ್, ಡಾ|| ಅರುಣಕುಮಾರ್, ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿವರ್ಗದವರು ಆಗಮಿಸಿ ಶುಭಾಶಯ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಪಿಎಂಸಿ ಅಧ್ಯಕ್ಷÀ ಅಣಜಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಪೋಲೀಸ್ ಅಧಿಕಾರಿಗಳು, ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳ ಸಮಿತಿಯವರು, ತರಳಬಾಳು ಸೇವಾ ಸಮಿತಿಯ ಪದಾಧಿಕಾರಿಗಳು, ತಂಜೀಮುಲ್ ಮುಸ್ಲೀಮಿನ್ ಕಮಿಟಿಯವರು, ಮಾಜಿ ಅಧ್ಯಕ್ಷ ಸೈಯದ್ ಸೈಪುಲ್ಲಾ, ಸಾಯಿಬಾಬಾ ದೇವಸ್ಥಾನ ಸಮಿತಿಯವರು, ಪೌರಕಾರ್ಮಿಕರ ಸಂಘದವರು, ಆದಿ ಕರ್ನಾಟಕ ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು, ಶುಭ ಕೋರಿದರು.

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಕೆ.ಚಮನ್‍ಸಾಬ್, ಅಬ್ದುಲ್ ಲತೀಫ್, ಕಲ್ಲಳ್ಳಿ ನಾಗರಾಜ್, ಜಿ.ಡಿ.ಪ್ರಕಾಶ್, ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ್, ಜಾಕೀರ್, ಶಫಿಕ್ ಪಂಡಿತ್, ಸೈಯದ್ ಚಾರ್ಲಿ, ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಶ್ವೇತಾ ಶ್ರೀನಿವಾಸ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ನಾಗರತ್ನಮ್ಮ ಕೃಷ್ಣಪ್ಪ, ಉದಯ್ ಕುಮಾರ್, ಬಿ.ಹೆಚ್. ವೀರಭದ್ರಪ್ಪ, ಮುನ್ನಾ ಪೈಲ್ವಾನ್, ಪೇಪರ್ ಚಂದ್ರಪ್ಪ, ಶ್ರೀಮತಿ ಗೌರಮ್ಮ ಎಸ್.ಎನ್.ಚಂದ್ರಪ್ಪ, ಕೆ.ಆರ್.ಗಂಗರಾಜ್, ಬಿ.ಎಂ.ಈಶ್ವರ್, ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರುಗಳು ತಮ್ಮ ಬೆಂಬಲಿಗರೊಂದಿಗೆ ತಂಡೋಪತಂಡವಾಗಿ ಆಗಮಿಸಿ ಶುಭಾಶಯ ತಿಳಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಜನ್ಮದಿನದ ಶುಭಾಶಯ ತಿಳಿಸಲು ತಾವುಗಳು ಗುಂಪು-ಗುಂಪಾಗಿ ಬರದೆ ನೀವು ಇದ್ದ ಕಡೆಯಿಂದಲೇ ನನಗೆ ಶುಭ ಹಾರೈಸಬೇಕೆಂದು ಸ್ವಂತ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರೇ ವಿನಂತಿಸಿದ್ದರೂ ಸಹ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೂ ಆಗಮಿಸಿ ಶುಭಕೋರಿದರು.

 

Leave a Reply

Your email address will not be published. Required fields are marked *

error: Content is protected !!