44 ನೇ ವಾರ್ಡ್ ನಾಗರಿಕರಿಂದ ಪಾಲಿಕೆ ಸದಸ್ಯೆ ಶಿಲ್ಪ ಜಯಪ್ರಕಾಶ್ ಪತಿಗೆ ತರಾಟೆ

44 ನೇ ವಾರ್ಡ್ ನಾಗರಿಕರಿಂದ ಪಾಲಿಕೆ ಸದಸ್ಯೆ ಶಿಲ್ಪ ಜಯಪ್ರಕಾಶ್ ಪತಿಗೆ ತರಾಟೆ

ದಾವಣಗೆರೆ : ಶನಿವಾರ ನಗರದ ವಾರ್ಡ್ ನಂಬರ್ 44ರಲ್ಲಿನ ವಿನಾಯಕ ನಗರದಲ್ಲಿ ಪ್ರಚಾರಕ್ಕೆ ತೆರಳಿದ್ದ ಪಾಲಿಕೆ ಸದಸ್ಯೆ ಶಿಲ್ಪ ಜಯಪ್ರಕಾಶ್ ಹಾಗೂ ಅವರ ಸಹೋದರರನ್ನು ನಾಗರೀಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಈಗ ಚುನಾವಣೆ ವೇಳೆ ಮತ ಕೇಳಲು ಬಂದಿದ್ದೀರಿ ಎಂದು ಸ್ಥಲೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿ, ರಸ್ತೆ, ಬೀದಿ ದೀಪ, ಪಾರ್ಕ್ ನಿರ್ಮಾಣದ ಕೆಲಸಗಳಳನ್ನು ಮಾಡಲು ಹೇಳಿದರೆ ಮಹಾನಗರ ಪಾಲಿಕೆಗೆ ಹೋಗಿ ಕೇಳಿ ಎಂದು ಉಡಾಫೆ ಉತ್ತರ ಕೊಡುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಶಿಲ್ಪ ಪ್ರಕಾಶ್ ಅವರು ಸತತ ಮೂರು ವರ್ಷ ಯಾವ ನಾಗರಿಕರಿಗೂ ಸ್ಪಂದಿಸಿಲ್ಲ. ನಿವಾಸಿ ದೃಢೀಕರಣ, ಆಧಾರ್ ಕಾರ್ಡ್ ಅರ್ಜಿಗಳಿಗೆ ಸಹಿ ಮಾಡಲು ವಿನಾಯಕ ನಗರ, ಶಾಂತಿನಗರ, ಕುಂದುವಾಡದ ನಾಗರಿಕರು ಪಕ್ಕದ ವಾರ್ಡ್ ಪಾಲಿಕೆ ಸದಸ್ಯರನ್ನು ಅವಲಂಬಿಸಬೇಕಾಗಿದೆ ಎಂದು ದೂರಿದರು.

 

Leave a Reply

Your email address will not be published. Required fields are marked *

error: Content is protected !!