problems; ಸಮಸ್ಯೆಗಳನ್ನು ಕಾನೂನಿನ ನೆರವಿನಿಂದ ಸೌಹಾರ್ದತೆ ಮೂಲಕ ಪರಿಹರಿಸಿಕೊಳ್ಳಿ
ದಾವಣಗೆರೆ, ಆ.25: ಸಮಾಜದಲ್ಲಿ ಅನೇಕ ಸಮಸ್ಯೆಗಳು (problems) ಬರಲಿದ್ದು, ನಮ್ಮ ಸಮಸ್ಯೆಗಳಿಗೆ ಕಾನೂನಿನ ನೆರವು ಪಡೆಯಬೇಕಾಗಿರುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಾನೂನಿನ ನೆರವು ಪಡೆದು ಸೌಹಾರ್ದತೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ|| ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕರೆ ನೀಡಿದರು.
ಅವರಿಂದು ಬಾಪೂಜಿ ವಿದ್ಯಾಸಂಸ್ಥೆಯ ಆರ್.ಎಲ್, ಕಾನೂನು ಕಾಲೇಜು, ದಾವಣಗೆರೆ, ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ, ಜಿಲ್ಲಾ ವಕೀಲರ ಸಂಘ, ದಾವಣಗೆರೆ, ಗ್ರಾಮ ಪಂಚಾಯಿತಿ ಕಕ್ಕರಗೊಳ್ಳ, ದಾವಣಗೆರೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಕ್ಕರಗೊಳ್ಳ ಗ್ರಾಮದಲ್ಲಿ ಒಂದು ದಿನದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರುದ್ಯೋಗ ಯುವಕ, ಯುವತಿಯರಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
ಶಾಲಾ ಮಕ್ಕಳಿಗೆ ವಿಶೇಷವಾಗಿ ಅವರ ತಂದೆ ತಾಯಿಗಳಿಗೆ ಕಾನೂನಿನ ಬಗ್ಗೆ ಅರಿವು ಪಡೆಯಬೇಕೆಂದು ತಿಳಿಸಿದ ಅವರು ರಕ್ತದಾನದ ಮಹತ್ವ, ಉತ್ತಮ ಗುಣಮಟ್ಟದ ಆಹಾರದ ಬಗ್ಗೆ ವಿವರಿಸಿ ಜೊತೆಗೆ ಶಿಕ್ಷಣವು ಮಹತ್ವವನ್ನು ತಿಳಿಸಿ ತಂದೆ ತಾಯಿಗಳು ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡುವ ಜವಾಬ್ದಾರಿ ಇದೆ ಎಂದರು.
ಮುಖ್ಯ ಅತಿಥಿ ಗೌರವಾನ್ವಿತ ಮಹಾವೀರ್ ಎಂ. ಕರಣ್ಣನವರ್ ಕಾರ್ಯಕ್ರಮದಲ್ಲಿ ಉಚಿತ ಕಾನೂನಿನ ನೆರವು ಬಗ್ಗೆ ಮಾಹಿತಿ ತಿಳಿಸಿ ಉಚಿತ ಕಾನೂನಿನ ನೆರವನ್ನು ಯಾರು ಯಾರು ಪಡೆದುಕೊಳ್ಳಬಹುದು. ಉಚಿತ ಕಾನೂನಿನ ಅರಿವು ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಹೆಚ್ಚಿನ ಮಟ್ಟದಲ್ಲಿ ಯೋಜನೆಮಾಡಿ ಅರಿವು ಮಾಡಿಸಬೇಕೆಂದು ತಿಳಿಸಿದರು.
ವಿಶ್ರಾಂತ ಉಪಕುಲಪತಿ ಪ್ರೊ. ಡಾ, ಕೆ. ಸಿದ್ದಪ್ಪ ಮಾತನಾಡಿ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ವತಿಯಿಂದ ಇತರ ಅರಿವು ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾನ್ಯ ಜನರಿಗೂ ಕೂಡ ಕಾನೂನಿನ ಅರಿವು ಇರಬೇಕೆಂದು ಹೇಳಿದರು. ಕಾನೂನು ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿ ಇಂತಹ ಕಾನೂನು ಅರಿವು ಕಾರ್ಯಕ್ರಮವನ್ನು ಹೆಚ್ಚಾಗಿ ಹಳ್ಳಿಗಳಲ್ಲಿ ಆಯೋಜಿಸಬೇಕೆಂದು ತಿಳಿಸಿದರು.
application; ವಿವಿಧ ಸೇವೆಗಳ ನೀಡುತ್ತಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಆರ್.ಎಲ್, ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್. ಯತೀಶ್ ರವರು ಗ್ರಾಮದ ಮುಖಂಡರಿಗೆ ಕಾನೂನಿನ ಬಗ್ಗೆ ಯಾವ ರೀತಿ ಕನಿಷ್ಠ ತಿಳುವಳಿಕೆ ಇರಬೇಕೆಂದು ತಿಳಿಸಿದರು.
ಕಾನೂನಿನ ಅಡಿಯಲ್ಲಿ ಬರುವಂತಹ ಕಾಯ್ದೆ ಕಲಂಗಳ ಬಗ್ಗೆ ಹಾಗೂ ಸಂವಿಧಾನದ ಅನುಚೇಧದ ಬಗ್ಗೆ ವಿಶೇಷವಾಗಿ ಕಿರುಪರಿಚಯವನ್ನು ಜನಸಾಮಾನ್ಯರಿಗೆ ತಿಳಿಸಿ ಮುಂದೆ ಬರುವಂತಹ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಕಾನೂನಿನ ಬಗ್ಗೆ ಅಭ್ಯಾಸಿಸುವಲ್ಲಿ ಯಶಸ್ಸನ್ನು ಹೊಂದಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಜಿ. ಬಸವನಗೌಡ್ರು ಕಕ್ಕರಗೊಳ್ಳ ಗ್ರಾಮದಲ್ಲಿ ನಡೆದ ಒಂದು ದಿನದ ಉಚಿತ ಕಾನೂನು ಅರಿವು- ನೆರವು ಕಾರ್ಯಕ್ರಮದ ಬಗ್ಗೆ ನಮ್ಮ ಊರಿನ ಜನಸಾಮಾನ್ಯರಿಗೆ ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ಹಾಗೂ ಆರ್.ಎಲ್. ಕಾನೂನು ಕಾಲೇಜು ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು-ಸಿರಿವು ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದ ಯಶಸ್ವಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾಗೂ ಕಾನೂನಿನ ಅರಿವು-ನೆರವು ಕಾರ್ಯಕ್ರಮದ ಪೂರ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯ ವರದಿ ಬಗ್ಗೆಯು ಸಹ ಮಾತನಾಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಯಾವ ರೀತಿಯಲ್ಲಿ ಕಾನೂನಿನ ಅಡಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿನಿಯಾದ ಎಸ್.ಕೆ. ಸುಷ್ಮಾ ಪ್ರಾರ್ಥನೆ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಆರ್.ಡಿ. ಕುಲಕರ್ಣಿ, ಗ್ರಾಮದ ಮುಖಂಡರುಗಳಾದ ಕೆ.ಜಿ. ಮಹಾಂದಾತಪ್ಪ, ವೈ.ಆರ್. ಧನ್ಯಕುಮಾರ್, ಎಂ.ಟಿ. ನಾಗರಾಜ, ಕಾರ್ಯಕ್ರಮದ ಸಂಯೋಜಕ ವಿದ್ಯಾಧರ ವೇದವರ್ಮ ಟಿ. ಮತ್ತಿತರರಿದ್ದರು.
ನಂತರ ಮಧ್ಯಾಹ್ನ 3 ಸಂಜೆ 4.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕಾಲೇಜು ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿತ್ತು. ಸಂಜೆ 5 ಗಂಟೆಗೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು. ಈ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜೇಶ್ವರಿ ಎನ್. ಹೆಗಡೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ದಾವಣಗೆರೆ ಜೊತೆಗೆ ಎಲ್. ಎಚ್. ಅರುಣ್ ಕುಮಾರ್ ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ ದಾವಣಗೆರೆ ಮಂಜುನಾಥ ಬಿ. ಕಾನೂನು ಅಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿ, ದಾವಣಗೆರೆ. ಡಾ. ಜಿ.ಎಸ್. ಯತೀಶ್ ಪ್ರಾಂಶುಪಾಲರು, ಆ.ಎಲ್. ಕಾನೂನು ಕಾಲೇಜು, ದಾವಣಗೆರೆ ಕೊಟ್ರಮ್ಮ ಕೋಂ ವಿರೇಶ್, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಕಕ್ಕರಗೊಳ್ಳ, ದಾವಣಗೆರೆ, ಗುತ್ಯಪ್ಪ ಎಸ್. ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಕಕ್ಕರಗೊಳ್ಳ, ದಾವಣಗೆರೆ ಇವರ ಜೊತೆಗೆ ಕಕ್ಕರಗೊಳ್ಳ ಗ್ರಾಮಪಂಚಾಯಿತಿಯ ಸರ್ವಸದಸ್ಯರು, ಗ್ರಾಮಸ್ಥರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ಕೊನೆಯದಾಗಿ ವೇದಿಕೆಯ ಮೇಲೆ ಹಾಜರಿದ್ದ ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡುವ ಮೂಲಕ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.
ನಂತರ ಗ್ರಾಮಸ್ಥರು ಕೆಲವೊಂದು ಕಾನೂನು ಸಮಸ್ಯೆಗಳು ಮತ್ತು ಗ್ರಾಮದ ಸಮಸ್ಯೆಗಳ ಕುರಿತು ಗಣ್ಯರಿಗೆ ಮನವಿ ಸಲ್ಲಿಸಿದರು. ಈ ಕುರಿತಂತ ಗಣ್ಯರ ಲಿಖಿತ ಅರ್ಜಿಯ ಮೂಲಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಿದರು. ಈ ರೀತಿಯಾಗಿ ಕಾರ್ಯಕ್ರಮವು ನೆರೆದಿದ್ದ ಗ್ರಾಮಸ್ಥರು ಗ್ರಾಮದ ವಿದ್ಯಾರ್ಥಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕಾನೂನು ಅರಿವು-ನೆರವು ನೀಡುವುದರ ಮೂಲಕ ಯಶಸ್ವಿಯಾಗಿ ಮುಕ್ತಾಯವಾಯಿತು.
ಆರ್.ಎಲ್. ಕಾನೂನು ಕಾಲೇಜಿನ ಕಾನೂನು ಸಲಹಾ ಕೇಂದ್ರದಲ್ಲಿ ವಿದ್ಯಾಧರ ವೇದವರ್ಮ ಟಿ. ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಚಾಲಕರು, ಕಾನೂನು ನೆರವು ಕೋಶ, ಆರ್.ಎಲ್. ಕಾನೂನು ಕಾಲೇಜು, ದಾವಣಗೆರೆ ಇವರಲ್ಲಿ ಉಚಿತ ಕಾನೂನಿನ ಸಲಹೆಯನ್ನು ಪಡೆಯಲು ಗ್ರಾಮಸ್ಥರಲ್ಲಿ ತಿಳಿಸಿದರು.