“ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ” :  ಬಸವರಾಜು ವಿ ಶಿವಗಂಗಾ 

"ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ" :  ಬಸವರಾಜು ವಿ ಶಿವಗಂಗಾ 

ಚನ್ನಗಿರಿ: ವಿದ್ಯಾರ್ಥಿಗಳು ಆತ್ಮವಿಶ್ವಾಸ, ಮಾನಸಿಕ ಜಾಗರೂಕತೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಶಾಲೆಗಳಲ್ಲಿ ಕ್ರೀಡೆಯು ಮುಖ್ಯವಾಗಿದೆ ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  ನೀತಿಗೆರೆ ಗ್ರಾಮದ ಎಸ್ .ವಿ.ಎಸ್. ಹಿ.ಪ್ರಾ. ಶಾಲೆಯಲ್ಲಿ ಚಿಕ್ಕಗಂಗೂರು ಹೆಬ್ಬಳಗೆರೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ  ಚಾಲನೆ ನೀಡಿ ಈ ವಿಷಯ ತಿಳಿಸಿದರು.

"ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ" :  ಬಸವರಾಜು ವಿ ಶಿವಗಂಗಾ 

ಕ್ರೀಡೆಯಿಂದ ನಾಯಕತ್ವ, ತಾಳ್ಮೆ, ತಾಳ್ಮೆ, ತಂಡದ ಪ್ರಯತ್ನಗಳು ಮತ್ತು ಸಾಮಾಜಿಕ ಕೌಶಲ್ಯಗಳಂತಹ ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸಹಾಯ ಮಾಡುತ್ತದೆ. ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.  ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು ಮತ್ತು ಕಾಯಿಲೆಗಳನ್ನು ತಡೆಯಬಹುದು. ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡಿದರೆ ದೇಶಕ್ಕೆ ಕೀರ್ತಿ ತರಬಹುದು.

"ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ" :  ಬಸವರಾಜು ವಿ ಶಿವಗಂಗಾ 

ಸಾಧನೆ ಮಾಡಿದರೆ ಅರ್ಜುನ, ಉತ್ತಮ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನ ನೀಡಲಾಗುತ್ತದೆ. ನೀವೆಲ್ಲರೂ ಸಹ ಪಾಠದ ಜೊತೆ ಆಟವನ್ನು ಶ್ರದ್ಧೆಯಿಂದ ಕಲಿತು ಸಾಧನೆ ಮಾಡಲಿ ಎಂದರು. ನಂತರ  ದೇವರಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ  ದೇವರಹಳ್ಳಿ-ಕಗತೂರು ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೂ ಶಾಸಕರಾ ಬಸವಾರಜು ವಿ ಶಿವಗಂಗಾ ಚಾಲನೆ ನೀಡಿದರು. ಈ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!