sports; ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಡಾ.ವಸುಂಧರ ಶಿವಣ್ಣ

ದಾವಣಗೆರೆ, ಅ.05: ಕ್ರೀಡೆಗಳಲ್ಲಿ (sports) ಸೋಲು ಗೆಲುವು ಸಹಜ, ಭಾಗವಹಿಸುವಿಕೆ ಮುಖ್ಯ ಎಂದು ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ನಿರ್ದೇಶಕ ಡಾ.ವಸುಂಧರ ಶಿವಣ್ಣ ಹೇಳಿದರು.

ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಟೆನ್ನಿಸ್ ಕ್ರೀಡಾಂಗಣದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಸಹಯೋಗದಲ್ಲಿ ನಡೆದ ಟೆನ್ನಿಸ್‌ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಆಟಗಳನ್ನು ಆಡುವುದರಿಂದ ದೈಹಿಕವಾಗಿ ಅಲ್ಲದೇ ಮಾನಸಿಕವಾಗಿಯೂ ನಿಮ್ಮನ್ನು ಸದೃಢವಾಗಿಸುವುದು. ಕ್ರೀಡೆಗಳಿಂದ (sports) ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಐ.ಎಂ.ಅಲಿ ಮಾತನಾಡಿ, ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬಂದು ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯ. ನಿಮ್ಮ ಪ್ರತಿಭೆಯನ್ನು ತೋರ್ಪಡಿಸಿ ವಿಜಯ ಸಾಧಿಸಿ ನಿಮ್ಮಗಳ ಕಾಲೇಜಿಗೆ, ಪೋಷಕರಿಗೆ ಕೀರ್ತಿ ತನ್ನಿರಿ ಎಂದು ಹಾರೈಸಿದರು.

Cricket; ವಿಶ್ವಕಪ್ ಕ್ರಿಕೆಟ್ ಪ್ರಾರಂಭ; ಪೊಲೀಸರೇ, ಹಾಸ್ಟೆಲ್ ಗಳ ಮೇಲೆ ಗಮನವಿರಲಿ

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಡೆಪ್ಯೂಟಿ ರಿಜಿಸ್ಟಾçರ್ ಡಾ.ಸಚ್ಚಿದಾನಂದ, ವಿವಿ ಅಬ್ಜರ್‌ವರ್ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್.ಗೋಪಾಲಕೃಷ್ಣ, ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಕ್ರೀಡಾ ಆಯೋಜಕ ಸಿ.ಪಿ.ಮಹೇಶ, ಎಸ್‌ಎಸ್‌ಐಎಂಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪಿ.ವಿಷ್ಣು, ಹುಬ್ಬಳ್ಳಿ ಕಿಮ್ಸ್ನ ದೈಹಿಕ ಶಿಕ್ಷಣ ನಿರ್ದೇಶಕ ಅರುಣ್, ಕೋಚ್ ಮಹಾಂತೇಶ ಸೇರಿದಂತೆ ಇತರರು ಇದ್ದರು.

ಈ ಸ್ಪರ್ಧೆಯಲ್ಲಿ ದಾವಣಗೆರೆ ಸೇರಿದಂತೆ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!