Cricket; ವಿಶ್ವಕಪ್ ಕ್ರಿಕೆಟ್ ಪ್ರಾರಂಭ; ಪೊಲೀಸರೇ, ಹಾಸ್ಟೆಲ್ ಗಳ ಮೇಲೆ ಗಮನವಿರಲಿ

ದಾವಣಗೆರೆ, ಅ.04: ಅಕ್ಟೋಬರ್ 5ರಿಂದ ವಿಶ್ವ ಕಪ್ ಕ್ರಿಕೆಟ್ (Cricket) ಪಂದ್ಯಾವಳಿಗಳು ಪ್ರಾರಂಭವಾಗುತ್ತಿದ್ದು, ಕ್ರೀಡಾಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಕ್ರೀಡೆ ಕೇವಲ ಮನೋರಂಜನೆಯಾಗದೇ ಜುಜಾಟಕ್ಕೆ ತಿರುಗಿರುವ ಕಾರಣ ಹಾಸ್ಟೆಲ್ಲುಗಳಲ್ಲಿ ಹಾಗೂ ಪಿಜಿಗಳಲ್ಲಿ ಇರುವ ಮಕ್ಕಳ ಪೋಷಕರು ಭಯದಿಂದ ದಿನದೂಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಇದಕ್ಕೆ ಕಳೆದ ಮೂರು ನಾಲ್ಕು ವರ್ಷಗಳಿಂದ ನಡೆದಿರುವಂತಹ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳೇ ಸಾಕ್ಷಿಯಾಗಿವೆ.

ಬುಕ್ಕಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಜೂಜಾಟಕ್ಕೆ ಪ್ರಚೋದನೆ ನೀಡುತ್ತಿರುವ ದೂರುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿದ್ದು ಪೊಲೀಸ್ ಇಲಾಖೆ ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಜೂಜಾಟಕ್ಕೆ ಕಡಿವಾಣ ಹಾಕಬೇಕಾಗಿದೆ.

ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ಅವರ ‘ಕೂ’ ಕ್ರಿಕೆಟ್ ಗೀತೆ.! ನೆಟ್ಟಿಗರ ಮೈನವಿರೇಳಿಸಿದೆ ‘ಕೂ ಪೇ ಬೊಲೆಗಾ’ ಹಾಡು.!

ಈಗ ಜೂಜಾಟಗಳು ಮೊಬೈಲ್ಗಳ ಮೂಲಕ ಆನ್ಲೈನ್ ಮೂಲಕ ನಡೆಯುತ್ತಿರುವುದರಿಂದ ಎಲ್ಲೂ ದೂರದಲ್ಲಿ ಕುಳಿತ ಬುಕ್ಕಿಗಳು ಅಲ್ಲಿಂದಲೇ ಜೂಜಾಟವನ್ನು ನಿಯಂತ್ರಿಸುತ್ತಿದ್ದು ಇಲಾಖೆ ಅಂತಹ ತಂತ್ರಜ್ಞಾನಕ್ಕೆ ಪರ್ಯಾಯ ವ್ಯವಸ್ಥೆಯ ಮೂಲಕ ಕಂಡುಹಿಡಿಯುವ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿರುವ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ರೀತಿಯಲ್ಲಿ ಶಿಕ್ಷಿಸಬೇಕಾಗಿದೆ.

ಜಿಲ್ಲೆಗೆ ನೂತನವಾಗಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಂದಿರುವ ಉಮಾ ಪ್ರಶಾಂತ್ ರವರು ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟಲು ವಿಶೇಷ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ಹಾಸ್ಟೆಲ್ ಗಳ ಮೇಲೆ ಹಾಗೂ ಪಿಜಿಗಳ ಮೇಲೆ ವಿಶೇಷ ಗಮನವಿಟ್ಟು, ನೂರಾರು ಕನಸುಗಳೊಂದಿಗೆ ವಿದ್ಯಾಭ್ಯಾಸಕ್ಕಾಗಿ ತಮ್ಮ ಮಕ್ಕಳನ್ನು ನಗರಕ್ಕೆ ಕಳಿಸಿರುವ ಪೋಷಕರ ನೆಮ್ಮದಿಗೆ ಕಾರಣರಾಗಲು ಲಕ್ಷಾಂತರ ಪೋಷಕರ ಪರವಾಗಿ ಈ ಮನವಿ ಮಾಡಲಾಗುವುದು.

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *

error: Content is protected !!