ದಾವಣಗೆರೆಯಲ್ಲಿ ಶ್ರೀರಾಮ ದರ್ಬಾರ್

Sri Rama Darbar at Davangere
ದಾವಣಗೆರೆಯ ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ವೇದಪೀಠದ ವತಿಯಿಂದ ಶ್ರೀ ಸಮೀರಣಾಚಾರ್ಯ ಕಂಠದಲ್ಲಿ ಅವರಿಂದ ಶ್ರೀರಾಮ ದರ್ಬಾರ್ ವಿಶೇಷವಾದ ಪೂಜಾ ಕಾರ್ಯಕ್ರಮ ನಡೆಯಿತು.. ರಾಮೇಶ್ವರ ರಿಂದ ಆಗಮಿಸಿದ ಶ್ರೀ ರಾಮ ದೇವರ ಸುಂದರ ಮೂರ್ತಿಗಳಿಗೆ ಅಲಂಕಾರ ಹಾಗು ರಾಮರಕ್ಷಾ ಸ್ತೋತ್ರ ಪಾರಾಯಣಪೂರ್ವಕ ಶ್ರೀ ರಾಮ ದರ್ಬಾರ್ ಪೂಜಾ ಕೈಂಕರ್ಯಗಳು ನಡೆದವು…ಜೊತೆಗೇ ಶ್ರೀ ಚಕ್ರ ಶಕ್ತಿಪೀಠ ಪೂಜೆಯು ನಡೆಯಿತು. ವಿಭಿನ್ನವಾದ ಈ ಪೂಜಾ ಕೈಂಕರ್ಯಕ್ರಮಕ್ಕೆ ಭಕ್ತ ಸಮೂಹ ಪಾಲ್ಗೊಂಡಿದ್ದರು.
ನಂತರ ಸಂಘದ ಕಡೇ ಕಾರ್ತೀಕ ಸೇವೆ ವಿಜೃಂಭಣೆಯಿಂದ ಆಚರಿಸಲಾಯಿತು. ಪೂಜಾ ಸಮಯದಲ್ಲಿ ಶ್ರೀ ಗೊಗ್ಗಿ ಸಂಜೀವಾಚಾರ್, ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದ ಸದಸ್ಯರು, ಮಾಧ್ವ ಯುವಕ ಸಂಘದ ಸದಸ್ಯರು ಹಾಗು ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.