scouts and Guides; ಸ್ಕೌಟ್ಸ್ ಮತ್ತು ಗೈಡ್ ಧ್ವಜ ಚೀಟಿ ಬಿಡುಗಡೆ
ದಾವಣಗೆರೆ, ನ.08: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ (scouts and Guides) ಧ್ವಜ ಸಂಸ್ಥಾಪನಾ ದಿನ ಪ್ರಯುಕ್ತ ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಧ್ವಜ ಚೀಟಿಯನ್ನು ಬಿಡುಗಡೆ ಮಾಡಿದರು.
ದಾವಣಗೆರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ಹಾಗೂ ದಾವಣಗೆರೆ ಜಿಲ್ಲೆ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ಅವರು ಧ್ವಜ ಚೀಟಿಯನ್ನು ಬಿಡುಗಡೆ ಮಾಡಿದರು.
ಭಾರತದ ಸ್ವಾತಂತ್ರದ ಮೊದಲು ಇದ್ದ ಪ್ರಾಂತೀಯ ಸ್ಕೌಟ್ ಸಂಸ್ಥೆಗಳನ್ನು ಒಗ್ಗೂಡಿಸಿ ದಿನಾಂಕ 7/11/1950 ರಂದು ರಾಷ್ಟ್ರ ಮಟ್ಟದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಪ್ರತಿ ವರ್ಷ ಈ ದಿನ ಸಂಸ್ಥಾಪನಾ ದಿನವಾಗಿ ಆಚರಿಸಿ ಧ್ವಜ ಚೀಟಿಯನ್ನು ಬಿಡುಗಡೆ ಮಾಡುವ ವಾಡಿಕೆ ಇದೆ.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ. ಪಿ. ಶಡಕ್ಷರಪ್ಪ, ಗೈಡ್ ಆಯುಕ್ತೆ ಶಾರದಾ ಮಾಗನ್ಹಳ್ಳಿ, ಜಿಲ್ಲಾ ಕಾರ್ಯದರ್ಶಿ ರತ್ನಾ ಎಂ, ಸಹ ಕಾರ್ಯದರ್ಶಿ ಸುಖವಾಣಿ, ಜಿಲ್ಲಾ ಸಹಾಯಕ ಆಯುಕ್ತ ಎನ್ ಕೆ. ಕೊಟ್ರೇಶ್ ಮತ್ತು ನೂರುಲ್ಲಾ. ಎ. ಶಿವಪ್ಪ ಭಾಗವಹಿಸಿದರು.