ಎಸ್ ಎಸ್ ಮಲ್ಲಿಕಾರ್ಜುನರನ್ನ 2013ರ ಚುನಾವಣೆಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶಪಥ – ಹೆಚ್.ಬಿ ಬಸವರಾಜಪ್ಪ

ಎಸ್ ಎಸ್ ಮಲ್ಲಿಕಾರ್ಜುನರನ್ನ 2013ರ ಚುನಾವಣೆಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶಪಥ - ಹೆಚ್.ಬಿ ಬಸವರಾಜಪ್ಪ

ದಾವಣಗೆರೆ: ದಾವಣಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯ ಬೇತೂರು, ಬಿ ಕಲ್ಪನಹಳ್ಳಿ, ಚಿತ್ತನಹಳ್ಳಿ, ರಾಂಪುರ, ಲಿಂಗದಹಳ್ಳಿ, ಬಸವನಾಳ ಗ್ರಾಮದ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು,ಯುವಕರು ಮತ್ತು ಎಸ್.ಎಸ್.ಎಂ ಅಭಿಮಾನಿಗಳು ಸಭೆ ಬೇತೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಿರಿಯ ಮುಖಂಡರಾದ ಕಲ್ಪನಹಳ್ಳಿ ಗೌಡ್ರು ಶೇಖರಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡ ಮುಖಂಡರು ಹಾಗೂ ಕಾರ್ಯಕರ್ತರು ಎಸ್.ಎಸ್ ಮಲ್ಲಿಕಾರ್ಜುನ್ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಾದ ಕೆರೆ ಅಭಿವೃದ್ಧಿ, ಸಿಸಿ ರಸ್ತೆ, ಕುಡಿಯುವ ನೀರು, ಹಾಗೂ ಇನ್ನಿತರ ದೂರದೃಷ್ಟಿ ಯೋಜನೆಗಳ ಯಶಸ್ವಿಯ ಅನುಷ್ಠಾನವನ್ನ ಶ್ಲಾಘಿಸಿದರು.
ಮಾಜಿ ಕಾಡಾ ಸಮಿತಿ ಸದಸ್ಯರಾದ ಹೆಚ್.ಬಿ ಬಸವರಾಜಪ್ಪ ಮಾತನಾಡಿ ಮಲ್ಲಿಕಾರ್ಜುನ ರವರನ್ನ 2013ರ ಚುನಾವಣೆಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಇಂದೇ ನಾವೆಲ್ಲರೂ ಶಪಥ ಮಾಡೋಣ ಎಂದು ತಿಳಿಸಿದರು.


ಈ ಸಭೆಯಲ್ಲಿ ಪತ್ರಿ ಬಸಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಮುದೇಗೌಡ್ರ ಗಿರೀಶ್, ಬೇತೂರು ಪ್ರಭು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ ಕರಿಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ ಪರಶುರಾಮ್, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಕಲ್ಪನಹಳ್ಳಿ ಸೋಮಶೇಖರಪ್ಪ, ಬೇತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಮ್ಮ ಬಸವನ ಗೌಡ್ರು, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಆಶಾ ಮುರಳಿ, ಮುಖಂಡರಾದ ಹಳ್ಳಿಕೇರಿ ಸಿದ್ದಪ್ಪ, ಬೆನವಪ್ಪಳ ಬಂದಪ್ಪ, ಪೂಜಾರ್ ನಾಗೇಂದ್ರಪ್ಪ, ಪೂಜಾರ್ ಹಾಲಪ್ಪ, ಬೆನವಪ್ಪಳ ಶಿವಕುಮಾರ, ಎ.ಕೆ ಕೊಂಡಜ್ಜಿ ಬಸವರಾಜಪ್ಪ,ಹದಡಿ ಹನುಮಂತಪ್ಪ, ರಮೇಶ್ ರಾಂಪುರ, ಕೆ.ಜಿ. ಚಂದ್ರಪ್ಪ ಕಲ್ಪ್ನಳ್ಳಿ, ಕೆ.ಬಿ ಬಸವಲಿಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!