ಹಿಂದುಳಿದ ವರ್ಗಗಳ ಹಕ್ಕು ಕಬಳಿಕೆಯ ಹುನ್ನಾರ

ಹಿಂದುಳಿದ ವರ್ಗಗಳ ಹಕ್ಕು ಕಬಳಿಕೆಯ ಹುನ್ನಾರ

ಚನ್ನಗಿರಿ :ಸಂವಿಧಾನದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಹಕ್ಕುಗಳನ್ನು ಬಲಾಡ್ಯ ಜಾತಿಗಳು ಕಬಳಿಸಲು ಹುನ್ನಾರ ನಡೆಸಿವೆ ಎಂದು ಚನ್ನಗಿರಿ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ಸಿ. ಸಿದ್ದಪ್ಪ ಆರೋಪಿಸಿದರು.
ಪಟ್ಟಣದ ಲೋಹಿಯ ಭವನದಲ್ಲಿ ಸಾಮಾಜಿಕ ಹರಿಕಾರ ದಿ. ದೇವರಾಜ ಅರಸ್ಸು ನೆನಪು ಮತ್ತು ನೂತನ ತಾಲೂಕು ಸಂಘ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದುಳಿದ ಜನಾಂಗಗಳ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪ್ರಭಾವಿ ನಾಯಕರಿಂದ ಕಸಿದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷವಾದರೂ, ಮಡಿವಾಳ, ಬೆಸ್ತ, ಅರಸ, ತಿಗಳ,ಕುಂಬಾರ, ಸವಿತಾ ಸಮಾಜ, ವಿಶ್ವಕರ್ಮ, ಕುರುಬ, ಉಪ್ಪಾರ, ದೇವ ಜನಾಂಗ, ಗೊಲ್ಲ, ಈಡಿಗ, ದೊಂಬಿದಾಸ, ಸೇರಿದಂತೆ ಇತರೆ ನೂರಾರು ಸಣ್ಣ ಜಾತಿಗಳ ವರ್ಗ ದವರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯದಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.
ತಾಲ್ಲೂಕಿನಲ್ಲಿ ಹಿಂದುಳಿದ ವರ್ಗದ ಜನರನ್ನು ರಾಜಕಾರಣದಲ್ಲಿ ಬಳಸಿಕೊಂಡು ಅಧಿಕಾರ ಗೆದ್ದುಗೆ ಏರುವ ರಾಜಕಾರಣಿಗಳು ಊಟದ ಎಂಜಲಿನ ತಟ್ಟೆಯಂತೆ ಹಿಂದುಳಿದ ವರ್ಗಗಳನ್ನು ಬಿಸಾಡುತ್ತಿದ್ದಾರೆ ತಕ್ಷಣ ಹಿಂದುಳಿದ ವರ್ಗದ ಜನರು ಜಾಗೃತ ರಾಗಬೇಕು ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು ಹಾಗೂ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನರು ಶೇ. 63ರಷ್ಟು ಜನ ಸಂಖ್ಯೆ ಇದ್ದರೂ, ಕೇವಲ ಶೇ.6ರಷ್ಟು ಸಂಖ್ಯೆ
ಇರುವ ಮೇಲ್ವರ್ಗದ ಪಂಚಮಸಾಲಿ ಲಿಂಗಾಯಿತರು, ಕುಂಚಿಟಿಗ ಒಕ್ಕಲಿಗ ಸಮುದಾಯವು ಹಿಂದುಳಿದ ವರ್ಗದ 2 ಎಗೆ ಮೇಲ್ವರ್ಗ ದವರನ್ನು ಮೀಸಲಾತಿ ಪಟ್ಟಿಗೆ ಸೇರಿಸಿದರೆ, ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯವಾಗುತ್ತದೆ.
ಹೀಗಾಗಿ, ಈ ಧೋರಣೆಯನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಂಘಟನೆ ನಡೆಯುತ್ತಿದ್ದು, ಹಿಂದುಳಿದ ವರ್ಗಗಳ ಸಭೆ ನಡೆಸುವ ಮೂಲಕ. ಹಕ್ಕು ಜಾಗೃತಿಗಾಗಿ ಹೋರಾಟ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಬುಳ್ಳಿ ನಾಗರಾಜ್ ಮಾತನಾಡಿ. ನಮ್ಮ ಹೋರಾಟ ರಾಜಕೀಯ ರಹಿತವಾಗಿದೆ. ಹಿಂದುಳಿದ ವರ್ಗದವರ ಹಿತಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಹಿಂದುಳಿದ ಸಮುದಾಯದ ಡಿ.ದೇವರಾಜ ಅರಸು, ಎಸ್‌.ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗ ಹಾಗೂ ದಲಿತರ ಅಭಿವೃದ್ಧಿಗೆ ಆನೇಕ ಯೋಜನೆ ಜಾರಿಗೆ ತಂದು ಈ
ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ದಾವಣಗೆರೆ ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕಲಮರಳಿ ಮಾತನಾಡಿ, ಹಿಂದುಳಿದ ವರ್ಗ ಎಂದರೆ ಒಂದು ಜಾತಿ, ಮತಕ್ಕೆ ಸೀಮಿತವಲ್ಲ. ಶೋಷಿತ ಸಮಾಜಗಳಿಗೆ ಸ್ವಾಭಿಮಾನದ ಬದಕು ರೂಪಿಸಿದ ಧೀಮಂತ ನಾಯಕರಾಗಿದ್ದರು. ಇಂದು ಹಿಂದುಳಿದ ವರ್ಗದವರು ಉನ್ನತ ಹುದ್ದೆಗಳಲ್ಲಿರಲು, ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಡಿ. ದೇವರಾಜ ಅರಸು ಮಹತ್ವದ ಪಾತ್ರ ವಹಿಸಿದ್ದರು ಎಂದರು. ದಲಿತರಾಗಿ ಹೋರಾಡಿದ ಡಾ| ಬಾಬಾಸಾಹೇಬ್‌
ಅಂಬೇಡ್ಕರ್‌ರಂಥ ಮಹನೀಯರ ಸಾಲಿನಲ್ಲಿ ಅರಸು ಕೂಡ ನಿಲ್ಲುತ್ತಾರೆ. ಜೀತ ಪದ್ಧತಿ ಹೋಗಲಾಡಿಸುವ
ನಿಟ್ಟಿನಲ್ಲಿ ಉಳುವವನೇ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಮೂಲಕ ಡಿ.ದೇವರಾಜ ಅರಸು
ಭೂಹೀನರ ಆಶಾಕಿರಣವಾದರು. ದೇವರಾಜ ಅರಸು ಅವರಿಗೆ ಅಧಿಕಾರ ಸಿಗದಿದ್ದರೆ, ಇಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಮರೀಚಿಕೆಯಾಗುತ್ತಿತ್ತು. ಉಳುವವನೇ ಒಡೆಯ ಎಂಬ ನಿಯಮ ಪ್ರಥಮ ಬಾರಿಗೆ ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದರಿಂದ ಎಷ್ಟೋ ಬಡ ಕುಟುಂಗಳು ಅಸ್ತಿತ್ವ ಕಂಡುಕೊಂಡವು ಎಂದರು. 12ನೇ ಶತಮಾನದಲ್ಲಿ ಶರಣರ ಹಾಗೂ ಅಂಬೇಡ್ಕರ್‌ ಅವರ ಸಮಾನತೆ ಪರಿಕಲ್ಪನೆಯನ್ನು ದೇವರಾಜ ಅರಸು ಜಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು ಎಂದು ವಿವರಿಸಿದರು
ಸಂಘದ ಗೌರವಾಧ್ಯಕ್ಷ ಟಿ.ಎಂ ರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಕೃಷ್ಣಪ್ಪ, ಸಣ್ಣಜುಂಜಪ್ಪ, ಶಾಂತಮ್ಮ, ಗ್ರಾಪಂ ಸದಸ್ಯೆ ರಾಧಮ್ಮ, ರಾಕೇಶ್ ಪಾಂಡೆ, ವಡ್ಳಾಳ್ ತಿಮ್ಮಣ್ಣ, ಸಿ.ಎಚ್ ರುದ್ರಪ್ಪ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!