ಮೀಸಲಾತಿ ಅಭ್ಯರ್ಥಿ ಇಲ್ಲದೇ, ಮೇಯರ್ ಚುನಾವಣಾ ಅಧಿಸೂಚನೆ ಹೊರಡಿಸುವುದ ಮರೆತ ರಾಜ್ಯ ಬಿಜೆಪಿ ಸರ್ಕಾರ.

ರಾಜ್ಯ ಬಿಜೆಪಿ ಸರ್ಕಾರ

ದಾವಣಗೆರೆ :ಫೆಬ್ರವರಿ 25, 2022 ರಂದು ದಾವಣಗೆರೆ ಮಹಾನಗರ ಪಾಲಿಕೆಗೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿದ್ದು, ಒಂದು ವರ್ಷ ಅವಧಿ ಮುಗಿಯುತ್ತಾ ಬಂದಿದ್ದರೂ, ಮೇಯರ್, ಉಪಮೇಯರ್ ಚುನಾವಣೆಯ ಅಧಿಸೂಚನೆ ಹೊರಡಿಸುವುದನ್ನು ಬಿಜೆಪಿ ಸರ್ಕಾರ ಮರೆತಿದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸಬೇಕಾಗಿದೆ.

ಈ ಬಾರಿಯ ಮೇಯರ್ ಚುನಾವಣೆ ಎಸ್.ಟಿ ಸಮುದಾಯಕ್ಕೆ ಮೀಸಲಾಗಿದ್ದು, ಬಿಜೆಪಿ ಪಕ್ಷದ ಯಾವೊಬ್ಬರೂ ಆ ಸಮುದಾಯದ ಸದಸ್ಯರು ಇರದ ಕಾರಣ… ಬಿಜೆಪಿ ಮೇಯರ್, ಉಪಮೇಯರ್ ಚುನಾವಣೆಯ ಬಗ್ಗೆ ಗಮನಹರಿಸದೆ ಕಾಲಹರಣ ಮಾಡುತ್ತಿದ್ದು, ಫೆಬ್ರವರಿ 25ಕ್ಕೆ ಇನ್ನು ಕೇವಲ ಏಳು ದಿನಗಳಿದ್ದು ಸರ್ಕಾರ ಮೇಯರ್, ಉಪಮೇಯರ್ ಚುನಾವಣೆಯ ಅಧಿಸೂಚನೆಯನ್ನು ಇನ್ನು ಯಾವಾಗ ಹೊರಡಿಸುತದೆಯೋ ಎಂದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!