ದಾವಣಗೆರೆಗೆ ಶೂನ್ಯ ಬಜೆಟ್ ಕೊಡುಗೆ

ದಾವಣಗೆರೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಜೆಟ್‌ನಲ್ಲಿ ನಮ್ಮ ದಾವಣಗೆರೆಗೆ ಯಾವುದೇ ರೀತಿಯ ವಿಶೇಷ ಅನುದಾನ ನೀಡದಿರುವುದು ಬೇಸರ ತಂದಿದೆ. ಕೊಂಡಜ್ಜಿ ಕರೆ

ದಾವಣಗೆರೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಜೆಟ್‌ನಲ್ಲಿ ನಮ್ಮ ದಾವಣಗೆರೆಗೆ ಯಾವುದೇ ರೀತಿಯ ವಿಶೇಷ ಅನುದಾನ ನೀಡದಿರುವುದು ಬೇಸರ ತಂದಿದೆ. ಕೊಂಡಜ್ಜಿ ಕರೆ, ಬಾತಿ ಕೆರೆ, ಸೂಳೆಕೆರೆ ಅಭಿವೃದ್ಧಿಗಳ ಕಂಡು ಬರಲಿಲ್ಲ. ಕೈಗಾರಿಕೆಗಳಿಗೆ ಒತ್ತು ಕೊಡದಿರುವುದು, ಯುವಕರಿಗೆ ಉದ್ಯೋಗ ಇಲ್ಲದಿರುವುದು, ಬಡ ಮತ್ತು ಮಧ್ಯಮ ವರ್ಗದವರಿಗೆ ಅವಶ್ಯಕ ಇರುವ ದಿನಸಿ ಪದಾರ್ಥಗಳು ಕೈಗೆಟುಕದಂತಾಗಿದೆ. ಬೆಲೆಗಳ ಇಳಿಕೆ ಎಲ್ಲಿಯೂ ಕಂಡು ಬಂದಿಲ್ಲ.

ಮಂತ್ರಿಗಳು, ರಾಜಕಾರಣಿಗಳಿಗೆ ತಮ್ಮ ಪ್ರತಿದಿನದ ಯಾವುದೇ ಕಾರ್ಯಕ್ರಮಗಳಾಗಲಿ ಅಲ್ಲಿ ಫೋಟೋ, ವೀಡಿಯೋದವರು ಬೇಕೇ ಬೇಕು. ಅವರು ಇಂತಹ ಸಂದರ್ಭದಲ್ಲಿ ಕಾಣಸಿಗಲಿಲ್ಲವೇನೋ ಅವರಿಗೆ. ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಮಾಡುವುದರ ಬಗ್ಗೆ ಮಾತನಾಡಲಿಲ್ಲ. ಫೋಟೋ ಮತ್ತು ವೀಡಿಯೋಗ್ರಾರ‍್ಸ್ಗಳು ಬಹಳ ಸಂಕಷ್ಟದಲ್ಲಿದ್ದು, ಅವರಿಗೆ ಕಾರ್ಮಿಕರಿಗೆ ನೀಡುವ ಸವಲತ್ತುಗಳು ದೊರೆತರೆ ಅನುಕೂಲವಾಗುತ್ತಿತ್ತು. 60 ವರ್ಷ ಮೇಲ್ಪಟ್ಟ ಛಾಯಾಗ್ರಾಹಕರು, ವೃತ್ತಿ ಬಾಂಧವರಿಗೆ ಪೆನ್ಷನ್ ಸವಲತ್ತುಗಳನ್ನು ನೀಡಬೇಕಿತ್ತು. ಇದರ ಬಗ್ಗೆ ಮಾತನಾಡಲಿಲ್ಲ. ತಾಂತ್ರಿಕತೆಗೆ ತಕ್ಕಂತೆ ದುಬಾರಿ ಬೆಲೆಯ ಕ್ಯಾಮರಾಗಳನ್ನು ಖರೀದಿಸಬೇಕಾಗಿದೆ. ಅದಕ್ಕೆ ಸರ್ಕಾರದಿಂದ ಸವಲತ್ತು ಹಾಗೂ ವಿಶೇಷ ಅನುದಾನವನ್ನು ನೀಡಬೇಕಿತ್ತು  ಪೆಟ್ರೋಲ್, ಇಂಧನಗಳ ಮೇಲಿನ ಸೆಸ್ ಕಡಿಮೆ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು.

ಎಂ.ಮನು, ಅಧ್ಯಕ್ಷರು, ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೊಗ್ರಾರ‍್ಸ್ ಸಂಘ, ರಾಜ್ಯಾಧ್ಯಕ್ಷರು ಕನ್ನಡ ಸಮರ ಸೇನೆ ಯುವ ಘಟಕ, ಜಿಲ್ಲಾಧ್ಯಕ್ಷರು, ವಿ.ರವಿಚಂದ್ರನ್ ಅಭಿಮಾನಿಗಳ ಸಂಘ, ದಾವಣಗೆರೆ.

Leave a Reply

Your email address will not be published. Required fields are marked *

error: Content is protected !!