2024 ರಾಜ್ಯ ಸರ್ಕಾರದ ಬಜೆಟ್ ನಲ್ಲಿ, ಎಲ್ಲವೂ ಮೈಸೂರು , ಬೆಂಗಳೂರಿಗೇ ಸೀಮಿತ

ದಾವಣಗೆರೆ: ರಾಜ್ಯ ಸರ್ಕಾರದ ಬಜೆಟ್ ನಲ್, ಎಲ್ಲವೂ ಬೆಂಗಳೂರಿಗೇ ಸೀಮಿತ , ಮಧ್ಯ ಕರ್ನಾಟಕದಲ್ಲಿ ದಾವಣಗೆರೆಯೂ ಕೂಡ ಒಂದು ಕೈಗಾರಿಕಾ ನಗರವಾಗಿತ್ತು ಎಂಬುದನ್ನು ಎಲ್ಲರೂ ಮರೆತಿದ್ದಾರೆ.

ದಶಕದ ಬೇಡಿಕೆಯಾದ ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನು  ( ಚಿತ್ರದುರ್ಗ & ಸಿರಾ ಕಡೆ ) ಈ ಬಜೆಟ್ ನಲ್ಲಿ ಇನ್ನಷ್ಟು ಚುರುಕುಗೊಳಿಸಬಹುದಾಗಿತ್ತು , ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ  SEZ , FOODPARK ಯೋಜನೆಗಳು , ಜಿಲ್ಲೆಯಲ್ಲಿ  ಜವಳಿ ಪಾರ್ಕ್ ಘೋಷಣೆ ಮಾಡಬಹುದಾಗಿತ್ತು, ದಾವಣಗೆರೆ ಜಿಲ್ಲೆಯಲ್ಲಿ ಒಂದು ಹೊಸದಾದ  IT Park , ಸುಸಜಿತ ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಮಂಜೂರು ಮಾಡಬಹುದಾಗಿತ್ತು,ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ  ಜವಳಿ ಪಾರ್ಕ್ ನಿಮಾ೯ಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ , ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ ‘ಲ್ಯಾಂಡ್‌ ಬ್ಯಾಂಕ್‌ ಮಂಜೂರು ಮಾಡಬಹುದಾಗಿತ್ತು,

ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್‌ ಪಾರ್ಕ್ ಮಂಜೂರು ಮಾಡಬಹುದಾಗಿತ್ತು…

ಧನ್ಯವಾದಗಳೊಂದಿಗೆ

ರೋಹಿತ್  ಎಸ್ ಜೈನ
ಕಾರ್ಯದರ್ಶಿ
ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ( ರೀ )
ದಾವಣಗೆರೆ

Leave a Reply

Your email address will not be published. Required fields are marked *

error: Content is protected !!