ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೆ ತೀರ್ಮಾನ

ದಾವಣಗೆರೆ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯದ ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಾಪುರಸ್ಕಾರ ನಡೆಸಲು ಚಿತ್ರದುರ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಚಿತ್ರದುರ್ಗದ ಸಿಬಾರ ಗುತ್ತಿನಾಡು ಬಳಿಯ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಆವರಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲ್‌ಸಾಬ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ದೃಢೀಕರಿಸಲಾಯಿತು. ಅಲ್ಲದೆ, 2021-22ನೇ ವಾರ್ಷಿಕ ಲೆಕ್ಕ ಪತ್ರಗಳ ಕುರಿತು ಚರ್ಚಿಸಿ ಅನುಮೊದನೆ ನೀಡಲಾಯಿತು.
ಪ್ರತಿ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿ ತಾಲೂಕಗಳಲ್ಲಿ ಪ್ರಾರಂಭದಿAದ ಇಲ್ಲಿಯವರೆಗೆ ನೋಂದಣಿಯಾಗಿರುವ ಹಾಗೂ ಲಭ್ಯ ಇರುವ ಆಜೀವ ಸದಸ್ಯತ್ವದ ಬಗ್ಗೆ ಚರ್ಚೆ ನಡೆಸಿ ಪರಿಣಾಮಕಾರಿಯಾಗಿ ಆಜೀವ ಸದಸ್ಯತ್ವ ನೋಂದಾಯಿಸಿ ಸದಸ್ಯತ್ವದ ಪಟ್ಟಿಯನ್ನು ರಾಜ್ಯ ಘಟಕಕ್ಕೆ ಕಳುಹಿಸಬೇಕು. ಮುಂದಿನ ಐದು ವರ್ಷಗಳ ಅವಧಿಗೆ ತಾಲೂಕ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಪೂರಕ ಕಾರ್ಯಚಟುವಟಿಕೆ ನಡೆಸಲು ಪ್ರತಿ ಜಿಲ್ಲೆಯಿಂದ ಒಬ್ಬರನ್ನು `ನೋಡೆಲ್ ಅಧಿಕಾರಿ’ ನೇಮಿಸಲು ನಿರ್ಧರಿಸಲಾಯಿತು.

ಸಂಘದ ಸಂಸ್ಥಾಪನೆಯ ದಿನವಾದ ಆಕ್ಟೋಬರ್ 21 ರಂದು ವಿವಿಧ ರಂಗಗಳಲ್ಲಿ ಸಾಧನೆಗೈದಿರುವ ಸಮಾಜದ ಸಾಧಕರನ್ನು ಸನ್ಮಾನಿಸಲು ನಿರ್ಣಯಿಸಲಾಯಿತು. ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲಿಂ ನಾಗತಿ ಅವರು ಸಭೆಯ ಚರ್ಚೆಯ ವಿಷಯಗಳನ್ನು ಮಂಡಿಸಿದರು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಜಿ.ಡಿ. ನದಾಫ್, ಕಾರ್ಯದರ್ಶಿ ಡಾ|| ಚಮನ್ ಫರ್ಜಾನಾ, ಶಹಾಬುದ್ದೀನಸಾಬ, ಬೆಂಗಳೂರ ವಿಭಾಗದ ಪ್ರೊ.ಸನಾವುಲ್ಲಾ ಪಿ. ಎಫ್, ಬಳ್ಳಾರಿ ವಿಭಾಗದ ಎಂ. ಇಬ್ರಾಹಿಂ, ಬಾಗಲಕೋಟೆ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷೆ ರಿಯಾನಾ ಬಾನು, ಗದಗ ವಿಭಾಗ ಪಿ. ಇಮಾಮಸಾಬ, ಮಹಮ್ಮದ ಇಸ್ಮಾಯಿಲ್, ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷ ಖಾದರ್‌ಬಾಷಾ, ನಗರ ಕಾರ್ಯದರ್ಶಿ ಶೌಕತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಸಮಾಜದ ಹಿರಿಯರು ಮತ್ತು ಯುವಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!