ಮಾದಕ ವಸ್ತುಗಳಿಂದ ದೂರವಿರಿ! ಸೈಬರ್  ಕ್ರೈಂ ಇನ್ಸ್ಪೆಕ್ಟರ್ ಮಂಜುನಾಥ

ದಾವಣಗೆರೆ: ಸದ್ದಿಲ್ಲದೆ ಹರಡುವ ಮಾದಕ ಲೋಕದ ಬಗ್ಗೆ ಜಾಗೃತರಾಗಿರಬೇಕು. ಅಪರಾಧ ಲೋಕ ದೇಶದ ಜನರನ್ನು ಹಾಳು ಮಾಡಲೆಂದೇ ಮಾದಕ ವ್ಯಸನಿಗಳಾಗಿಸಲು ಹವಣಿಸುತ್ತದೆ. ಅಗತ್ಯ ಬಿದ್ದಲ್ಲಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವ ಮೂಲಕ ಪರಿಸರ ಹಾಳಾಗದಂತೆ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಮಂಜುನಾಥ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟಿಯ ಸೇವಾ ಯೋಜನೆ ಘಟಕಗಳ ಅಡಿಯಲ್ಲಿ ಮಾದಕವಸ್ತು ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ ಸೈಬರ್ ಕ್ರೈಂ ಬ್ರಾಂಚ್ ನ ಸಬ್ ಇನ್ಸ್ಪೆಕ್ಟರ್ ಪರಮೇಶ್ವರ ಡಿ.ಜಿ. ಉದ್ದೀಪನಗೊಳಿಸುವ ಮಾದಕ ವಸ್ತುಗಳು ಹುಡುಗಾಟಿಕೆಯಿಂದ ಪ್ರಾರಂಭವಾಗಿ ಹವ್ಯಾಸವಾಗಿ ಗಟ್ಟಿಗೊಳ್ಳುತ್ತವೆ. ಮೋಜಿಗಿಂತಲೂ ಜೀವನ ಮಹತ್ವವಾದುದು ಎಂಬುದರಿಯಬೇಕು ಎಂದರು.

ಸ್ಕಿಲ್ ಡೆವಲಪ್ಮೆಂಟ್ ಸಂಚಾಲಕರಾದ ವೆಂಕಟೇಶ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿ ಒಮ್ಮೆ ಮಾದಕ ವ್ಯಸನಿಗಳಾದರೆ ಅದರಿಂದ ದೂರಾಗುವುದು ಕಷ್ಟ. ಯುವ ಮನಸ್ಸುಗಳು ಅದರಿಂದಾಗುವ ಪರಿಣಾಮಗಳನ್ನು ಲೆಕ್ಕಿಸದೆ ಅದರ ದಾಸರಾಗಿ ತಮ್ಮ ಬಂಗಾರದ0ತಹ ಜೀವನವನ್ನು ಹಾಳು ಮಾಡಿಕೊಳ್ಳುಬಾರದು ಎಂದು ಹೇಳಿದರು. ಎನ್.ಎಸ್.ಎಸ್. ಅಧಿಕಾರಿಯಾದ ಗುರುದೇವ್ ಸ್ವಾಗತಿಸಿದರು. ಹಸೀನಾ ಬೇಗಂ ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಎಸ್.ಆರ್. ಅಂಜಿನಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಚಾಲಕರಾದ ಹೆಚ್. ಗಿರಿಸ್ವಾಮಿ, ಅಧೀಕ್ಷಿತರಾದ ಗೀತಾದೇವಿ ಭಾಗವಹಿಸಿದ್ದರು. ಮೈತ್ರ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶಿವಕುಮಾರ್ ಕಂಪ್ಲಿ, ಡಾ. ಯಶೋದ, ಡಾ. ಮಂಜುನಾಥ ಭಾಗವಹಿಸಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!