ಭಾರತೀಯ ಮಜ್ದೂರ್ ಸಂಘದ ಯುವ ಕಾರ್ಯಕರ್ತರಿಗೆ ರಾಜ್ಯ ಮಟ್ಟದ ಯಶಸ್ವಿ ಅಭ್ಯಾಸ ವರ್ಗ

ದಾವಣಗೆರೆ: ದಿನಾಂಕ: 21-01-2023 ಹಗೂ 22-01-2023 ರಂದು ದಾವಣಗೆರೆ ವ್ಯಾಪ್ತಿಯ ಹಳೆ ಬಿಸ್ಲೇರಿ ಗ್ರಾಮದ ಶ್ರೀಮತಿ ಗೌರಮ್ಮ ಕುಂದೂರು ವೀರಭದ್ರಪ್ಪ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ, ಭಾರತೀಯ ಮಜ್ದೂರ್ ಸಂಘದ ಯುವ ಕಾರ್ಯಕರ್ತರಿಗೆ ರಾಜ್ಯ ಮಟ್ಟದ ಅಭ್ಯಾಸವರ್ಗ ನಡೆಸಲಾಯಿತು, ಈ ಅಭ್ಯಾಸ ವರ್ಗದಲ್ಲಿ ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಗಳನ್ನು ನಡೆಸಲಾಯಿತು. ಈ ಅಭ್ಯಾಸವರ್ಗದ ಸಂಘದ ವಿವಿದ ಪ್ರಮುಖರ, ಕಾರ್ಯಕರ್ತರ ಭೂಮಿಕೆ, ಸಕ್ಷಮ ನಾಯಕತ್ವ ಮತ್ತು ಗುಣಾತ್ಮಕ ವಾಗ್ಮೆ ಹಾಗೂ ಟ್ರೇಡ್ ಯೂನಿಯನ್ ನ ಇತಿಹಾಸ, ಬಿ.ಎಂ.ಎಸ್ ನ ತತ್ವಸಿಧ್ಧಾಂತಗಳ ಕುರಿತು ವಿಚಾರಗೊಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು.


ಇದೇ ಸಂದರ್ಭದಲ್ಲಿ 2022 ಡಿಸೆಂಬರ್ 1 ರಂದು ಜಗತ್ತಿನ 20 ಪ್ರಮುಖ ದೇಶಗಳನ್ನು ಒಗಗೊಂಡ, ಕಾರ್ಮಿಕರ ಎಲ್-20 ಶೃಂಗ ಸಭೆ, ಅಧ್ಯಕ್ಷರ ಸ್ಥಾನವನ್ನು ಬಿ.ಎಮ್.ಎಸ್ ಗೆ ದೊರೆತಿರುವ ಕುರಿತು ಹರ್ಷವ್ಯಕ್ತ ಪಡಿಸುತ್ತಾ, ಚರ್ಚೆಯನ್ನು ನಡೆಸಲಾಯಿತು. ಈ ಶೃಂಗ ಸಭೆಗೆ ವಸುದೈವ ಕುಟುಂಬ ಕಮ್ ಥೀಮ್ ನೀಡಲಾಗಿದೆ. ಈ ಸಭೆಯಲ್ಲಿ ಮೂಖ್ಯವಾಗಿ ವೈಟ್ ಕಾಲರ್ ಸ್ಲೇವ್ ಕುರಿತು ಚರ್ಚಿಸಲಾಗುವುದು, ಅದೇ ರೀತಿ ಅಸಂಘಟಿತ ಹಾಗು ಸಂಘಟಿತ ಕ್ಷೇತ್ರದಲ್ಲಿ ನಿಯಮಬಾಹೀರವಾಗಿ ಹೆಚ್ಚು ಹೆಚ್ಚು ಅವಧಿಗಳಿಗೆ ದುಡಿಸಿಕೊಳ್ಳುತ್ತಿದ್ದು. ಇದರಿಂದಾ ಮುಖ್ಯವಾಗಿ ಮಹಿಳೆಯರ ಮೇಲೆ ಒತ್ತಡಗಳು ಹೆಚ್ಚಾಗುತ್ತಿದೆ, ಅವರು ತಮ್ಮ ವೃತ್ತಿ ಕರ್ತವ್ಯಗಳನ್ನು ಮುಗಿದ ನಂತರ ಮತ್ತೆ ಮನೆಗಳಿಗೆ ತೆರಳಿ, ಪರಿವಾರದ ಇತರೆ ಕಾರ್ಯಗಳನ್ನೂ ನಿಭಾಯಿಸಬೇಕು, ಇದರಿಂದ ಅವರ ಆರೋಗ್ಯ ಮತ್ತು ಪರಿವಾರದ  ಪರಿಣಾಮ ಬೀಳುತ್ತಿದ್ದು, ಗಜತ್ತಿನ ಪ್ರಮುಖ ಉತ್ಪಾದನಾ ಕಂಪನಿಗಳು  ಸಂಬಂಧಿಸಿದ ದೇಶಗಳ ನೆಲದ ಕಾನೂನುಗಳನ್ನು ಪಾಲಿಸುವ ಕುರಿತು ಚರ್ಚಿಲಾಗುವುದು.
ಈ ಅಭ್ಯಾಸವರ್ಗದಲ್ಲಿ  ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ. ಸುರೇಂದ್ರನ್, ರಾಜ್ಯ ಪ್ರಧಾನ ಕಾರ್ಯರ್ಶಿಗಳಾ ಶ್ರೀ ವಿಶ್ವನಾಥ್, ರಾಜ್ಯ ಅಧ್ಯಕ್ಷರಾದ ಶಂಕರ್ ಸುಲೆಗಾವ್, ದಾವಣಗೆರೆ ಜಿಲ್ಲಾ ಸಂಚಾಲಕರಾದ ನಾಗರಾಜ್ ಸೂರ್ವೆ, ಕಾರ್ಯಕರ್ತರಾದ ಶಾಂತೇಶ್ ಗೌಳಿ, ಶಿವನ್ ಗೌಡ, ಗಂಗಾಧರ್. ಹಿರಿಯ ಕಾರ್ಯಕರ್ತರಾದ ಶ್ರೀ ಶಂಭುಲಿAಗಪ್ಪ, ಶ್ರೀ ವಿನಾಯಕ ರನಾಡೆ ಉಪಸ್ಥಿತರಿದ್ದರು.
ವಂದನೆಗಳೊಂದಿಗೆ,

ನಾಗರಾಜ್ ಸೂರ್ವೆ,
ದಾವಣಗೆರೆ ಜಿಲ್ಲಾ ಸಂಚಾಲಕ
9164309970

Leave a Reply

Your email address will not be published. Required fields are marked *

error: Content is protected !!