ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಮಹಿಳಾ ಬ್ಯಾಂಕ್ ಉದ್ಯೋಗಿಗಳ ಸಮಾವೇಶ
ದಾವಣಗೆರೆ :ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ವತಿಯಿಂದ ದಿನಾಂಕ 11-03-2023 ರ ಶನಿವಾರದಂದು ದಾವಣಗೆರೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ 6 ನೇ ರಾಜ್ಯ ಮಟ್ಟದ ಮಹಿಳಾ ಬ್ಯಾಂಕ್ ಉದ್ಯೋಗಿಗಳ ಸಮಾವೇಶ ನಡೆಯಲಿದೆ ಎಂದು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ತಿಳಿಸಿದರು.
ಶನಿವಾರ ಬೆಳಿಗ್ಗೆ 9.00 ಘಂಟೆಗೆ ನಗರದ ಗುಂಡಿ ವೃತ್ತದಿಂದ ಕುವೆಂಪು ಕನ್ನಡ ಭವನದವರೆಗೆ ಪ್ರತಿನಿಧಿಗಳ ಮೆರವಣಿಗೆ, 9-45 ಕ್ಕೆ ಎಐಬಿಇಎ ಸಂಘದ ಧ್ವಜಾರೋಹಣ ಹಾಗೂ 10.00 ಘಂಟೆಗೆ ಆರಂಭವಾಗುವ ಸಮಾವೇಶದ ಅಧ್ಯಕ್ಷತೆಯನ್ನು ಕೆಪಿಬಿಇಎಫ್ ಮಹಿಳಾ ಸಮಿತಿಯ ಅಧ್ಯಕ್ಷೆ ಆರ್.ಎಸ್.ಸುಮತಿ ವಹಿಸುವರು. ಉದ್ಘಾಟಕರಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ವೆಂಕಟಾಚಲಂ, ಮುಖ್ಯ ಅತಿಥಿಗಳಾಗಿ ಖ್ಯಾತ ಲೇಖಕಿ ಹೆಚ್.ಜಿ.ಜಯಲಕ್ಷ್ಮಿ ಹಾಗೂ ಎಐಬಿಇಎ ನ ಜಂಟಿ ಕಾರ್ಯದರ್ಶಿ ಲಲಿತಾ ಜೋಷಿ ಆಗಮಿಸುವರು. ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್‌ನ ಅಧ್ಯಕ್ಷ ಎಂ.ಎಸ್.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಂ.ಜಯನಾಥ್, ಮಹಿಳಾ ಕೌನ್ಸಿಲ್‌ನ ಸಂಚಾಲಕಿ ಶ್ರೀಲತಾ ಕುಲಕರ್ಣಿ, ಕೆಪಿಬಿಇಎಫ್‌ನ ಮಾಜಿ ಅಧ್ಯಕ್ಷ ಹೆಚ್.ವಸಂತ ರೈ ಉಪಸ್ಥಿತರಿರುವರು. ಅಪರಾಹ್ನ ಪ್ರತಿನಿಧಿ ಅಧಿವೇಶನ ನಡೆಯಲಿದೆ ಎಂದು ಕೆ.ರಾಘವೇಂದ್ರ ನಾಯರಿ ಮಾಹಿತಿ ನೀಡಿದರು.
ಕೆ.ರಾಘವೇಂದ್ರ ನಾಯರಿ,ಪ್ರಧಾನ ಕಾರ್ಯದರ್ಶಿ.