ಎನ್‌ಎಸ್‌ಯುಐ ಪದಾಧಿಕಾರಿಗಳ ಬಿಡುಗಡೆ ಮಾಡದಿದ್ದರೆ ಚೆಡ್ಡಿ ಸುಡುವುದರ ಮೂಲಕ ರಾಜ್ಯಾದ್ಯಂತ ಪ್ರತಿಭಟನೆ!
ದಾವಣಗೆರೆ: NSUI ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಹಾಗೂ ದಾವಣಗೆರೆ ಜಿಲ್ಲಾ NSUI ಜಿಲ್ಲಾ ಅಧ್ಯಕ್ಷರು ಅಲಿ ರಹಮತ್ ಪೈಲ್ವಾನ್ ರವರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ನಗರ ವಿಭಾಗ ಭಾರತೀಯ ಯುವ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ KPCC ಸದಸ್ಯ ಇಬ್ರಾಹಿಂ ಖಲೀಲ್‌ವುಲ್ಲಾ ಹಾಗೂ ಸಾಗರ ಎಲ್.ಹೆಚ್. ಜಿಲ್ಲಾ ಉಪಾಧ್ಯಕ್ಷರು. ಸೈಯದ್ ಇರ್ಫಾನ್ ಅಧ್ಯಕ್ಷರು, ಚಿರಂಜೀವಿ ಆರ್., ರಾಜ್ಯ ವಕ್ತಾರರು ಕೆಪಿಸಿಸಿ, ಸುಹಿಲ್ ಆರ್. ಅಧ್ಯಕ್ಷರು ಮಾಯಕೊಂಡ, ಅಯಾಜ್ ಅಹ್ಮದ್ ಅಧ್ಯಕ್ಷರು ಹರಿಹರ, ನವೀನ್ ನಲ್ವಾಡಿ ಅಧ್ಯಕ್ಷರು ದಾವಣಗೆರೆ, ರಾಕೇಶ್ ಡಿಸಿಎಂ ಉಪಾಧ್ಯಕ್ಷರು ದಾವಣಗೆರೆ, ಹರೀಶ್.ಎಸ್.ಎಮ್., ಭಾಷಾ ಆರ್‌ಬಿ ಝಡ್, ಹಬೀಬ ಉನ್ನಿಸಾ, ಹಾಲೇಶ್ ಬಿ.ಉಮೇ ಹಬೀಬ., ಜಬೀವುಲ್ಲಾ, ಸಮೀರ್ ಅಲ್ಲಾವುಲ್ಲಿ, ತಿಪ್ಪೇಶ್ ಬಸಾಪುರ್, ತೋಫಿಕ್, ಕಿರಣ್ ಡಿಸಿಎಂ, ಯುವ ಕಾಂಗ್ರೆಸ್ ಎಲ್ಲಾ ಪದಾಧಿಕಾರಿಗಳು ಇದ್ದರು. NSUI ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರನ್ನು ಬಿಡುಗಡೆಗೊಳಿಸದೆ ಹೋದರೆ ರಾಜ್ಯಾದ್ಯಂತ ಚೆಡ್ಡಿಯನ್ನು ಸುಡುವುದರ ಮುಖಾಂತರ ಹೋರಾಟವನ್ನು ಮಾಡಲಾಗುವುದು ಎಂದು ಮನವಿ ಮಾಡಲಾಯಿತು.
garudavoice21@gmail.com 9740365719