ಮೊಬೈಲ್‌ಗಳಿಂದ ದೂರವಿದ್ದು, ಶಾಲೆ ಪಾಠದ ಕಡೆ ಗಮನಕೊಡಿ : ಸಿಸ್ಟರ್ ಮಾರ್ಜರಿ

ಮೊಬೈಲ್‌ಗಳಿಂದ ದೂರವಿದ್ದು, ಶಾಲೆ ಪಾಠದ ಕಡೆ ಗಮನಕೊಡಿ : ಸಿಸ್ಟರ್ ಮಾರ್ಜರಿ

ದಾವಣಗೆರೆ : ಮಕ್ಕಳು ಮೊಬೈಲ್‌ನಿಂದ ಹೊರ ಬಂದು ಶಾಲೆಗಳಲ್ಲಿ ಶಿಕ್ಷಕರು ಕಲಿಸುವ ಪಾಠಗಳನ್ನು ಆಸಕ್ತಿಯಿಂದ ಕೇಳಿ ಅರ್ಥ ಮಾಡಿಕೊಂಡು ಮನೆಯಲ್ಲಿ ಪುನರಾವರ್ತನೆ  ಮಾಡಿಕೊಳ್ಳುವುದರಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಶಾಲೆಗೆ ಉತ್ತಮ ಫಲಿತಾಂಶ ತರಲು ಸಾಧ್ಯ ಎಂದು ಸಂತ ಪೌಲರ ಸ್ಥಳೀಯ ಸಂಸ್ಥೆ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ ಹೇಳಿದರು.

ಸೋಮವಾರ ಇಲ್ಲಿನ ಪಿ.ಜೆ.ಬಡಾವಣೆಯ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ 2023 24 ನೇ ಸಾಲಿನ ಶಾಲೆ ಆರಂಭ ಹಾಗೂ ನೂತನ ಸಿಸ್ಟರ್‌ಗಳಿಗೆ, ವಿದ್ಯಾರ್ಥಿನಿಯರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ತಂದೆ ತಾಯಿ ಕಷ್ಟಪಟ್ಟು ನಿಮ್ಮನ್ನು ಓದಿಸುತ್ತಿದ್ದಾರೆ. ಟ್ಯೂಷನ್‌ಗೆ ಎಂದು ನೀವುಗಳು ಸಮಯವನ್ನು ವ್ಯರ್ಥ ಮಾಡದೇ ಮನೆಯಲ್ಲಿಯೇ ಚೆನ್ನಾಗಿ ಕಲಿಯಿರಿ. ಉತ್ತಮ ಅಂಕ ಗಳಿಸಿ, ನಿಮ್ಮ ಪೋಷಕರಿಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತರುವಂತಾಗಬೇಕು ಎಂದರು.

ಪಾಠಗಳ ಬಗ್ಗೆ ಏನಾದರೂ ಸಂದೇಹಗಳಿದ್ದರೆ ನಿಮ್ಮ ತರಗತಿ ಶಿಕ್ಷಕರನ್ನು ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳಿರಿ. ನಿಮ್ಮ ಮುಂದಿನ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಥಮಿಕ ಹಾಗೂ ಸಿಬಿಎಸ್‌ಇ ವಿಭಾಗಕ್ಕೆ ನೂತನವಾಗಿ ವಿಭಾಗದ ಮುಖ್ಯಸ್ಥರಾಗಿ ವರ್ಗವಾಗಿ ಬಂದಂತಹ   ಸಿಸ್ಟರ್ ಲಿಂಡಾ, ಸಿಸ್ಟರ್ ರೋಸಿಂತಾ ರವರಿಗೆ ಶಾಲಾ ಆಡಳಿತ ಮಂಡಳಿ ಪರವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸಿಬಿಎಸ್‌ಇ ವಿಭಾಗದ ಪ್ರಾಚಾರ್ಯೆ ಸಿಸ್ಟರ್ ಸಮಂತ, ಶಿಕ್ಷಕರಾದ ಅಮಲ, ರಾಗಿಣಿ, ಭಾಗ್ಯನಾಥನ್, ಕಿರಣ್, ಗೋವಿಂದಪ್ಪ, ಸ್ಟೀಫನ್, ರವೀಂದ್ರ ಸ್ವಾಮಿ, ಎಲಿಸಾ, ಅನುಷಾ, ಅಶ್ವಿನಿ, ರಜನಿ, ನಯನ, ರೀಟಾ, ಫಿಲೊಮಿನಾ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರು ಭಾಗವಹಿಸಿದ್ದರು. ಶಾಲೆ ಆರಂಭದ ಹಿನ್ನಲೆಯಲ್ಲಿಂದು ಮಕ್ಕಳಿಗೆ ಬಿಸಿಯೂಟದೊಂದಿಗೆ ಸಿಹಿ ಪಾಯಸ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!