students; “ಕಾನೂನು ಅರಿವು ಕಾರ್ಯಕ್ರಮ’ ಯಶಸ್ವಿ

ದಾವಣಗೆರೆ, ಆ.22: ನಗರದ ಆರ್. ಎಲ್‌. ಕಾನೂನು ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಹಯೋಗದಲ್ಲಿ ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ (students) ಇತ್ತೀಚೆಗೆ “ಕಾನೂನು ಅರಿವು ಕಾರ್ಯಕ್ರಮ’ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶ ಪ್ರವೀಣ್ ಕುಮಾರ್.ಆರ್.ಎನ್ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಧೀಶರಾದ ಮಹಾವೀರ.ಎಮ್. ಕ‌ರೆಣ್ಣನವರ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, “ಕೊಳ್ಳುವವನೇ ಎಚ್ಚರದಿಂದಿರು”ಎಂಬುದನ್ನು ಮನವರಿಕೆ ಮಾಡಿ ಗ್ರಾಹಕ ಸಂರಕ್ಷಣಾ ಕಾಯಿದೆಯ ಮಹತ್ವ ತಿಳಿಸಿದರು.

Ramalinga Reddy; ಸಾರಿಗೆ ಸಚಿವರ ಜಿಲ್ಲಾ ಪ್ರವಾಸ

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಕಾನೂನು ಎಲ್ಲಾ ವಿದ್ಯಾರ್ಥಿಗಳಿಗೆ ಅತೀ ಅವಶ್ಯಕ ಎಂಬುದನ್ನು ತಿಳಿಸಿದರು. ಮತ್ತು ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ಎಸ್ ಯತೀಶ್ ಹಾಗೂ ಬಿ.ಎಸ್.ಚನ್ನಬಸಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗುರು ಎಂ ಸಿ, ಎಸ್.ಬಿ.ಸಿ.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಷಣ್ಮುಖ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರವೀಣ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ “ಗ್ರಾಹಕ ಸಂರಕ್ಷಣೆ ಕಾಯಿದೆ” ಹಾಗೂ “ವಾಹನ ಅಧಿನಿಯಮ ಕಾಯಿದೆ” ಕುರಿತು ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳ ಗೊಂದಲಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ಸಂಯೋಜಕ ವಿದ್ಯಾಧರ ವೇದವರ್ಮ ಟಿ. ಆರ್. ಎಲ್. ಲಾ ಕಾಲೇಜಿನ ಉಪನ್ಯಾಸಕ ಪ್ರದೀಪ್ ಕೆ.ಎನ್, ಅರುಣ್‌ಕುಮಾರ್ ಐರಣಿ ಮತ್ತು ಪವನ್ ಹೆಚ್ ಆರ್ ಉಪಸ್ಥಿತರಿದ್ದರು.

Application; ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ

ಕಾರ್ಯಕ್ರಮವನ್ನು ನಂದಿನಿ ಪಾಟಿಲ್ ನಿರೂಪಿಸಿದರು, ನುರೈನ್ ಬಾನು ಸ್ವಾಗತಿಸಿದರು. ಕಾನೂನು ಕಾಲೇಜು ವಿದ್ಯಾರ್ಥಿಗಳು ವಿವಿಧ ಕಾನೂನು ವಿಷಯಗಳ ಕುರಿತು ಉಪನ್ಯಾಸ ಹಾಗೂ ಕಿರು ನಾಟಕಗಳ ಪ್ರದರ್ಶನ ನೀಡಿದರು. ಒಟ್ಟಾರೆಯಾಗಿ ಕಾನೂನು, ಕಾನೂನಿನ ಅರಿವು, ಕಾಲ ಕಾಲಕ್ಕೆ ಕಾನೂನಿನ ಬದಲಾವಣೆಯ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿತು.

Leave a Reply

Your email address will not be published. Required fields are marked *

error: Content is protected !!