ಮೂಕಪ್ರಾಣಿಗಳಿಗೆ ಸದ್ದಿಲ್ಲದೇ ದಾಸೋಹ ಮಾಡ್ತಿದ್ದಾರೆ “ನಮ್ಮ ದಾವಣಗೆರೆ” ತಂಡ

ದಾವಣಗೆರೆ: ಲಾಕ್ಡೌನ್ ಪರಿಣಾಮದಿಂದ ಬಡ-ಮಧ್ಯಮ ವರ್ಗದ ಜನರು ಹೊಟ್ಟೆಗಿಲ್ಲದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಇನ್ನೂ ಪ್ರಾಣಿ-ಪಕ್ಷಿಗಳ ಪಾಡೇನಾಗಿರಬೇಡ? ಬಹುಶಃ ಬಹುತೇಕರು ಈ ಬಗ್ಗೆ ಯೋಚಿಸಲಿರಲಿಕ್ಕೂ ಸಾಧ್ಯವಿಲ್ಲ.. ಆದರೆ, ಇಲ್ಲೊಂದು ಪ್ರಾಣಿಪ್ರಿಯರ ತಂಡ ‘ನಮ್ಮ ದಾವಣಗೆರೆ’ ಟೀಂ ಹೆಸರಲ್ಲಿ ಪ್ರಾಣಿ ಪಕ್ಷಿಗಳಿಗೆ ಬಿಸಿ ತಾಜಾ ಆಹಾರವನ್ನೇ ಕೊಟ್ಟು ಮಾನವೀಯತೆ ಮೆರೆಯುತ್ತಿದೆ.!

ಕರೋನಾ ಹಿನ್ನೆಲೆಯ ಲಾಕ್ಡೌನ್ ನಿಂದ ಜನರು ತಮ್ಮ ಹೊಟ್ಟೆಗೆ ಆಹಾರ ಸಾಮಾಗ್ರಿಗಳನ್ನು ಶೇಖರಿಸಿಕೊಳ್ಳಲು ನಿರತರಾಗಿರುವ ಈ ಸಂದರ್ಭದಲ್ಲಿ ಈ ಟೀಂ ಇತರ ದಾನಿಗಳಿಂದಹಣ ಸಂಗ್ರಹಿಸದೆ ತಮ್ಮದೇ ಆದ ಹಣದಲ್ಲಿ ಬಡ ಜನರಿಗೆ ಆಹಾರದ ಕಿಟ್ ಒದಗಿಸುವ ಜತೆಗೆ ಪ್ರಾಣಿ, ಪಕ್ಷಿಗಳಿಗೂ ಆಹಾರ ಒದಗಿಸುತ್ತಿದೆ‌.

ಜನರು ಹಸು, ನಾಯಿಗಳು ಮನೆಯ ಮುಂದೆ ಬಂದರೆ ರಾತ್ರಿ ಅಳಿದುಳಿದ ಆಹಾರವನ್ನು ಹಾಕುತ್ತಾರೆ. ಆದರೆ, ಈ ಟೀಂ ಪಶು ವೈದ್ಯರಲ್ಲಿ ಸಲಹೆ ಪಡೆದುಕೊಂಡು ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸುತ್ತಿದೆ. ತಾಜಾ ತರಕಾರಿ, ಹಣ್ಣು-ಹಂಪಲು, ಬಿಸಿ ಚಪಾತಿ ಹೀಗೆ ಪಶು-ಪಕ್ಷಿಗಳಿಗೆ ನೀಡಿ ಸಾರ್ವಜನಿಕ ಒಲಯದಲ್ಲಿ ಈ 17 ಜನರಿರುವ ತಂಡ ಮಾದರಿಯಾಗಿ ನಿಂತಿದೆ.

ದಾವಣಗೆರೆಯಲ್ಲಿ ಮಾತ್ರವಲ್ಲದೇ ಇತರೆ ಜಿಲ್ಲೆಗಳಲ್ಲೂ ಪ್ರಾಣಿ ಪಕ್ಷಿಗಳಿಗೆ ಆಹಾರ ವಿತರಿಸಲು ಧನಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿದೆ ಈ ತಂಡ. ಇವರ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಸಹ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ‌. ಅಲ್ಲದೇ ಈ ತಂಡಕ್ಕೆ ಸಾರ್ವಜನಿಕ ಒಲಯದಲ್ಲೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ತಂಡದಲ್ಲಿ ರೋಹಿತ್ ಎಸ್. ಜೈನ್, ವೃಷಭ್, ನಿಖಿಲ್, ದೇವಿಕಾ, ಸುನೀಲ್ ಬಾಗೇವಾಡಿ, ಶಿವಯೋಗಿ, ದೀಪಕ್, ವಿವೇಕ್ ಜೈನ್, ಆಶೀಶ್ ಜೈನ್, ಸಮೀರ್ ಟಕ್ಕರ್, ಬಾಬು ಸುಬ್ರಹ್ಮಣ್ಯ, ಪ್ರಕಾಶ್, ನಿಹಾಲ್ ಸೋನಿ, ಸುಮತಿ ತಳವಾರ್, ಆನಂದ್ ಜೈನ್ ಇವರುಗಳು ಈ ಸೇವೆ ಮಾಡುತಗತಿದ್ದಾರೆ.

Leave a Reply

Your email address will not be published. Required fields are marked *

error: Content is protected !!