“ಆತ್ಮಸ್ಥೈರ್ಯಎಂದರೇನು”…? ಕೋವಿಡ್ 19 ಕಾರಣದಿಂದ ಬದುಕಿಗೆ ಸ್ಫೂರ್ತಿ ಪಡೆಯಲು ಈ ಲೇಖನ – ಈಶ್ವರ್

ಶಿರಾ ( ತುಮಕೂರು): ಅಂದಹಾಗೆ ಈ ಲೇಖನ  ಶಿರಾ ಯುವ ಲೇಖಕ ಈಶ್ವರ್ ಎಂಬುವವರದ್ದು, ಈ ಲೇಖನ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಢಿದ್ದಾರೆ, ಯಾಕೋ ಹೀಗೆ ಸರ್ಚ್ ಮಾಡುತ್ತಿದ್ದಾಗ ಈ ಲೇಖನ ಕಣ್ಣಿಗೆ ಬಿತ್ತು ಇಷ್ಟವಾಯಿತು,ಅದ್ದರಿಂದ ಇದನ್ನ ನಮ್ಮ ಗರುಡವಾಯ್ಸ್ ವೆಬ್ ನ್ಯೂಸ್ ಪೇಜ್ ನಲ್ಲಿ ಪ್ರಕಟಿಸುತ್ತಿದ್ದೆನೆ.

ಹೌದು ನಿಮ್ಮ ಬಳಿ ಈ ಲೇಖನದ ಮೂಲಕ ಹಂಚಿಕೊಳ್ಳಲು ಕೂಡ ಒಂದು ಕಾರಣವಿದೆ, ಈ ಕೋವಿಡ್ 19 ಕಾರಣದಿಂದ ಬಹಳಷ್ಟು ಜನ ರೋಗದಿಂದ ಬಳಲುವುದಕ್ಕಿಂತ, ಆತ್ಮ ವಿಶ್ವಾಸವಿಲ್ಲದೆ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ, ಈ ಲೇಖನ ಅವರಿಗೆ ಸ್ಫೂರ್ತಿ ಪಡೆಯಲು ನೆರವಾಗುವುದೆಂದು ಆಶಿಸುತ್ತೇನೆ

ನಮ್ಮ ಬದುಕಿನಲ್ಲಿ ನೋವು, ದುಃಖ, ಕಷ್ಟ, ಅಸಹನೆ, ನಿರುತ್ಸಾಹ, ಜಿಗುಪ್ಸೆ… ಹೀಗೆ ಎಲ್ಲವನ್ನು ಎದುರಿಸಿ, ನಿಜವಾದ ಬದುಕಿನ ಮಹತ್ವ ತಿಳಿಯಲು ಆತ್ಮ ಸ್ಥೈರ್ಯವೇ ಮೂಲ ಶಕ್ತಿ. ಜೀವನದಲ್ಲಿ ಸಹನೆ ಮತ್ತು ತಾಳ್ಮೆ ಬಹಳ ಮುಖ್ಯ. ಅವು ಮನುಷ್ಯನ ನೂನ್ಯತೆಗಳಲ್ಲ. ಅವು ಅವನಆತ್ಮಸ್ಥೈರ್ಯವನ್ನು ಪ್ರತಿ ಬಿಂಬಿಸುತ್ತವೆ. ಸಮುದ್ರದ ನೀರು ಉಪ್ಪಾದರೂ ಅದು ಸೂರ್ಯನ ಕಿರಣಕ್ಕೆ ಅವಿಯಾಗಿ. ಮಳೆಯಾಗಿ, ಬಂದಾಗ ಮಳೆಯ ನೀರು ಸಿಹಿಯಾಗಿಯೇ ಇರುತ್ತದೆ ಅಲ್ಲವೇ ? ಬದುಕಿನಲ್ಲಿ ಪ್ರಯತ್ನಿಸುವುದರಿಂದ ನಷ್ಟವೇನಿದೆ. ಗೆದ್ದರೆ ಸಂತೋಷವಾಗುತ್ತದೆ. ಸೋತರೆ ಅನುಭವ ಸಿಗುತ್ತದೆ. ಬದುಕಿನಲ್ಲಿ ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ದೊಡ್ಡ ಮದ್ದು. ನಿಮಗೊಂದು ವೃತಾಂತವನ್ನು ಹೇಳುತ್ತೇನೆ ಕೇಳಿ,

“ನನಗೊಬ್ಬಳು ಗೆಳತಿಯಿದ್ದಳು, ಹೇಮಾ ಅಂತ… ತುಂಬಾ ಬುದ್ದಿವಂತೆ ಅಲ್ಲ, ಅದರೂ ತಂಬಾನೆ Creative. ಅವಳಿಗೆ
24 ವರ್ಷ, ಆದರೆ ಅವಳಿಗೆ ಬದುಕಿನಲ್ಲಿ ಇದ್ದ ಅಸೆ ಬೆಟ್ಟದಷ್ಟು. ಬದುಕಿನ ಕಾಲ ಚಕ್ರ ಉರಳಿದ ಹಾಗೆ, ಅವಳ ಆಶಾಗೋಪುರ ಕುಸಿದು ಬಿದ್ದಿತ್ತು. ಎಲ್ಲಾ ಇದ್ದರು ಏನೂ ಇಲ್ಲದಂತಹ ಏಕಾಂಗಿತನವೇ ಅವಳಿಗೆ ತುಂಬಿಕೊಂಡಿತ್ತು. ಅವಳ ಬಾಳಿನ ವಿಧಿ ಬರಹ ಬರೀ ಕಹಿಯೇ ಆಗಿತ್ತು.

ಹಾಗಾದರೆ ಅದುದ್ದಾದರು ಏನು?

ಸುಮಾರು ಮೂರು ವರ್ಷಗಳ ಹಿಂದೆ ಅವಳಿಗೆ ಒಂದು ಸಣ್ಣ ಶಸ್ತ್ರ ಚಿಕಿತ್ಸೆಯಾಯಿತು. ಅಲ್ಲಿ ಶುರುವಾಯಿತು ನೋಡಿ ಅವಳ ಬಾಳಿನ ಕಹನಿ, Doctor, ಎಲ್ಲಾ Normal ಆಗಿ ಇದ್ದಾಳೆ, ಮನೆಗೆ ಕರೆದು ಕೊಂಡು ಹೋಗಿ ಎಂದರು. ಅದಾಗಿ ಸುಮಾರು 7-8 ದಿವಸಗಳಲ್ಲಿ ಅವಳ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟಿತು. ಅವಳು ಸ್ಥಿರವಾಗಿ ನಿಲ್ಲುವ ಸಾಮರ್ಥ್ಯವನ್ನು ಕಳೆದು ಕೊಂಡಿದ್ದಳು, ಹೀಗಿದ್ದರೂ ಸಹ ಅವಳ ಬದುಕಿನ ಬಂಡಿ ಸಾಗುತ್ತಲೇ ಇತ್ತು. ಆದರೂ ಕೂಡ ದೇವರಿಗೆ ಅದು ತೃಪ್ತಿ ಆಗಲಿಲ್ಲ, ಮತ್ತೆ ನನ್ನ ಗೆಳತಿ ಹೇಮಾ ಸಣ್ಣ ಕರಳು Operation, ಆಯ್ತು. ಆದರೂ ಸಹ ಅವಳು ಸಂಪೂರ್ಣವಾಗಿ
ಗುಣವಾಗಲಿಲ್ಲ.

ಮನೆಯಲ್ಲಿ ನೆಮ್ಮದಿಯ ವಾತಾವರಣವೇ ಇರಲಿಲ್ಲ. ಅವಳಿಗೆ ನೋವು ಅನುಭವಿಸಿ, ಅನುಭವಿಸಿ ಬದುಕೇ ಬೇಡವೆನ್ನಿಸಿತು. ಅವಳ ಬೆಟ್ಟದಷ್ಟು ಆಸೆಯನ್ನು ಸಾಧಿಸಲು ಅವಳಿಗೆ ಸಾಸುವೆಯಷ್ಟು ಸಹ ಸಾಮರ್ಥ್ಯ ಇರಲಿಲ್ಲ. ಹಂತ, ಹಂತವಾಗಿ ಕುಸಿಯುತ್ತಾ ಬಂದಳು….ಯಾಕೆಂದರೆ ಅವಳಿಗೆ ಬಹು ಮುಖ್ಯ ವಾಗಿ ಬೇಕಾದ ಆತ್ಮ ವಿಶ್ವಾಸವೇ ಇರಲಿಲ್ಲ. “ಬದುಕಿನಲ್ಲಿ ಆತ್ಮ ವಿಶ್ವಾಸವೇ ನಿಜವಾದ ಸಂಪಾದನೆ” ಆದರೆ ಹೇಮಾ ಅದನ್ನು ಸಂಪಾದಿಸರಲಿಲ್ಲ.ಆತ್ಮ ವಿಶ್ವಾಸ ಇಲ್ಲದ್ದಿದ್ದರೆ ನಾವು ಏನನ್ನೂ ಗೆಲ್ಲಲು, ಸಾಧಿಸಲು ಆಗುವದಿಲ್ಲ ಆ ರೀತಿ ಇರುವ ಮನುಷ್ಯನು ವಿವೇಕ ಇಲ್ಲದ ಪಶುವಿಗೆ ಸಮಾನ. ಜೀವನದಲ್ಲಿ ನಮಗೆ ಸಂತೋಷ, ದುಃಖ, ಗೆಲುವು, ಸೋಲು ಇವೆಲ್ಲವು ನಾಣ್ಯದ

ಎರಡು ಮುಖಗಳ ಹಾಗೆ.

ನಾವು ಯಾವುದೇ ವಿಚಾರವನ್ನಾಗಲಿ ಗಾಡವಾಗಿ ಮನಸ್ಸಿಗೆ ಹಚ್ಚಿಕೊಂಡರೆ ಅದು ಮನಸ್ಸನ್ನು ಆವರಿಸಿ ಬಿಡುತ್ತದೆ. ಆಗಲೇ ವಾಸ್ತವಿಕ ಹಾಗೂ ಮಾನಸಿಕ ಪರಿವರ್ತನೆ ಕಂಡು ಬರುತ್ತದೆ.

“You gain confidence and grow strong by every experience in which you really push yourself to do something , you didn’t think off you could do”.

“I can” is more important than Our IQ”.

ಆತ್ಮ ಎಂದರೆ ನಾನು, ವಿಶ್ವಾಸ ಎಂದರೆ ನಂಬಿಕೆ. ನಮ್ಮಲ್ಲಿ ಮೊದಲು ನಮ್ಮ ಮೇಲೆ ನಂಬಿಕೆ ಇದ್ದರೆ ಅದುವೇ ಆತ್ಮವಿಶ್ವಾಸ. ದೇವರು ನಮ್ಮ ಆತ್ಮದಲ್ಲಿರುವನು ಹಾಗಾಗಿ ಮೊದಲು ನಮ್ಮನ್ನು ನಾವು ನಂಬಬೇಕು. ಜೀವನದಲ್ಲಿ ತೊಂದರೆಗಳನ್ನು ಎದರಿಸಲು ಹಿಂಜರಿಯುವ ವ್ಯಕ್ತಿ ಎಂದಿಗೂ ಯಶಸ್ಸನ್ನು ಹಾಗು ಸಾಧನೆಯ ಹಾದಿಯನ್ನು ತಲುಪುವುದಿಲ್ಲ.

-ಕಷ್ಟಗಳು, ನೋವು, ಧೈರ್ಯ, ತಾಳ್ಮೆ, ಪರಿಶ್ರಮ, ಸಾಧನೆ, ಗೆಲವು, ಇವೆಲ್ಲವು ಮನುಷ್ಯನ ನಿಜವಾದ ಪಾತ್ರವನ್ನು ಪ್ರೇರೇಪಿಸುತ್ತದೆ.

-“There is no human being on Earth is strong or powerful who has not experienced struggle, Suffering or failure.”

ಬದುಕು ಒಂದು ಹೂವಿನ ಹಾದಿ ಎಂದು ಭಾವಿಸುವವರು ಬಹು ಶೀಘ್ರದಲ್ಲೇ ಆತ್ಮ ವಿಶ್ವಾಸದಿಂದ ಕುಗ್ಗುತ್ತಾರೆ ಮತ್ತು ಬಳಲುತ್ತಾರೆ. ಧೈರ್ಯದಿಂದ ತೊಂದರೆಗಳನ್ನು ಎದುರಿಸುತ್ತಿರುವ ವ್ಯಕ್ತಿಯು ಆ ತೊಂದರೆ ಗಳನ್ನು ಮನಸ್ಸಿನಲ್ಲಿ ಸದಾ ಕಾಲ ಆಲೋಚಿಸದಿದ್ದರೆ ಮಾತ್ರ ಯಶಸ್ಸನ್ನು ಸಾಧಿಸುತ್ತಾನೆ. ಆಗಲೇ ಅವನು ಜೀವನದ ನಿಜವಾದ ಸಂತೋಷ, ಸಂತೃಪ್ತಿ ಮತ್ತು ಶಾಂತಿಯನ್ನು ಹೊಂದುವನು.

“Whatever you believe about Yourself inside, is what You will manifest outside”.

ಬದುಕಿನ ಹಾದಿಯಲ್ಲಿ ಕಲ್ಲು ಮುಳ್ಳು ಸರ್ವೇ ಸಾಮಾನ್ಯ. ಅದರೆ ಅಷ್ಟಕ್ಕೇ ಜೀವನ ಅಂತ್ಯಗೊಂಡಿತು ಅಂತಲ್ಲ, ಭರವಸೆಯಿಂದ ಅವುಗಳನ್ನು ದಾಟಿದರೆ ಮಾತ್ರ ಬದುಕಿನ ನಿಜವಾದ ಅರ್ಥ ಮತ್ತು ಸೊಗಸು ಕಾಣುವುದು.

“Sugarcane may not be straight, But sugar is always sweet”; ಹಾಗೆಯೇ ಜೀವನ.

ಧೈರ್ಯ ಮತ್ತು ದೃಢವಿಶ್ವಾಸ ಎಲ್ಲಕ್ಕಿಂತ ಹೆಚ್ಚು ಪವಾಡ ಮಾಡುತ್ತದೆ ಯಾಕೆಂದರೆ ಬದುಕನ್ನು ನಾವು ಹೇಗೆ ರೂಪಿಸುತ್ತೀವಿ ಅದು 10% ಆದರೆ ಅದೇ ಬದುಕನ್ನು ನಾವು ಹೇಗೆ ಸ್ವೀಕರಿಸುತ್ತಿವೋ ಅದು 90 % ಇದ್ದ ಹಾಗೆ. ಸ್ವಾಮಿ ವಿವೇಕಾನಂದರು ಹೇಳಿದ್ದಾರೆ “Strength is life, weakness is death” ಅಂತ, ಇಲ್ಲಿ, Strength ಅಂದರೆ ಆತ್ಮ ವಿಶ್ವಾಸ. ಹೇಮಾಳಿಗೂ Self confidence ಇದ್ದಿದ್ದರೆ, ಅವಳು ಸಹ ತನ್ನ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳಬಹುದಾಗಿತ್ತು ಅಲ್ಲವೇ…ಅದಕ್ಕೆ ಹೇಳುವುದು

” ಧೈರ್ಯಮ್ ಸರ್ವತ್ರ ಸಾಧನಂ” ಎಂದು
– ✍🏻#ಈಶ್ವರ್ .

Leave a Reply

Your email address will not be published. Required fields are marked *

error: Content is protected !!