lokayukta; ಭ್ರಷ್ಟರಿಗೆ ಸಿಂಹ ಸ್ವಪ್ನವಾದ ಲೋಕಾಯುಕ್ತ ಎಸ್ ಪಿ ಕೌಲಾಪುರೆ

ದಾವಣಗೆರೆ, ಅ.20: ಅಬಕಾರಿ ಡಿಸಿ ನೇತೃತ್ವದ ತಂಡವನ್ನು ತನ್ನ ತೆಕ್ಕೆಗೆ ಬೀಳಿಸಿಕೊಂಡ ಲೋಕಾಯುಕ್ತ (Lokayukta) ಕೌಲಾಪುರೆ ಶುಕ್ರವಾರ ಮತ್ತೆ ಬೆಣ್ಣೆ ನಗರಿಯಲ್ಲಿ ಭೇಟೆಗೆ ಇಳಿದಿದ್ದು, ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಲ್ಕು ಕಚೇರಿಗಳಿಗೆ ದಾಳಿ ನಡೆಸಿದೆ.

ಪಾಲಿಕೆ ಹಾಗೂ ಸಬ್ ರಿಜಿಸ್ಟರ್‌ನಲ್ಲಿ ಹಣದ ಅವ್ಯವಹಾರ, ಭ್ರಷ್ಟಾಚಾರ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ತಂಡ ಪ್ರತ್ಯೇಕವಾಗಿ ದಾಳಿ ನಡೆಸಿದೆ.

Accreditation; ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್ ಮಾನ್ಯತೆ ಹಿಂಪಡೆತ

ದಾವಣಗೆರೆ ನಗರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಿಎ ನಿವೇಶನ ಅಕ್ರಮವಾಗಿ ಖಾತೆ ಮಾಡುತ್ತಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಾವಣಗೆರೆ ಲೋಕಾಯುಕ್ತ ಎಸ್ ಪಿ ಕೌಲಾಪುರೆ ನೇತೃತ್ವದ ಘಟಕದಿಂದ ನಾಲ್ಕು ತಂಡಗಳಿAದ ನಾಲ್ಕು ಕಛೇರಿಗಳಲ್ಲಿ ದಾಳಿ ನಡೆಸಿದೆ.

ದಾವಣಗೆರೆ ಮಹಾನಗರ ಪಾಲಿಕೆ ಕಛೇರಿ, ಮಹಾನಗರ ಪಾಲಿಕೆ ವಲಯ ೩ ರ ಕಛೇರಿ, ಉಪ ನೊಂದಣಾಧಿಕಾರಿಗಳ ಕಛೇರಿ, ದಾವಣಗೆರೆ ಹರಿಹರ ನಗರಾಭಿವೃದ್ಧಿ ಇಲಾಖೆಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ತಂಡ ದಾಖಲೆಗಳನ್ನು ಪರಿಶೀಲಿಸಿದೆ. ಅಲ್ಲದೇ ಸಿಎ ನಿವೇಶನಗಳ ಅವ್ಯವಹಾರದ ದಾಖಲೆಗಳನ್ನು ವಶಕ್ಕೆ ಪಡೆದ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ಲೋಕಾಯುಕ್ತ ಆಗಮನದ ಹಿನ್ನೆಲೆಯಲ್ಲಿ ಕಚೇರಿಗಳಲ್ಲಿ ನೀರವ ಮೌನ ಮೂಡಿತ್ತು.

Leave a Reply

Your email address will not be published. Required fields are marked *

error: Content is protected !!