Accreditation; ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್ ಮಾನ್ಯತೆ ಹಿಂಪಡೆತ
ದಾವಣಗೆರೆ, ಅ. 18: ಎಂಪವರ್ ಎಜುಕೇಷನ್(ರಿ) ದಾವಣಗೆರೆ ಇವರ ಆಶ್ರಯದಲ್ಲಿನ ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್, ಸವಣೂರು ಪ್ಲಾಜಾ ಹತ್ತಿರ, ಪಿ.ಬಿ.ರಸ್ತೆ, ದಾವಣಗೆರೆ ಉತ್ತರವಲಯ ಈ ಪೂರ್ವ ಪ್ರಾಥಮಿಕ ಶಾಲೆಯ ಮಾನ್ಯತೆಯನ್ನು (accreditation) ಹಿಂಪಡೆಯಲಾಗಿದೆ.
ಈ ಶಾಲೆಯು ಇಲಾಖೆಯಿಂದ ಅನುಮತಿ ಪಡೆದ ಸ್ಥಳದಲ್ಲಿ ನಡೆಸದೇ ಅನಧೀಕೃತವಾಗಿ ಬೇರೆ ಸ್ಥಳದಲ್ಲಿ ನಡೆಸುತ್ತಿರುವ ಹಾಗೂ ಈ ಶಾಲೆಯ ಕಟ್ಟಡದ ಮೇಲೆ ವಿದ್ಯುತ್ ಹೈಟೆನ್ಸನ್ ತಂತಿ ಹಾದು ಹೋಗಿದ್ದು, ಹಾಗೂ ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿರುವ ಪ್ರಯುಕ್ತ ಈ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ.
job fair; ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ನಿಂದ ಉದ್ಯೋಗ ಮೇಳ
ವಿದ್ಯಾರ್ಥಿಗಳ ಪೋಷಕರು ಈ ಶಾಲೆಗೆ ದಾಖಲಾತಿ ಮಾಡದಂತೆ ಹಾಗೂ ಈಗಾಗಲೇ ದಾಖಲಾತಿ ಹೊಂದಿರುವ ಮಕ್ಕಳನ್ನು ಸಂಬಂಧಿಸಿದ ಪೋಷಕರು ಸಮೀಪದ ಅಧಿಕೃತ ಶಾಲೆಗೆ ದಾಖಲಾತಿ ಮಾಡುವಂತೆ ಈ ಮೂಲಕ ಪೋಷಕರಿಗೆ ತಿಳಿಸಲಾಗಿದೆ ಎಂದು ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.