ಬೇಸಿಗೆಯಲ್ಲೂ ಕಾರಂಜಿಯಂತೆ ಚಿಮ್ಮಿದ ನೀರು ಗುಮ್ಮನೂರು ಗ್ರಾಮದಲ್ಲಿ ಮುಗಿಲು ಮುಟ್ಟಿದ ಹರ್ಷ
ದಾವಣಗೆರೆ: ಮಳೆ ಬಾರದೆ ಎಲ್ಲೆಡೆ ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದೆ. ಹಲವಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತೋಟಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ವೆಚ್ಚ ಮಾಡಿ ಸಾವಿರ ಅಡಿಗಟ್ಟಲು ಬೋರ್ ಕೊರೆಸಿದರೂ ನೀರು ಮಾತ್ರ ಮರೀಚಿಕೆಯಾಗಿದೆ.
ಎಲ್ಲೆಲ್ಲೂ ಬೋರ್ ಕೊರೆತದ ಸದ್ದೇ ಕೇಳಿ ಬರುತ್ತಿದೆ. ಮತ್ತದೇ ನಿರಾಶೆ. ಪ್ರತಿ ಜಮೀನಿನಲ್ಲಿ ನಾಲ್ಕೈದು ಬೋರ್ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಅದಕ್ಕೆ ತತ್ವಿರುದ್ಧವಾಗಿ ಇಲ್ಲೊಂದು ಘಟನೆ ನಡೆದಿದೆ ನೋಡಿ. ದಾವಣಗೆರೆ ಜಿಲ್ಲೆಯ ಗುಮ್ಮನೂರು ಗ್ರಾಮದಲ್ಲಿ ಇಂದು ಸಂಜೆ ಕುಡಿಯುವ ನೀರಿಗಾಗಿ ಬೋರ್ ಕೊರೆಸಿದಾಗ ನೀರು ಮುಗಿಲೆತ್ತರಕ್ಕೆ ಕಾರಂಜಿಯಂತೆ ಚಿಮ್ಮಿದೆ.
ನೀರು ಚಿಮ್ಮುವುದು ನೋಡಿ ಗ್ರಾಮಸ್ಥರ ಹರ್ಷಕ್ಕೆ ಪಾರವೇ ಇಲ್ಲವಾಗಿತ್ತು. ಕೊರೆದಿದ್ದು ಕೇವಲ 589 ಅಡಿ ಹಾಗೂ 6 ಇಂಚು. ಕುಡಿಯುು ನೀರಿಗಾಗಿ ಪರಿತಪಿಸಿ, ಕೊನೆಗೆ ಗ್ರಾಮಸ್ಥರೇ ಬೋರ್ ಕೊರೆಸಲು ಮುಂದಾಗಿದ್ದರು. ಇದೀಗ ನೀರು ಕಾರಂಜಿಯಂತೆ ಚಿಮ್ಮುತ್ತಿರುವನ್ನು ಇಡೀ ಗ್ರಾಮ ಹಬ್ಬದಂತೆ ಸಂಭ್ರಮಿಸುತ್ತಿದೆ