ಸ್ವಾಮಿ ವಿವೇಕಾನಂದರ ಹಿಂದುತ್ವವೇ ಬೇರೆ, ಬಿಜೆಪಿಯ ಹಿಂದುತ್ವವೇ ಬೇರೆ – ದಿನೇಶ್ ಶೆಟ್ಟಿ

ದಾವಣಗೆರೆ :  ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆವನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯ ಶಾಮನೂರು ಶಿವಶಂಖರಪ್ಪನವರ ಸಭಾಭವನದಲ್ಲಿ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಪ್ರಚಾರಕರಾದರೂ ಸಹ ವಿದೇಶಗಳಲ್ಲಿ ಹಿಂದೂ ಧರ್ಮಕ್ಕಿಂತ ಭಾರತ ದೇಶದ ಸಂಸ್ಕøತಿ, ಸಂಸ್ಕಾರವನ್ನು ತೋರ್ಪಡಿಸಿಕೊಟ್ಟರು ಎಂದರು.

ಸರ್ವೇ ಜನೋ ಸುಖಿನೋ ಭವಃತು ಎಂದು ಹೇಳುವ ಹಿಂದೂ ಧರ್ಮವನ್ನು ಪ್ರಚಾರ ನಡೆಸಿ ಭಾರತೀಯತೆಯನ್ನು ಎತ್ತಿಹಿಡಿದವರು ವಿವೇಕಾನಂದರಾದರೆ, ಅನ್ಯ ಧರ್ಮವನ್ನು ದ್ವೇಷಿಸುವುದೇ ಬಿಜೆಪಿ ಹಿಂದುತ್ವ ಆಗಿದೆ. ವಿವೇಕಾನಂದರ ಹಿಂದುತ್ವವನ್ನು ತಮ್ಮ ಪಕ್ಷದ ಸ್ವಾರ್ಥಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಂತಹ ದೇಶದಲ್ಲಿ ಧರ್ಮ-ಜಾತಿ ಮಧ್ಯೆ ದ್ವೇಷ ಬಿತ್ತಿ ಶಾಂತಿಯ ದೇಶವನ್ನು ದ್ವೇಷದ ದೇಶವನ್ನಾಗಿ ಬಿಜೆಪಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶ್ರೀಮತಿ ನಾಗರತ್ನಮ್ಮ ಮಾತನಾಡಿ ವಿದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಸಂಸ್ಕøತಿಯನ್ನು ಅನಾವರಣಗೊಳಿಸಿದ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದರು.

ವಿದೇಶ ಪ್ರವಾಸದಲ್ಲಿ ಭಾರತೀಯ ಸಂಸ್ಕøತಿಯನ್ನು ಸಾರಿ ಬಂದ ನಂತರ ದೇಶದಲ್ಲಿ ಅಜ್ಞಾನ, ದ್ವೇಷ, ಕಂದಾಚಾರ, ಜಾತೀಯತೆ ಹೋಗಲಾಡಿಸಲು ದೇಶಾದ್ಯಂತ ಸಂಚರಿಸಿದರು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ ಭಾರತೀಯ ಸಂಸ್ಕøತಿಯನ್ನು ಬಿಂಬಿಸಿದ ವಿವೇಕಾನಂದರು ದೇಶದ ಜಾತಿ ವ್ಯವಸ್ಥೆಯನ್ನು ಅಳಿಸಬೇಕೆಂಬ ಸಂಕಲ್ಪ ಹೊಂದಿದ್ದರು. ಅಂತಹವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜಾತಿ-ಧರ್ಮದಡಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಮಹಿಳಾ ಕಾಂಗ್ರೆಸ್  ಶ್ರೀಮತಿ ಸುಷ್ಮಾ ಪಾಟೀಲ್, ಸೇವಾದಳದ ಡೋಲಿ ಚಂದ್ರು, ಅಬ್ದುಲ್ ಜಬ್ಬಾರ್, ಕಿಸಾನ್ ಕಾಂಗ್ರೆಸ್‍ನ ಮಹ್ಮದ್ ಜಿಕ್ರಿಯಾ, ಸೋಮ್ಲಾಪುರದ ಹನುಮಂತಪ್ಪ, ಲಿಯಾಕತ್ ಅಲಿ ಮತ್ತಿತರರು ಮಾತನಾಡಿ ವಿವೇಕಾನಂದ ಆದರ್ಶವನ್ನು ಪಾಲಿಸೋಣ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಳಿಕೆ ವಿಪಕ್ಷ ನಾಯಕ ಎ.ನಾಗರಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್, ಶ್ರೀಮತಿ ಆಶಾರಾಣಿ ಮುರುಳಿ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಕವಿತಾ ಚಂದ್ರಶೇಖರ್, ಗೀತಾ ಪ್ರಶಾಂತ್, ಉಮಾ ಕುಮಾರ್, ಜಯಣ್ಣ, ಬೆಳ್ಳೂಡಿ ಮಂಜುನಾಥ, ರಾಘವೇಂದ್ರ ಗೌಡ, ಹರೀಶ್ ಕೆ.ಎಲ್.ಬಸಾಪುರ, ಸಿದ್ದೇಶ್, ಆವರಗೆರೆ ಅಣ್ಣೇಶ್ ನಾಯ್ಕ, ಬಾತಿ ಶಿವಕುಮಾರ್, ಸುರೇಶ್ ಜಾಧವ್, ನರಸಿಂಹ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!