ಇಂದಿನ 137 ಕೊವಿಡ್ ಕೇಸ್ ಗಳಲ್ಲಿ 18 ವರ್ಷದ ಒಳಗಿರುವ 63 ಮಕ್ಕಳಿಗೆ ಸೋಂಕು

ದಾವಣಗೆರೆ: ಈ ದಿನದ 137 ಕೊವಿಡ್ ಪಾಸಿಟಿವ್ ಬಂದಿರುವವರಲ್ಲಿ, 18 ವರ್ಷದ ಒಳಗಿನ ಮಕ್ಕಳ ಸಂಖ್ಯೆ = 63 (ದಾವಣಗೆರೆ = 8, ಚನ್ನಗಿರಿ = 48, ಜಗಳೂರು = 6, ಹರಿಹರ = 1)
ಇದರಲ್ಲಿ ಶಾಲಾ ಮಕ್ಕಳು 62, ಒಂದು ಮಗು 1 ವರ್ಷ ವಯಸ್ಸು, ಹರಿಹರ.

ಬುಧವಾರ ಜಿಲ್ಲೆಯಲ್ಲಿ 137 ಜನರಿಗೆ ಕರೋನಾ ದೃಢಪಟ್ಟಿದ್ದು, ಮೂವರು ಗುಣಮುಖರಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 65 ಪ್ರಕರಣಗಳು ಪತ್ತೆಯಾಗಿದ್ದು, 50 ಪ್ರಕರಣ‌ ದೃಢಪಡುವ ಮೂಲಕ ಚನ್ನಗಿರಿ‌ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಜಗಳೂರು 16, ಹೊನ್ನಾಳಿ ಮತ್ತು ಹರಿಹರ ತಲಾ 1, ಹೊರ ಜಿಲ್ಲೆಯ ನಾಲ್ವರಿಗೆ ಸೋಂಕು ದೃಢಗೊಂಡಿದ್ದು, ಒಟ್ಟು 137 ಜನರಿಗೆ ಸೋಂಕು ತಗುಲಿರುವ ವರದಿಯಾಗಿದೆ‌.

ಇಲ್ಲಿಯವರೆಗೂ 51,322 ಜನರಿಗೆ ಸೋಂಕು ದೃಢಪಟ್ಟಿದ್ದು, 50,432 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 608 ಜನರು ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!