teachers day; ಹೇಳಿಕೊಟ್ಟ ಪಾಠ ಇಂದಿಗೂ ಮನದಲ್ಲಿ ಅಚ್ಚಾಗಿ ಉಳಿದಿದೆ

teachers day

ದಾವಣಗೆರೆ: ಆಗಿನ್ನು ನಾನು ಶಾಲೆಗೆ ಹೊಸಬ..ನನ್ನ ಸಹಪಾಠಿಗಳೆಲ್ಲ, ಎಲ್ಲ ಶಿಕ್ಷಕರನ್ನು ಬಿಟ್ಟು ಕೇವಲ ಒಬ್ಬರ ಹೆಸರನ್ನು ಮಾತ್ರ ಹೇಳುತ್ತಿದ್ದರು..ಅವರು ತುಂಬಾ ಶಿಸ್ತು, ಒಳಗಿದ್ದ ಯೂನಿಾರಂ ಹೊರಗೆ ಬಂದ್ರೆ ಒದೆ ಕಾಯಂ, ಊಟ ಮಾಡುವಾಗ ಉಗುರು ನೋಡಿಕೊಳ್ಳುತ್ತಿದ್ದೀವಿ..ಅಂದು ಅವರು ಹೇಳಿಕೊಟ್ಟ ಪಾಠ ಇಂದಿಗೂ ಮನದಲ್ಲಿ ಅಚ್ಚಾಗಿ ಉಳಿದಿದೆ…ಹಿಂದೆ ಗುರು, ಮುಂದೆ ಗುರಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನನ್ನ ಗುರುಗಳೇ ಸಾಕ್ಷಿಯಾಗಿದ್ದು, ಇಂದಿನ ನನ್ನ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟವರು ಅವ್ರೂ…ಯಾರಿಂದಲೂ ಅಪಹರಿಸಲಾಗದ ಸಂಪತ್ತಾದ ’ವಿದ್ಯೆ’ ಯನ್ನು ನನಗೆ ಧಾರೆ ಎರೆದು ಸಮಾಜದಲ್ಲಿ ಕಿಂಗ್ ಮೇಕರ್ ಆಗಿ ರೂಪಿಸಿದ್ದಾರೆ…ಹೀಗಂತಾ ಉಪ ನಿರ್ದೇಶಕರಾದ ಡಾಕ್ಟರ್ ಚಂದ್ರಶೇಖರ್ ಸುಂಕದ್ ಹೇಳುವಾಗ ಅವರ ಕಣ್ಣಿನಲ್ಲಿ ಕಣ್ಣೀರ ಧಾರೆ ಹನಿಯಾಗಿ ಧರೆಗೆ ಉರುಳಿತು.

ನಾನು 1975 ರಲ್ಲಿ ಬಿಜಾಪುರದ ಸೈನಿಕ ಶಾಲೆಗೆ ಸೇರಿದ್ದೇ…ನನ್ನ ಮೊದಲ ಹಿಂದಿ ತರಗತಿಯನ್ನು ತೆಗೆದುಕೊಂಡವರು ಜಿ.ಡಿ.ಕಾಳೆ ಸರ್..ಇವರು ಅತ್ಯಂತ ಕಟ್ಟುನಿಟ್ಟಾದ ಶಿಸ್ತಿನ ಶಿಕ್ಷಕ. ಎನ್ಸಿಸಿಸಿ ಕಮಾಂಡ್ ಪರೇಡ್ಗೂ ಇವರೇ ಬರುತ್ತಿದ್ದರು. ಪರೇಡ್‌ನಲ್ಲಿ ಬಹಳ ಶಿಸ್ತಿನಿಂದ ಇರಬೇಕು, ಒಂಚೂರು ಅಶಿಸ್ತು ಕಂಡರೆ, ಬೆತ್ತದ ಏಟು ಗ್ಯಾರಂಟಿ.

ಕಾಳೆ ಸರ್ ನಮಗೆ ನಮ್ಮ ಭಾಷೆಯ ಪಠ್ಯವನ್ನು ಮಾತ್ರವಲ್ಲದೆ ಜೀವನದ ನೈತಿಕತೆ ಕಲಿಸಿದರು … ಮಹಾನ್ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಬೋಧನೆಗಳು, ರಾಮಾಯಣ ಮಹಾಭಾರತದ ಮೌಲ್ಯಗಳನ್ನು ಸಮಾನಾಗಿ ತಲೆಗೆ ತುಂಬಿದರು. ಸಮಯಪಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಅವರ ಕ್ಲಾಸ್ ಇದ್ದಾಗ,ಮನೆಯಲ್ಲಿ ಬಿಡಲಿ ಓಡಿ ಬರುತ್ತಿದ್ದೇ. ಅವರು ಹೇಳುತ್ತಿದ್ದು ಒಂದೇ…ಜೀವನದಲ್ಲಿ ಮೊದಲು ಶಿಸ್ತು ಇರಬೇಕು. ಹಾಗೆಯೇ ಸಮಯ ಶಿಸ್ತಿನ ಮೊದಲ ಚಿಹ್ನೆ. ಹಾಗೆಯೇ ಸಮಯ ಪಾಲನೆಯೂ ಅತ್ಯಮೂಲ್ಯ. ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ..ಜೀವನದ ಎಲ್ಲಾ ಹಂತಗಳಲ್ಲಿ ಸಮಯಪ್ರಜ್ಞೆ ಇರಬೇಕು ಎಂದು ಹೇಳುತ್ತಿದ್ದರು. ಅದನ್ನು ಈಗ ನಾನು ಅನುಕರಣೆ ಮಾಡುತ್ತಿದ್ದೇನೆ .

ಈ ಸೈನಿಕ ಶಾಲೆ ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತಿದ್ದ ಕಾರಣ ಸೈನ್ಯಕ್ಕೆ ಸೇರಲು ನಮ್ಮನ್ನೆಲ್ಲಾ ಹುರಿದುಂಬಿಸುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ಗಮನಹರಿಸುತ್ತಿದ್ದ ಕಾಳೆ ಸರ್ ಸ್ಪೇಷಲ್ ಕ್ಲಾಸ್ ತೆಗೆದುಕೊಂಡು ಪಾಠ ಮಾಡುತ್ತಾ ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣವಾಗಿದ್ದರು. ಹೀಗಿದ್ದಾಗ ಕಾಳೆ ಸರ್ ನಿವೃತ್ತಿಯಾದರು ಎಂದು ಕಾಳೆ ಸರ್ ಜತೆಗಿದ್ದ ಕ್ಷಣಗಳನ್ನು ಬಿಚ್ಚಿಟ್ಟರು. ಕಾಳೆ ಸರ್ ನನ್ನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು, ನಿವೃತ್ತಿಯ ನಂತರವೂ…ಬಿಜಾಪುರದ ಸೈನಿಕ ಶಾಲೆಯ ಎಲ್ಲಾ ಮಾಜಿ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದರು. ಎಸ್‌ಎಸ್ಬಿಜೆ (ಖಖಆಒ) ಹಳೆ ವಿದ್ಯಾರ್ಥಿಗಳ ಅಸೋಸಿಯೇಷನ್ ಎಂಬ ಸಂಘ ,(ಅ್ಜಛಿಛಿಠಿ ಅ್ಝ್ಠಞ್ಞಜಿ ಅಟ್ಚಜಿಠಿಜಿಟ್ಞ) ಸ್ಥಾಪಿಸಿದರು. ರಿಟೆರ್ಡ್ ನಂತರವೂ ರೋಲ್ ನಂಬರ್ ಸಮೇತ ಹೆಸರಿನಿಂದ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನೆನಪಿಸಿಕೊಳ್ಳುವುದು ಕಾಳೆ ಸರ್ ವಿಶೇಷ. ಅಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ಗಮನವಹಿಸುತ್ತಿದ್ದ ಕಾಳೆ ಸರ್ ಎಲ್ಲರನ್ನು ಕೌನ್ಸೆಲಿಂಗ್ ಮಾಡುತ್ತಿದ್ದರು. ಯಾರಿಗಾದರೂ ಕೆಲಸ ಸಿಗಲಿಲ್ಲವೆಂದರೇ ಅವರೇ ಮಧ್ಯಪ್ರವೇಶಿಸಿ ಸೂಕ್ತ ಪೋಸ್ಟಿಂಗ್ ಪಡೆಯಲು ಸಹಾಯ ಮಾಡುತ್ತಿದ್ದ ಗುಣ ಅವರದ್ದು.

ಕಾಳೆ ಸರ್ ಪಾಠ ಅಂದ್ರೆ ಮತ್ತೆಮತ್ತೆ ಕೇಳಬೇಕೆನ್ನಿಸುತ್ತಿತ್ತು. ಹಿಂದಿಯಲ್ಲಿ ಪರಿಣತರಾಗಿದ್ದ ಅವರು ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಮರಾಠಿಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಎಲ್ಲ ಭಾಷೆಯೂ ಅವರಿಗೆ ಅಚ್ಚು ಮೆಚ್ಚಿನದ್ದಾಗಿತ್ತು. ಪ್ರತಿ ವಿದ್ಯಾರ್ಥಿಯಲ್ಲೂ ಉತ್ತಮವಾದದ್ದನ್ನು ಹೊರತರಲು ಯಾವಾಗಲೂ ಶ್ರಮಿಸುತ್ತಿದ್ದರು. ಅವರ ನಿಷ್ಠುರ ಹೊರಮೈ ಹೊರತಾಗಿಯೂ, ಅವರು ಚಿನ್ನದ ಹೃದಯವನ್ನು ಹೊಂದಿದ್ದರು, ಯಾವಾಗಲೂ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಿದ್ದರು.

ಕಾಳೆ ಸರ್ ಅಜೀತ್ ಅಲ್ಯೂಮಿನಿಯಂ ಸಂಸ್ಥಾಪಕರಾಗಿದ್ದು, ಅವರ ಬದ್ಧತೆಯು ಶಾಲೆಯ ಗೋಡೆಗಳನ್ನು ಮೀರಿ ವಿಸ್ತರಿಸಿತು. ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಹಿನ್ನೆಲೆಯನ್ನು ವೈಯಕ್ತಿಕವಾಗಿ ತಿಳಿದುಕೊಂಡು ಶಾಲೆ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಅವರು ದಣಿವರಿಯಿಲ್ಲದೇ ಪ್ರಯಾಣಿಸಿದರು. ಗೋಪಾಲಕೃಷ್ಣ ಕಾಳೆ ಅವರ ಪರಂಪರೆಯು ಶಿಸ್ತು, ಸಮರ್ಪಣಾ ಮನೋಭಾವ ಮತ್ತು ವಿದ್ಯಾರ್ಥಿಗಳ ಉನ್ನತಿಗಾಗಿ ಆಳವಾದ ಬದ್ಧತೆಹೊಂದಿದ್ದು, ಸೈನಿಕ ಶಾಲೆ ಬಿಜಾಪುರದ ಇತಿಹಾಸದಲ್ಲಿ ಅವರನ್ನು ಗೌರವಾನ್ವಿತ ವ್ಯಕ್ತಿಯಾಗಿ ಮಾಡಿದೆ. ಇಷ್ಟೇಲ್ಲ ಮಾಡಿದ ಕಾಳೆ ಸರ್ ನಮ್ಮೊಂದಿಗೆ ಇಂದು ಇಲ್ಲ. ಆದರೆ ಅವರ ಜತೆಗಿದ್ದ ಕ್ಷಣಗಳು ಎಂದಿಗೂ ಮನದಲ್ಲಿ ಅಚ್ಚಾಗಿ ಉಳಿದಿದೆ ಎನ್ನುತ್ತಾರೆ ದಾವಣಗೆರೆ ಜನರ ಮನದಲ್ಲಿ ಉಳಿದಿರುವ ಡಾಕ್ಟರ್ ಚಂದ್ರಶೇಖರ್ ಸುಂಕದ್.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!