ಮಾರ್ಚ್ 28 ರಿಂದ ಏಪ್ರಿಲ್ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಮತ್ತು ವಿಕೆಂಡ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ 1 ರಿಂದ 9 ನೇ ತರಗತಿಗಳಿಗೆ ಎರಡು ವಾರಗಳ ಕಾಲ ಆಫ್ ಲೈನ್ ಕ್ಲಾಸ್ ಗೆ ನಿಷೇಧಿಸಿ, ಆನ್ ಲೈನ್ ಕ್ಲಾಸ್ ನಡೆಸಲು ಆದೇಶ ನೀಡಿದೆ.
ಇನ್ನೊಂದೆಡೆ ಮೂರನೇ ಕೊರೊನಾ ಅಲೆ ನಡುವೆ SSLC ಪರೀಕ್ಷೆ ಎಂದು ನಡೆಯಲಿದೆಯೋ ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರ ಗೊಂದಲಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಉತ್ತರ ನೀಡಿದ್ದು, ಮಂಡಳಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಾರ್ಚ್ 28ರಿಂದ ಏಪ್ರಿಲ್ ವರೆಗೆ ಪರೀಕ್ಷೆಗಳು ನಡೆಯಲಿವೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಮಾರ್ಚ್ 28ರಂದು ಕನ್ನಡ(ಪ್ರಥಮ ಭಾಷೆ), ಮಾರ್ಚ್ 30ರಂದು ಇಂಗ್ಲೀಷ್(ದ್ವೀತಿಯ ಭಾಷೆ) ಏಪ್ರಿಲ್ 1ರಿಂದ ಕೋರ್ ಸಬ್ಜಕ್ಟ್ ಇರಲಿದೆ, ಏರ್ಪಿಲ್ 4ರಂದು ಗಣಿತ ಹಾಗೂ ಸಮಾಜಶಾಸ್ತ್ರ, ಏಪ್ರಿಲ್ 6ರಂದು ಸಮಾಜ ವಿಜ್ಞಾನ, ಏಪ್ರಿಲ್ 8ರಂದು ತೃತೀಯ ಭಾಷೆ ಹಿಂದಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಮಂಡಳಿ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಏಪ್ರಿಲ್ 11ರಂದು ವಿಜ್ಞಾನ, ರಾಜ್ಯ ಶಾಸ್ತ್ರ, ಕನ್ನಡ ಶಾಸ್ತ್ರೀಯ/ ಹಿಂದೂಸ್ಥಾನ ಸಂಗೀತದ ಪರೀಕ್ಷೆ ರಲಿದೆ. ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, ಈ ಸಂಬಂಧ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಜನವರಿ 6ರಿಂದ 14ವರೆಗೆ ಕಾಲಾವಕಾಶ ನೀಡಿದೆ.