ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ.! ಜೆಡಿಎಸ್ 20 ದಾಟಲು ನಾವು ಬಿಡುವುದಿಲ್ಲ – ಕಟೀಲ್

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ.! ಜೆಡಿಎಸ್ 20 ದಾಟಲು ನಾವು ಬಿಡುವುದಿಲ್ಲ - ಕಟೀಲ್
ದಾವಣಗೆರೆ : ಈ ಬಾರಿ ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 60 ರಿಂದ 70 ಸೀಟ್ ಗಳನ್ನೂ ದಾಟುವುದಿಲ್ಲ. ಜೆಡಿಎಸ್ 20 ದಾಟಲು ನಾವು ಬಿಡುವುದಿಲ್ಲ. ಆದ್ದರಿಂದ ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
ಖಂಡಿತ ನಾವು 150 ಸೀಟ್ ಗಳನ್ನ ದಾಟುತ್ತೇವೆ. ಅದಕ್ಕೆ ದಾವಣಗೆರೆಯ ಮಹಾಸಂಗಮ ಕಾರ್ಯಕ್ರಮವೇ ಪ್ರೇರಣೆಯಾಗಲಿದೆ.
ಕಾಂಗ್ರೆಸ್ ಪ್ರಜಾ ಧ್ವನಿಯ ಧ್ವನಿ ಕೇಳುತ್ತದಾ? ಹಾಸನದಲ್ಲಿಯೇ ಪಂಚರತ್ನ ಕಾರ್ಯಕ್ರಮ ಏನಾಗಿದೆ? ಎಂದು ಪ್ರಶ್ನಿಸಿದ ಕಟೀಲ್, ಜೆಡಿಎಸ್‌ನ ಪಂಚರತ್ನ ವಾಹನದ ಇಂಜಿನ್ ಸೀಜ್ ಆಗಿದೆ ಎಂದು ಲೇವಡಿ ಮಾಡಿದರು.
ಮೋದಿ ಬಂದಾಗ ದಾವಣಗೆರೆಯಲ್ಲಿ ರೋಡ್ ಶೋ ಮಾಡೇ ಮಾಡುತ್ತೇವೆ. ಮಹಾಸಂಗಮ ಕಾರ್ಯಕ್ರಮಕ್ಕೆ 10 ಲಕ್ಷ ಜನರನ್ನ ಸೇರಿಸುವಂತೆ ಸೂಚಿಸಿದರು. ಮಹಾಸಂಗಮ ಯಶಸ್ಸಿಗೆ ನಾವೆಲ್ಲ ಕೆಲಸ ಮಾಡಬೇಕು ಎಂದು ಹೇಳಿದರು.