ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ನಷ್ಟು ಅವಸರ ನಮಗಿಲ್ಲ- ನಳೀನ್ ಕುಮಾರ್ ಕಟೀಲ್

ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ನಷ್ಟು ಅವಸರ ನಮಗಿಲ್ಲ- ನಳೀನ್ ಕುಮಾರ್ ಕಟೀಲ್

ದಾವಣಗೆರೆ : ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ನವರಷ್ಟು ಅವಸರ ನಮಗೇನಿಲ್ಲ. ಅದನ್ನ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಮಾಡತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲವನ್ನt ನೋಡಿಕೊಂಡು ಪಾರ್ಲಿಮೆಂಟರ್ ಬೋರ್ಡ್ ಟಿಕೆಟ್ ನೀಡುವ ಕುರಿತು ನಿಶ್ಚಯ ಮಾಡುತ್ತದೆ ಎಂದರು.
ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೆ ರಾದ್ಧಾಂತವೇ ನಡೆಯತ್ತೆ. ಕಾಂಗ್ರೆಸ್ ನಲ್ಲಿ ಒಳ ಜಗಳ ಶುರುವಾಗತ್ತೆ, ಬೀದಿ ಕಾಳಗ ಆಗತ್ತೆ, ಹೋರಾಟಗಳು ನಡೆಯುತ್ತವೆ,ಕಣ್ಣೀರು ಬೀಳತ್ತೆ, ಕಲ್ಲುಗಳು ಉರುಳುತ್ತವೆ ಎಂದ ಅವರು, ಅವರು ಪಟ್ಟಿ ಬಿಡುಗಡೆ ಮಾಡಲಿ ನಮಗೆ ಸಂತೋಷವೇ ಎಂದರು.
ಬಿಜೆಪಿಯಲ್ಲಿ ಪೂರ್ಣ ಪ್ರಮಾಣದ ಶಕ್ತಿಯಿರುವ ಅಭ್ಯರ್ಥಿಗಳಿದ್ದಾರೆ. ಬೇರೆಯವರನ್ನ ಸೆಳೆಯುವ ಅಗತ್ಯವಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರದ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಇದನ್ನೂ ಸಹ ಬೋರ್ಡ್ ನಿರ್ಧಾರ ಕೈಗೊಳ್ಳತ್ತದೆ ಎಂದರು.
ಕಾಂಗ್ರೆಸ್ ನವರು ಏನಾದರೂ ಹೇಳಬಹುದು. ಆದರೆ ರಾಜ್ಯದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ. ಮೋದಿ ಪ್ರಧಾನಿಯಾದ ಬಳಿಕ ದೇಶದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಸಮಯ ಸಿಕ್ಕಾಗ ಎಲ್ಲ ರಾಜ್ಯಗಳಿಗೂ ಹೋಗುತ್ತಾರೆ. ಎಲ್ಲ ಜಿಲ್ಲೆಗಳಿಗೂ ಹೋಗುತ್ತಾರೆ ಎಂದರು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡುತ್ತಾರೆ ಆದರೆ ಕಾಂಗ್ರೆಸ್ ಪ್ರಧಾನ ಮಂತ್ರಿಗಳು 60-70 ವರ್ಷ ಆಳಿದರು ಇವರು ಯಾಕೆ ಬರಲಿಲ್ಲ? ನಮ್ಮ ಜಿಲ್ಲೆಗಳಲ್ಲಿ ನೆರೆ ಬಂದಾಗ ಸಿದ್ದರಾಮಣ್ಣ ಯಾಕೆ ಬರಲಿಲ್ಲ ಎಂದು ಕಟೀಲ್ ಪ್ರಶ್ನಿಸಿದರು.
ಯಡಿಯೂರಪ್ಪ ನಮ್ಮ ಪರಮೋಚ್ಚ ನಾಯಕ ಅವರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಈ ಚುನಾವಣೆಯೂ ಬಿ ಎಸ್ ವೈ ಮಾರ್ಗದರ್ಶನದಲ್ಲೇ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!