ಯುದ್ಧ ವಿಮಾನ ಕಣ್ಮರೆ: ಪತನಗೊಂಡಿರುವ ಶಂಕೆ

ತೈಪೆ(ರಾಯಿಟರ್ಸ್‌): ದ್ವೀಪರಾಷ್ಟ್ರ ತೈವಾನ್‌ನ ವಾಯುಪಡೆ ಮಂಗಳವಾರ ಸಮುದ್ರದಲ್ಲಿ ನಡೆಸಿದ ತರಬೇತಿ ಕಾರ್ಯಾಚರಣೆಯೊಂದರ ವೇಳೆ ಸಂಭವಿಸಿದ ಅಪಘಾತದಲ್ಲಿ ಎಫ್‌-16 ಯುದ್ಧ ವಿಮಾನವೊಂದು ಕಣ್ಮರೆಯಾಗಿದ್ದು, ಯುದ್ಧವಿಮಾನವು ಪತನಗೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ.

ವಿಮಾನ ಮತ್ತು ಪೈಲಟ್‌ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಸರ್ಕಾರ ಹೇಳಿದೆ. ತೈವಾನ್‌ ಯುದ್ಧ ವಿಮಾನಗಳಲ್ಲಿ ಎಫ್‌-16ವಿ ಅತ್ಯಾಧುನಿಕ ಮಾದರಿಯದ್ದಾಗಿದೆ. ದಕ್ಷಿಣ ತೈವಾನ್‌ನ ಚಿಯಾಯಿ ವಾಯುನೆಲೆಯಿಂದ ಹಾರಿದ ಈ ವಿಮಾನ ನಂತರ ರೆಡಾರ್‌ ಪರದೆಯಿಂದ ಕಣ್ಮರೆಯಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!