ಕೋವಿಡ್ ಭೀತಿಗೆ ಹೊಸ ಐಡಿಯಾ ಕೊಟ್ಟ ದೆಹಲಿ ಸಿಎಂ ಕೇಜ್ರಿವಾಲ್!

ದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ‘ಹೋಮ್ ಐಸೋಲೇಷನ್ ಸೋಂಕಿತರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂಥದೊಂದು ಹೊಸ ಐಡಿಯಾ ಹೇಳಿದ್ದಾರೆ.

ಹೌದು ಹೋಂ ಐಸೊಲೇಷನ್ ನಲ್ಲಿರುವವರಿಗೆ ಯೋಗ ಕ್ಲಾಸ್ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕೇಜ್ರಿವಾಲ್, ಭಾರತದ ಯಾವುದೇ ರಾಜ್ಯ ಕೈಗೆತ್ತಿಕೊಳ್ಳದ ಕಾರ್ಯಕ್ರಮ ದೆಹಲಿ ಸರ್ಕಾರ ಕೈಗೆತ್ತಿಕೊಂಡಿದೆ. ಹೋಮ್ ಐಸುಲೇಷನ್ ಸೋಂಕಿತರ ಇಮ್ಯೂನಿಟಿ ಹೆಚ್ಚಿಸಲು, ಮಾನಸಿಕವಾಗಿ ಸದೃಢಗೊಳಿಸಲು ಯೋಗ ಥೆರಪಿ ನೀಡಲು ಸರ್ಕಾರ ನಿರ್ಧರಿಸಿದೆ. ತಜ್ಞರು ಕೂಡ ಈ ಬಗ್ಗೆ ಸಲಹೆ ನೀಡಿದ್ದಾರೆ ಎಂದರು.

ಆನ್ ಲೈನ್ ಮೂಲಕ ಕ್ಲಾಸ್ : ಹೊಸ ಐಡಿಯಾ ಕುರಿತು ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ಬುಧವಾರ ಯೋಗ ಕ್ಲಾಸ್ ಗಳಿಗೆ ಗೆ ಚಾಲನೆ ನೀಡಲಾಗುತ್ತೆ. ನಿತ್ಯ ಎಂಟು ಯೋಗ ತರಗತಿಗಳು ನಡೆಯಲಿವೆ. ಬೆಳಗ್ಗೆ ನಾಲ್ಕು, ಸಂಜೆ ಮೂರು ತರಗತಿಗಳು ನಡೆಯಲಿವೆ. 40 ಸಾವಿರ ಯೋಗ ತರಬೇತುದಾರರನ್ನು ಸಿದ್ದಗೊಳಿಸಲಾಗಿದೆ. 15 ಮಂದಿ ಸೋಂಕಿತರಿಗೆ ಒಬ್ಬ ತರಬೇತುದಾರ ಯೋಗ ಹೇಳಿಕೊಡಲಿದ್ದಾರೆ. ಕೊರೊನಾ, ಓಮಿಕ್ರಾನ್ ಸೋಂಕು ನಿಯಂತ್ರಣಕ್ಕೆ ಸಂಬಂಧಪಟ್ಟ ಆಸನಗಳನ್ನು ತರಬೇತುದಾರರು ಹೇಳಿಕೊಡಲಿದ್ದಾರೆ. ಆನ್ ಲೈನ್ ಮೂಲಕ ಕ್ಲಾಸ್ ನಡೆಯಲಿದ್ದು, ಪ್ರತಿ ಸೋಂಕಿತರಿಗೂ ಲಿಂಕ್ ಕಳುಹಿಸಲಾಗುತ್ತೆ ಅಂಥ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.

ಭಾರತದಲ್ಲಿ ಕೋವಿಡ್‌ 3ನೇ ಅಲೆಯು ಜನವರಿ ಅಂತ್ಯದ ವೇಳೆಗೆ ಗರಿಷ್ಠಕ್ಕೆ ತಲುಪಬಹುದು. ಆಗ ದೇಶದಲ್ಲಿ ನಿತ್ಯ 4-8 ಲಕ್ಷ ಕೇಸ್‌ ದೃಢಪಡಬಹುದು ಎಂದು ಐಐಟಿ ಕಾನ್ಪುರ ಪ್ರೊ. ಮನೀಂದ್ರ ಅಗರ್ವಾಲ್‌ ನೇತೃತ್ವದ ಸೂತ್ರ ಮಾಡೆಲ್‌ ಆಧರಿತ ಅಧ್ಯಯನ ತಿಳಿಸಿದೆ. ಕೋವಿಡ್‌ ಪತ್ತೆಯಾಗುತ್ತಿರುವ ಪ್ರಮಾಣ ಮತ್ತು ಸೋಂಕು ವ್ಯಾಪಿಸುತ್ತಿರುವ ದರ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. 3ನೇ ಅಲೆ ಕುರಿತ ಸ್ಪಷ್ಟ ಚಿತ್ರಣ ಇನ್ನು ಮೂರ್ನಾಲ್ಕು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಅಗರ್ವಾಲ್‌ ತಿಳಿಸಿದ್ದಾರೆ.

ಇದೇ ವೇಳೆ ಮುಂಬೈ ಮತ್ತು ದೆಹಲಿ ಈಗಾಗಲೇ 3ನೇ ಅಲೆಗೆ ಸಾಕ್ಷಿಯಾಗಿವೆ. ಉಭಯ ಮಹಾನಗರಗಳಲ್ಲೂ ಜನವರಿ ಮಧ್ಯದಲ್ಲಿ ಅಂದರೆ ಮುಂದಿನ ವಾರವೇ ಸೋಂಕು ಗರಿಷ್ಠಕ್ಕೆ ತಲುಪಬಹುದು. ದೆಹಲಿಯಲ್ಲಿ ನಿತ್ಯ 50000-60,000 ಕೇಸ್‌ ದಾಖಲಾದರೆ, ಮುಂಬೈನಲ್ಲಿ 30,000 ಪ್ರಕರಣ ಪತ್ತೆಯಾಗಲಿವೆ ಎಂದು ಅಂದಾಜಿಸಿದ್ದಾರೆ.

ಸಾಂಕ್ರಾಮಿಕವೊಂದು ವೇಗವಾಗಿ ಏರಿಕೆಯಾಗಿ ಅದೇ ವೇಗದಲ್ಲಿ ಇಳಿಕೆಯಾಗುತ್ತದೆ. ಈ ಬಾರಿಯೂ ಅದೇ ರೀತಿ ಸೋಂಕು ಇಳಿಮುಖವಾಗಲಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಮಾದರಿಯನ್ನು ನಾವೆಲ್ಲಾ ನೋಡುತ್ತಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!