ಹಳೇಬಾತಿ ಆಂಜನೇಯ ಸ್ವಾಮಿಯ ಪರಮ ಭಕ್ತರಾದ ಡಿಸಿ ಮಹಾಂತೇಶ್ ಬೀಳಗಿ ಕೃಪೆಯಿಂದ ಗ್ರಾಮದ ಜನರಿಗೆ ಬಸ್ ಸೌಲಭ್ಯ ಸಿಗುತ್ತಾ.!?
ದಾವಣಗೆರೆ: ದಾವಣಗೆರೆ ನಗರದಿಂದ ಕೇವಲ 8-10 ಕಿಲೋ ಮೀಟರ್ ದೂರದಲ್ಲಿರುವ ಹಳೇಬಾತಿ ಗ್ರಾಮ, ಸಾರಿಗೆ ಸೌಲಭ್ಯ ವಂಚಿತವಾಗಿರುವ ಗ್ರಾಮ ಎಂದರೆ ತಪ್ಪಾಗಲಾರದು.
ಹಳೇಬಾತಿ ಆಂಜನೇಯಸ್ವಾಮಿ ದೇವಸ್ಥಾನ ಎಂದರೆ ತುಂಬಾ ಪ್ರಸಿದ್ಧವಾದ ದೇವಸ್ಥಾನವಾಗಿದ್ದು, ಪ್ರತಿ ಶನಿವಾರ ಈ ದೇವಸ್ಥಾನಕ್ಕೆ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಭಕ್ತರೆಲ್ಲರೂ ಅವರವರ ಶಕ್ತಿ ಗನುಸಾರವಾಗಿ ವಾಹನಗಳಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದಾರೆ, ಇನ್ನು ಕೆಲವರು ದೊಡ್ಡಬಾತಿ ಗ್ರಾಮದವರೆಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ಮೂರು ಕಿಲೋಮೀಟರ್ ಹಳೇಬಾತಿ ಗ್ರಾಮಕ್ಕೆ ಕೆಲವರು ನಡೆದುಕೊಂಡು ಬಂದರೆ ಕೆಲವರು ಆಟೋಗಳಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ, ನಮ್ಮ ರಾಜ್ಯದ ಆರ್ಥಿಕ ಸ್ಥಿತಿ ಜಿಲ್ಲಾ ಕೇಂದ್ರದಿಂದ ಹತ್ತು ಕಿಲೋಮೀಟರ್ ದೂರವಿರುವ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲಾಗದಷ್ಟು ದುಸ್ತರವಾಗಿದೆಯೇ.!? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ ಎನ್ನಬಹುದಾಗಿದೆ.
ಸ್ವತಃ ದಾವಣಗೆರೆ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ್ ಬೀಳಗಿಯವರು, ಹಳೇಬಾತಿ ಆಂಜನೇಯಸ್ವಾಮಿಯ ಪರಮ ಭಕ್ತರಾಗಿದ್ದು, ಖುದ್ದಾಗಿ ಅವರೇ ಈ ವಿಷಯವನ್ನು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದರು, ಗ್ರಾಮದ ಜನರು, ಕೆಲಸಕ್ಕಾಗಿ ನಗರಕ್ಕೆ ಬರುವ ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳು, ಶ್ರಿ ಮಹಾಂತೇಶ್ ಬೀಳಗಿ ರವರ ಕೃಪೆಯಿಂದಲಾದರೂ ನಮ್ಮ ಹಳೇ ಬಾತಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ದೊರೆಯಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ.! ಜಿಲ್ಲಾಧಿಕಾರಿಗಳು ತಾವು ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಸಂದರ್ಭದಲ್ಲಿಯೇ ನಮ್ಮ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಒದಗಿಸಿದರೆ, ಕೊನೆಯವರೆಗೂ ಅವರ ಹೆಸರು ಶಾಶ್ವತವಾಗಿ ನಮ್ಮ ಗ್ರಾಮಸ್ಥರ ಮನದಲ್ಲಿ ಉಳಿಯುತ್ತದೆ ಎಂಬ ಭಾವನೆಯಲ್ಲಿದ್ದಾರೆ, ಮಾನ್ಯ ಜಿಲ್ಲಾಧಿಕಾರಿಗಳು ಇದರ ಕಡೆ ಗಮನಹರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.!
ಕೆ.ಎಲ್.ಹರೀಶ್ ಬಸಾಪುರ.
www.garuda voice.com 9740365719