ಪ್ರಧಾನಿ ಹೇಳಿಕೆ ರೈತರನ್ನು ಅವಮಾನಿಸಿದಂತೆಯೋ.? ಅಥವಾ ಬಹು ಕೋಟಿಯ ಬುಲೆಟ್ ಪ್ರೂಫ್ ಕಾರ್ ಗುಣಮಟ್ಟವನ್ನ ಸಂಶಯ ಪಟ್ಟಂತೆಯೋ.? – ಕೆ.ಎಲ್.ಹರೀಶ್ ಬಸಾಪುರ
ದಾವಣಗೆರೆ: ಮೊನ್ನೆ ಮಾನ್ಯ ಪ್ರಧಾನ ಮಂತ್ರಿಗಳು ಪಂಜಾಬ್ ಭೇಟಿಯಲ್ಲಿ ನಡೆದಂಥ ಘಟನೆ ತೀರಾ ವಿಷಾದನೀಯ ಆದರೆ ಅದರ ಬಗ್ಗೆ ಪ್ರಧಾನಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ ಎನ್ನಲಾದ ಅಂತಹ ಹೇಳಿಕೆ ತೀರಾ ನಾಚಿಕೆಗೇಡಿನ ವಿಷಯ ಎಂದರೆ ತಪ್ಪಾಗಲಾರದು, ಈ ಹೇಳಿಕೆಯಿಂದ ಎಸ್ ಜಿ ಪಿ ಭದ್ರತೆಯ ಬಗ್ಗೆಯೇ ಅನುಮಾನ ಪ್ರಾರಂಭವಾಗುತ್ತಿದ್ದು ಹಾಗೂ ಅಣು ಬಾಂಬ್ ದಾಳಿಯಿಂದಲು ಕೂಡ ರಕ್ಷಿಸಿಕೊಳ್ಳಬಹುದು ಎನ್ನುತ್ತಿದ್ದ 12 ಕೋಟಿಯ ಬುಲೆಟ್ ಪ್ರೂಫ್ ಕಾರ ಗುಣಮಟ್ಟದ ಬಗ್ಗೆಯೂ ಯೋಚಿಸುವಂತಾಗಿದೆ.
ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಮಂತ್ರಿಗಳು ರಾಜ್ಯಗಳಿಗೆ ಭೇಟಿ ನೀಡುವಾಗ ಒಂದು ವಾರದ ಮೊದಲೇ ಎಸ್ ಜಿ ಪಿ ತಂಡ ರಾಜ್ಯಕ್ಕೆ ಬಂದು ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಂಡು, ರೂಟ್ ಮ್ಯಾಪ್ ಇನ್ನಿತರ ವ್ಯವಸ್ಥೆಗಳ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಕಾರ್ಯಕ್ರಮ ನಿಗದಿ ಕೊಳ್ಳುವುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆದರೆ ಈಗ ಇವರು ಹೇಳುತ್ತಿರುವ ಹೊಸ ಕಥೆ ರಾಜಕೀಯ ಪ್ರೇರಿತವೋ ಅಥವಾ ಮುಂದಿನ ಚುನಾವಣೆ ತಯಾರಿಯ ಮೊದಲ ಅಧ್ಯಾಯ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹರಡಿದೆ.
ಅದು ಏನೇ ಇರಲಿ 15 ತಿಂಗಳು ರೈತರನ್ನು ಬಿಸಿಲು-ಮಳೆ ಎನ್ನದೆ ರಸ್ತೆಯಲ್ಲಿ ನಿಲ್ಲಿಸಿದ ವ್ಯಕ್ತಿಯನ್ನು, ಅತ್ಯಂತ ಭದ್ರತೆಯ ನಡುವೆಯೂ ತಡೆದು ನಿಲ್ಲಿಸಿದರೆಂದರೆ ರೈತರ ಶಕ್ತಿ ದೇಶದ ಶಕ್ತಿ ಎನ್ನುತ್ತಿದ್ದ ನಮ್ಮ ಹಿರಿಯರ ಮಾತು ನೆನಪಾಗುತ್ತದೆ.