ಸೋಡ ಕದಿಯಲು ಹೋದ ಮಹಿಳೆ ದಿಢೀರ್ ಶ್ರೀಮಂತೆಯಾದ ಮಹಿಳೆ

The woman who went to steal soda is a woman who suddenly became rich
ಶ್ರೀಮಂತರಾಗಲು ಏನೇನೆಲ್ಲ ಹರಸಾಹಸ ಪಡುವ ಈ ಕಾಲದಲ್ಲಿ ಯಾವುದೇ ತಕರಾರಿಲ್ಲದೇ ಅಂಗಡಿಗೆ ಸೋಡ ಕುಡಿಯಲೆಂದು ಹೋದ ಮಹಿಳೆ ಏಕಾಏಕಿ ಶ್ರೀಮಂತೆಯಾಗಿದ್ದು ಹೇಗೆ ಎಂಬುದರ ಕುರಿತು ಹಲವರು ತಲೆಕೆಡಿಸಿಕೊಂಡಿದ್ದುಂಟು.
ಅದೃಷ್ಟ ಎಂಬುದು ಯಾರಿಗೆ ಹೇಗೆ ವಕಲಾಯಿಸಿಕೊಳ್ಳುತ್ತದೆ ಎಂಬುದು ಗೊತ್ತೆಯಾಗುವುದಿಲ್ಲ ನೋಡಿ. ಅಂಗಡಿಗೆ ಸೋಡ ಕುಡಿಯಲೆಂದು ಹೋದ ಈ ಮಹಿಳೆ ಹಿಂದಿರುಗುವಾಗ 84 ಲಕ್ಷ ರೂ. ಗಳೊಂದಿಗೆ ಗೆದ್ದು ಬರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಈ ಮಹಿಳೆ ಅಮೆರಿಕದ ವರ್ಜೀನಿಯಾ ನಿವಾಸಿ, ಆಕೆ ಸೋಡಾ ಕುಡಿಯಲು ಹೋಗಿ ಶ್ರೀಮಂತೆಯಾಗಿ ಹಿಂದುರುಗಿದ್ದಾಳೆ. ಮಹಿಳೆ ಹೆಸರು ಜಾನೆಟ್ ಬೈನ್ , ಸೋಡಾ ಕುಡಿಯಲು ಹೋಗಿದ್ದವಳು ಅಲ್ಲೇ ಕಂಡ ಲಾಟರಿ ಟಿಕೆಟ್ ಖರೀದಿಸಿದಳು.
ತನ್ನ ಟಿಕೆಟ್‌ನಲ್ಲಿ 100,000 ಡಾಲರ್ ಅಂದರೆ 83 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ತಿಳಿದ ತಕ್ಷಣ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಟಿಕೆಟ್ ಸಂಖ್ಯೆಯನ್ನು ನೋಡಿದ ನಂತರ ಅವಳು ಆಶ್ಚರ್ಯಚಕಿತರಾದರು. ಬಳಿಕ ತುಂಬಾ ಸಂತೋಷಪಟ್ಟಿದ್ದಾರೆ.
ಲಾಟರಿಯಿಂದ ಇಷ್ಟು ಮೊತ್ತ ಗೆದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ, ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ವಾಸಿಸುತ್ತಿರುವ ಗ್ಯಾರಿ ಲೇಸಿ ಕೂಡ ಇದೇ ರೀತಿಯಲ್ಲಿ 5 ಮಿಲಿಯನ್ ಡಾಲರ್ ಗೆದ್ದಿದ್ದಾರೆ.
ಅವರು ಸಿಗರೇಟ್ ಖರೀದಿಸಲು ಅಂಗಡಿಗೆ ಹೋಗಿದ್ದರು ಮತ್ತು ಪವರ್‌ಬಾಲ್ ಲಾಟರಿ ಟಿಕೆಟ್ ಖರೀದಿಸುವ ಆಲೋಚನೆ ಅವರಿಗೆ ಬಂದಿತು. ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಹಾಲು ಮತ್ತು ಬ್ರೆಡ್ ಖರೀದಿಸಲು ಹೋಗಿದ್ದರು, ಅಲ್ಲಿ ಅವರು ಲಾಟರಿ ಟಿಕೆಟ್‌ನಲ್ಲಿ ಲಕ್ಷಗಳ ಬಹುಮಾನವನ್ನು ಗೆದ್ದಿದ್ದಾರೆ. ವ್ಯಕ್ತಿಯೊಬ್ಬರು ಕಚೇರಿಗೆ ಹೋಗುವಾಗ ಟಿಕೆಟ್ ಖರೀದಿಸಿ 1 ಕೋಟಿ 65 ಲಕ್ಷ ರೂ.ಗಳ ಲಾಟರಿ ಗೆದ್ದಿದ್ದಾರೆ.