ಬಿಜಾಪುರದಲ್ಲಿ ಒಂದು ನಾಟಕ ಕಂಪನಿ ಇದೆ.! ಅದು ಯಾವಾಗ ಯಾರಿಗೆ ಬಯ್ಯುತ್ತೆ ಅಂತಾ ಗೊತ್ತಾಗಲ್ಲ.! ಸಚಿವ ನಿರಾಣಿ ವ್ಯಂಗ್ಯ

ದಾವಣಗೆರೆ: ಹರಿಹರದಲ್ಲಿ ನಡೆದ ಹರಜಾತ್ರೆಯಲ್ಲಿ ಯತ್ನಾಳ ಗೌಡ್ರರನ್ನ ಮುರುಗೇಶ್ ನಿರಾಣಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ತಮ್ಮ ಭಾಷಣದಲ್ಲಿ ಹೆಸರು ಹೇಳದೆ ಯತ್ನಾಳ ಗೌಡ್ರರನ್ನ ನಾಲಾಯಕ್ ಎಂದು ಸಚಿವ ಮುರುಗೇಶ್ ನಿರಾಣಿ ಕರೆದರು. ಬಿಜಾಪುರ ನಾಟಕ‌ ಕಂಪನಿ ಯಾವಾಗ ಯಾರಿಗೆ ಬೈಯತ್ತೆ ಎಂದು ಗೊತ್ತಾಗಲ್ಲ.
ಇದೊಂದು ಕೆಟ್ಟ ಹುಳು, ಕೆಟ್ಟ ಸಂಪ್ರದಾಯ ಎಂದು ತರಾಟೆಗೆ ತೆಗೆದುಕೊಂಡರು.

ಹರಜಾತ್ರೆಗೆ ಸೇರಿದ್ದ ಸಮಾಜದ‌ ಮುಂದೆ ಯತ್ನಾಳ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಇಂದು ನಡೆದ ಹರಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ರು.

ಬಿಜಾಪುರದಲ್ಲಿ ಒಂದು ನಾಟಕ ಕಂಪನಿ ಇದೆ. ಒಂದು ಹತ್ತಿರದ ನಾಟಕ ಕಂಪನಿ ಮತ್ತೊಂದು ದೂರದ ನಾಟಕ‌ ಕಂಪನಿ.
ಎಸ್ಟಿಯವರು ಸ್ಬಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡಿ ಮೀಸಲಾತಿ ಹೆಚ್ವಿಸಿಕೊಂಡರು.
ಆದ್ರೆ ನಮ್ಮಲ್ಲಿ ಬಿಜಾಪುರ ಮತ್ತು ಕೂಡಲಸಂಗಮದವರು ಡೊಂಬರಾಟ ಮಾಡಿದರು.
ಹೀಗಾಗಿ ಅವರು ಗೊಂದಲವುಂಟು ಮಾಡಿದರು.

ನಾವು ನಮ್ಮ ಮಂತ್ರಿ ಮಂಡಲ ಮತ್ತು ಸಿಎಂ ರನ್ನ ನಂಬಿಕೊಂಡಿದ್ದೇವೆ. ಮುಂದೆ ನಾವು 2ಎ ಮೀಸಲಾತಿ ಪಡೆದೆ ಪಡೆಯುತ್ತೇವೆ. 2013 ರಲ್ಲಿ ನೀವೇ ಮಂತ್ರಿಯಾಗಿದ್ರಲ್ಲ ಆಗ ಯಾಕೆ ಹೋರಾಟ ಮಾಡಲಿಲ್ಲ.
ಆಗ ಎಲ್ಲಿತ್ತು ನಿಮ್ಮ‌ ಹೋರಾಟ ಎಂದು ಕೂಡಲಸಂಗಮ ಸ್ವಾಮೀಜಿ ಹಾಗು ಯತ್ನಾಳ ವಿರುದ್ದ ಹರಿಹಾಯ್ದರು.

Leave a Reply

Your email address will not be published. Required fields are marked *

error: Content is protected !!